Namma Metro: ವೈಟ್‌ಫೀಲ್ಡ್‌ ನಿಲ್ದಾಣದಿಂದ ಮೆಟ್ರೋ ವಿಸ್ತರಣೆ-ಕಾರಣ ಏನು ಹಾಗೂ ವೆಚ್ಚ ಎಷ್ಟು ಕೋಟಿ?

ಬೆಂಗಳೂರು, ಮಾರ್ಚ್‌, 04: ರಾಜ್ಯ ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಹಾಗೆಯೇ ನಮ್ಮ ಮೆಟ್ರೋ ಕೂಡ ಅಷ್ಟೇ ಜನಮನ್ನಣೆ ಪಡೆಯುವ ಮೂಲಕ ವಿಸ್ತರಣೆ ಆಗುತ್ತಲೇ ಇದೆ. ಹಾಗೆಯೇ ವೈಟ್‌ಫೀಲ್ಡ್‌ ಮಾರ್ಗದ ಮೆಟ್ರೋ ಮಾರ್ಗವನ್ನು ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಹಾಗಾದರೆ ಇದಕ್ಕೆ ಪ್ರಮುಖ ಕಾರಣ ಏನು ಹಾಗೂ ಇದಕ್ಕೆ ತಗಲುವ ವೆಚ್ಚ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ಸುಗಮ ಸಂಚಾರದ ಉದ್ದೇಶದಿಂದ ಈಗಿನ ವೈಟ್‌ಫೀಲ್ಡ್‌ ನಿಲ್ದಾಣದಿಂದ ಮೆಟ್ರೋ ಮಾರ್ಗವನ್ನು 588 ಮೀಟರ್‌ನಷ್ಟು ವಿಸ್ತರಣೆ ಮಾಡಲು ಬೆಂಗಳೂರು ಮೆಟ್ರೋ ರೈಲ್ವೆ ನಿಗಮ (ಬಿಎಂಆರ್‌ಸಿಎಲ್‌) ನಿರ್ಧರಿಸಿದೆ. ಈ ಬಗ್ಗೆ ಕಾಮಗಾರಿ ನಡೆಸಲು ಇತ್ತೀಚೆಗಷ್ಟೇ ₹48.62 ಕೋಟಿ ರೂಪಾಯಿ ಟೆಂಡರ್‌ ಅನ್ನು ಎಂ.ವೆಂಕಟರಾವ್‌ ಇನ್ಫ್ರಾ ಪ್ರೊಜೆಕ್ಟ್‌ ಪ್ರೈ.ಲಿ.ಕಂಪನಿಗೆ ನೀಡಲಾಗಿದ್ದು, ಶೀಘ್ರವೇ ಕಾರ್ಯಾದೇಶ ನೀಡುವ ಸಾಧ್ಯತೆ ಇದೆ.

Namma Metro extension from Whitefield what is the reason

ಇದರಿಂದ ಸದ್ಯ ಪೂರ್ವದ ವೈಟ್‌ಫೀಲ್ಡ್-ಪಶ್ಚಿಮದ ಚಲ್ಲಘಟ್ಟದವರೆಗೆ 43.49 ಕಿಲೋ ಮೀಟರ್‌ ಇರುವ ನೇರಳೆ ಮಾರ್ಗ ವೈಟ್‌ಫೀಲ್ಡ್‌ನ ಬೆಳತ್ತೂರು ಕಾಲೋನಿವರೆಗೆ ಕೊಂಚ ವಿಸ್ತರಣೆಯಾಗಲಿದೆ. ಮಾರ್ಗ ವಿಸ್ತರಣೆಯಾಗುತ್ತಿದೆ ವಿನಃ ಹೊಸದಾಗಿ ಕೊನೆಯ ಹಂತದಲ್ಲಿ ಯಾವುದೇ ನಿಲ್ದಾಣವನ್ನು ನಿರ್ಮಾಣ ಮಾಡಲಾಗುತ್ತಿಲ್ಲ. ಪ್ರಯಾಣಿಕರಿಗೆ ಇದರಿಂದ ನೇರವಾಗಿ ಯಾವುದೇ ಪ್ರಯೋಜನ ಇಲ್ಲ.

ಇನ್ನು ರೈಲುಗಳು ನಿಲ್ದಾಣದಿಂದ ಮುಂದಕ್ಕೆ ಹೋಗಿ ಹಿಂದಿರುಗಿ ಬರಲು ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಮತ್ತು ವೈಟ್‌ಫೀಲ್ಡ್‌ ಡಿಪೋದ 3ನೇ ಲೈನ್‌ ಅನ್ನು 28 ಮೀಟರ್‌ ವಿಸ್ತರಣೆ ಮಾಡುವ ಉದ್ದೇಶದಿಂದ ಒಟ್ಟಾರೆ ಮಾರ್ಗವನ್ನು ವಿಸ್ತರಣೆ ಮಾಡಲಾಗುತ್ತಿದೆ. ಕಳೆದ ಅಕ್ಟೋಬರ್‌ನಲ್ಲಿ ಬಿಎಂಆರ್‌ಸಿಎಲ್ ಈ ಟೆಂಡರ್‌ ಕರೆದಿತ್ತು. ಮುಂದಿನ ಒಂದೂವರೆ ವರ್ಷದಲ್ಲಿ ಈ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+