Namma Metro: ಹೊಸ ಮಾರ್ಗದಲ್ಲಿ ಸೆಪ್ಟಂಬರ್‌ನಲ್ಲಿ ಮೆಟ್ರೋ ಸಂಚಾರ?

ಬೆಂಗಳೂರು, ಆಗಸ್ಟ್ 06: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಪ್ರಯಾಣಿಕರು ಓಡಾಡಲು ಕಾತರರಾಗಿದ್ದಾರೆ. ಈ ಮಾರ್ಗದಲ್ಲಿ ರೈಲು ಕಾರ್ಯಾಚರಣೆ ಆರಂಭಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಇದಕ್ಕಿಂತ ಮೊದಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಈ ವಿಸ್ತೃತ ಹೊಸ ಮಾರ್ಗದಲ್ಲಿ ರೈಲು ಕಾರ್ಯಾಚರಣೆ ನಡೆಸಲಿದೆ.

ಹೌದು, ನಮ್ಮ ಮೆಟ್ರೋ ರೇಷ್ಮೆ ಮಂಡಳಿ ಮತ್ತು ನಾಗಸಂದ್ರವರೆಗಿನ ಹಸಿರು ಮಾರ್ಗವು 3.7 ಕಿಲೋ ಮೀಟರ್ ವಿಸ್ತರಣೆಗೊಂಡಿದೆ. ಈ ಮಾರ್ಗದಲ್ಲಿ ಇಂದು ಆಗಸ್ಟ್ 06 ಮಂಗಳವಾರದಿಂದ ಪ್ರಾಯೋಗಿಕ ಸಂಚಾರ ಆರಂಭಿಸಿದೆ. ಹಾಗಾದರೆ ಪ್ರಾಯೋಗಿಕ ಸಂಚಾರ ಯಾವಾಗ ಅಂತ್ಯವಾಗಲಿದೆ?, ವಾಣಿಜ್ಯ ಕಾರ್ಯಾಚರಣೆ ಆರಂಭ ಯಾವಾಗ? ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

Namma Metro Extended Nagasandra-Madavara Green Line will Open for Public on September

ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ನಾಗಸಂದ್ರದಿಂದ ಮಾದಾವರ ವರೆಗೆ ವಿಸ್ತರಣೆ ಆಗಿರುವ ಹಸಿರು ಮಾರ್ಗದಲ್ಲಿ ಇಂದಿನಿಂದ ಪ್ರಾಯೋಗಿಕ ಸಂಚಾರ ಆರಂಭಿಸಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಒಂದು ತಿಂಗಳು ಕಾಲಾವಕಾಶ ಹಿಡಿಯಲಿದೆ.

ಆಯುಕ್ತ ತಪಾಸಣೆ ಮಾಡಿ ಅನುಮತಿ

ಸದ್ಯ ಆಗಸ್ಟ್ 6ರಂದು ಆರಂಭವಾಗಿರುವ ಪ್ರಾಯೋಗಿಕ ಸಂಚಾರ ಸೆಪ್ಟಂಬರ್ ಮೊದಲ ವಾರದ ಹೊತ್ತಿಗೆ ಪೂರ್ಣಗೊಳ್ಳಲಿದೆ. ಇದಾದ ನಂತರ ಮೆಟ್ರೋ ಆಯುಕ್ತರು ಸಿಗ್ನಲಿಂಗ್, ಟ್ರ್ಯಾಕ್ ಸೇರಿದಂತೆ ಪ್ರತಿಯೊಂದನ್ನು ತಪಾಸಣೆ ನಡೆಸಲಿದ್ದಾರೆ. ಇದಾಗಿ ಸಾರ್ವಜನಿಕರಿಗೆ ಈ ವಿಸ್ತೃತ ಮಾರ್ಗವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲು ಅನುಮತಿ ನೀಡಲಾಗುತ್ತಿದೆ.

ಇದೆಲ್ಲ ಪ್ರಕ್ರಿಯೆಯು ಸೆಪ್ಟಂಬರ್ ಎರಡು ಇಲ್ಲವೇ ಮೂರನೇ ವಾರ ಮುಗಿದರೆ, ಅದೇ ತಿಂಗಳ ಅಂತ್ಯಕ್ಕೆ ಇಲ್ಲವೇ ಅಕ್ಟೋಬರ್ ಆರಂಭದಲ್ಲಿ ಸಾರ್ವಜನಿಕರು ಮಾದಾವರವರೆಗೂ ಓಡಾಡಬಹುದಾಗಿದೆ. ಈ ಮಾರ್ಗವು ನೆಲಮಂಗಲ, ತುಮಕೂರು ಭಾಗದಿಂದ ಬರುವವರಿಗೆ ಮತ್ತು ಇಲ್ಲಿಗೆ ಹೋಗುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಸ್ತರಣೆ ಮಾರ್ಗಕ್ಕೆ ತಗುಲಿದ್ದು ರೂ.298 ಕೋಟಿ

ವಿಸ್ತರಣೆಗೊಂಡ 3.7 ಕಿಲೋ ಮೀಟರ್ ನಾಗಸಂದ್ರ-ಮಾದಾವರವರೆಗಿನ ಮಾರ್ಗದ ಕಾಮಗಾರಿಗೆ ಬರೋಬ್ಬರಿ 298 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಸದ್ಯ ಕಾಮಗಾರಿ ಮುಗಿದು ಇಂದಿನಿಂದ ಒಂದು ತಿಂಗಳು ವಿವಿಧ ರೀತಿಯ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಈ ಮಾರ್ಗದ ನಂತರ ಡಿಸೆಂಬರ್‌ ನಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆ ಇದೆ.

ಅಪ್ಡೇಟ್ ಮಾಹಿತಿಯ ಪ್ರಕಾರ, ಕಳೆದ ಎರಡು ದಿನಗಳಿಂದ ಉತ್ತಮವಾಗಿ ರೈಲುಗಳು ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿದೆ. ಈ ಪ್ರಕ್ರಿಯೆ ಭರದಿಂದ ಸಾಗಿದೆ. ಆದಷ್ಟು ಶೀಘ್ರವೇ ಕೊನೆ ಹಂತದ ಪ್ರಕ್ರಿಯೆಗಳೂ ಪೂರ್ಣಗೊಂಡು, ವಾಣಿಜ್ಯ ಕಾರ್ಯಾಚರಣೆ ಆರಂಭಿಸಲಿದ್ದೇವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+