ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ 2ನೇ ಹಂತ : ಸುರಂಗ ಕಾಮಗಾರಿ ಶೀಘ್ರ ಆರಂಭ

|
Google Oneindia Kannada News

ಬೆಂಗಳೂರು, ಜೂನ್ 27 : ನಮ್ಮ ಮೆಟ್ರೋ 2ನೇ ಹಂತದ ಯೋಜನೆಯ ಸುರಂಗ ಮಾರ್ಗ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. 2023ರ ವೇಳೆಗೆ ಸುರಂಗ ಮಾರ್ಗ ಕಾಮಗಾರಿ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ.

ನಾಗವಾರ-ಗೊಟ್ಟಿಗೆರೆ ತನಕ 25 ಕಿ.ಮೀ.ಮಾರ್ಗದ ನಮ್ಮ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಸುಮಾರು 11,500 ಕೋಟಿ ರೂ.ಗಳ ವೆಚ್ಚದ ಯೋಜನೆ ಇದಾಗಿದೆ. ಈ ಮಾರ್ಗದಲ್ಲಿ ಡೈರಿ ಸರ್ಕಲ್‌ನಿಂದ ನಾಗವಾರ ತನಕ 13.79 ಕಿ.ಮೀ. ಸುರಂಗ ಮಾರ್ಗ ಇರಲಿದೆ.

ಆರ್‌ವಿ ರಸ್ತೆಯ ಮೆಟ್ರೋ ನಿಲ್ದಾಣದ ಒಂದು ಪ್ರವೇಶದ್ವಾರ ಕೆಡವಲು ಸಿದ್ಧತೆಆರ್‌ವಿ ರಸ್ತೆಯ ಮೆಟ್ರೋ ನಿಲ್ದಾಣದ ಒಂದು ಪ್ರವೇಶದ್ವಾರ ಕೆಡವಲು ಸಿದ್ಧತೆ

ಸುರಂಗ ಮಾರ್ಗ ನಿರ್ಮಾಣ ಮಾಡಲು ಬಿಎಂಆರ್‌ಸಿಎಲ್ 4 ಪ್ಯಾಕೇಜ್‌ಗಳ ಟೆಂಡರ್‌ ಕರೆದಿತ್ತು. 3 ಮತ್ತು 4ನೇ ಪ್ಯಾಕೇಜ್ ಟೆಂಡರ್ ಎಲ್&ಟಿ ಕಂಪನಿ ಪಾಲಾಗಿದೆ. ಎಂ.ಜಿ.ರಸ್ತೆ ಮತ್ತು ಶಿವಾಜಿನಗರದಲ್ಲಿ ನೆಲದಡಿ ನಿಲ್ದಾಣ ನಿರ್ಮಾಣವಾಗಲಿದೆ.

ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಿಧಾನನಕ್ಕೆ ಕಾರಣಗಳುಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಿಧಾನನಕ್ಕೆ ಕಾರಣಗಳು

Namma Metro 2nd phase : Work on tunnel to begin soon

ವೆಲ್ಲಾರ ಜಂಕ್ಷನ್‌ನಿಂದ ಪಾಟರಿ ಟೌನ್ ತನಕ ಸುರಂಗ ಮಾರ್ಗದ ಲೈನ್ ಹಾದು ಹೋಗಲಿದ್ದು, ಎಲ್&ಟಿ ಕಂಪನಿ ಮಾರ್ಗದ ಮೇಲಿರುವ ಕಟ್ಟಡಗಳ ಸಮೀಕ್ಷೆ ಕಾರ್ಯವನ್ನು ಆರಂಭಿಸಿದೆ. ಶಿವಾಜಿನಗರ ನಿಲ್ದಾಣದಿಂದ ಸುರಂಗ ಮಾರ್ಗ ಕೊರೆಯುವ ಬೋರಿಂಗ್ ಮೆಷಿನ್ ಕೆಲಸ ಆರಂಭಿಸಲಿದೆ.

ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ, 1 ವರ್ಷ ಬಂದ್, ಇಲ್ಲಿದೆ ಕಾರಣಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ, 1 ವರ್ಷ ಬಂದ್, ಇಲ್ಲಿದೆ ಕಾರಣ

ಎಂ.ಜಿ.ರಸ್ತೆಯಲ್ಲಿ ನೆಲದಡಿ ನಿಲ್ದಾಣ ನಿರ್ಮಾಣ ಮಾಡಲು ಕಾಮರಾಜ ರಸ್ತೆಯಲ್ಲಿ ಈಗಾಗಲೇ ವಾಹನ ಸಂಚಾರ ಬಂದ್ ಮಾಡಲಾಗಿದೆ. 2ನೇ ಹಂತದ ಮೆಟ್ರೋ ಯೋಜನೆಯಲ್ಲಿ ಒಟ್ಟು 12 ನಿಲ್ದಾಣಗಳು ನೆಲದಡಿ ನಿರ್ಮಾಣಗೊಳ್ಳಲಿವೆ.

13.79 ಕಿ.ಮೀ. ಸುರಂಗ ಮಾರ್ಗ ನಿರ್ಮಾಣದ ಟೆಂಡರ್‌ ಅನ್ನು 4 ಪ್ಯಾಕೇಜ್‌ಗಳಾಗಿ ವಿಭಾಗ ಮಾಡಲಾಗಿದೆ. ಒಟ್ಟು 9 ಬೋರಿಂಗ್ ಮೆಷಿನ್ ಸುರಂಗ ಮಾರ್ಗ ಕೊರೆಯಲು ಬಳಕೆಯಾಗಲಿವೆ.

English summary
Bengaluru Namma Metro phase 2 tunnel work to began soon. L&T bagged the tender of underground line between Vellara Junction and Nagavara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X