Get Updates
Get notified of breaking news, exclusive insights, and must-see stories!

ನಮ್ಮ ಕನ್ನಡ ಹಾಡುಗಳು- ವಿಶಿಷ್ಟ ರಸಸಂಜೆಗೆ ಬನ್ನಿ

ಹಳೆಯ ಹಿಂದಿ ಚಲನಚಿತ್ರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ ಮ್ಯೂಸಿಕಲ್ ಪೀಸ್ ಆಫ಼್ ಮೈಂಡ್ ಸಂಗೀತ ಸಂಸ್ಥೆ ಮೊದಲನೆಯ ಬಾರಿಗೆ ಹಳೆಯ ಕನ್ನಡ ಚಲನಚಿತ್ರ ಗೀತೆಗಳ ಕಾರ್ಯಕ್ರಮ, 'ನಮ್ಮ ಕನ್ನಡ ಹಾಡುಗಳು' ಕೇಳಿ ಆನಂದಿಸಿ

ಹಳೆಯ ಹಿಂದಿ ಚಲನಚಿತ್ರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ ಮ್ಯೂಸಿಕಲ್ ಪೀಸ್ ಆಫ಼್ ಮೈಂಡ್ ಸಂಗೀತ ಸಂಸ್ಥೆ ಮೊದಲನೆಯ ಬಾರಿಗೆ ಹಳೆಯ ಕನ್ನಡ ಚಲನಚಿತ್ರ ಗೀತೆಗಳ ಕಾರ್ಯಕ್ರಮ, 'ನಮ್ಮ ಕನ್ನಡ ಹಾಡುಗಳು' ಮೇ 12 ನೇ ತಾರೀಖು ಸಂಜೆ 6.30 ಇಂದ 9.30 ವರೆಗೆ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಆಯೋಜಿಸಿದ್ದಾರೆ.

ನಮ್ಮ ಕನ್ನಡ ಹಾಡುಗಾರರಾದ ಹೆಚ್.ಎಸ್.ಶ್ರೀನಿವಾಸ ಮೂರ್ತಿ, ಅಜಯ್ ವಾರಿಯರ್, ರಾಜೀವ್ ಅಗಳಿ, ನಾಗಚಂದ್ರಿಕ ಭಟ್, ಸಮನ್ವಿತ ಭಟ್ ಹಾಗು ರುಮಾನ ಅಹಮೆದ್ ಅಂದಿನ ದಿನ 'ಬೆಸುಗೆ ಬೆಸುಗೆ..', 'ನಿನ್ನ ನೀನು ಮರೆತರೇನು ಸುಖವಿದೆ..', ಎಂದೆಂದು ನಿನ್ನನು ಮರೆತು', 'ಕಂಬದ ಮ್ಯಾಲಿನ ಗೊಂಬೆಯ' ಹಾಡುಗಳನ್ನು ಹಾಗು ಮುಖ್ಯವಾಗಿ ಪಿ.ಬಿ. ಶ್ರೀನಿವಾಸ್, ಎಸ್.ಜಾನಕಿ, ಪಿ.ಸುಶಿಲ, ಯೆಸುದಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ 'ರೆಟ್ರೊ' ಹಾಡುಗಳನ್ನು ಹಾಡಲಿದ್ದಾರೆ.

Namma Kannada Haadugalu Chowdiah Memorial Hall

"ಶಮ್ಮಿ ಕಪೂರ್ ಜೊತೆ ಅವರ ಹಾಡುಗಳದ್ದೇ ಕಾರ್ಯಕ್ರಮವನ್ನು ಮಾಡಬೇಕೆಂಬ ಆಸೆಯಿಂದ 2008 ರಲ್ಲಿ ಅವರನ್ನು ಭೇಟಿ ಮಾಡಲು ಮುಂಬೈ ಗೆ ಹೊರಟು ಅವರನ್ನು ಭೇಟಿಯೂ ಕೂಡ ಮಾಡಿದೆ. ಆಗ ಅವರ ಆರೋಗ್ಯ ಅಷ್ಟಾಗಿ ಸರಿ ಇಲ್ಲದ್ದ ಕಾರಣ ಅವರು ಡಯಾಲಿಸಿಸ್ ಮೇಲಿದ್ದರು. ನನ್ನ ಬಹಳ ಚೆನ್ನಾಗಿ ಮಾತನಾಡಿಸಿ ಕಾರ್ಯಕ್ರಮ ಮಾಡೋಣ ಎಂದು ಒಪ್ಪಿಕೊಂಡೂ ಬಿಟ್ಟರು.

ನಾನು ಆ ಹುಮ್ಮಸ್ಸಿನಿಂದಲೇ ಬೆಂಗಳೂರಿಗೆ ಹಿಂತಿರುಗಿ ಎಲ್ಲಾ ತಯಾರಿ ಮಾಡಿಕೊಳ್ಳುವಾಗ ಮುಂಬೈ ನಲ್ಲಿ ಆದ ದಾಳಿಯ ಬಗ್ಗೆ ತಿಳಿಯಿತು. ಎಲ್ಲಾ ಕಡೆ ಪೋಲಿಸ್ ನವರು ಬಿಗಿ ಬಂದೋಬಸ್ತು ಮಾಡಿದ್ದರು.

ಕಾರ್ಯಕ್ರಮಕ್ಕೆ ಸಭಾಂಗಣ, ವಿಮಾನದ ಟಿಕೆಟ್ಸ್, ಶಮ್ಮಿ ಕಪೂರ್ ಅವರ ಆರೋಗ್ಯ ಸರಿ ಇಲ್ಲದ್ದ ಕಾರಣ ಅವರಿಗೆ ಇಲ್ಲಿ ಡಾಕ್ಟರ್ ನ ವ್ಯವಸ್ಥೆ, ಅವರು ಉಳಿದುಕೊಳ್ಳಲು ಪಂಚತಾರ ಹೋಟೆಲ್ ನಲ್ಲಿ ಕೋಣೆಗಳನ್ನೂ ಬುಕ್ ಮಾಡಿದ್ದೆ. ಎಲ್ಲದನ್ನೂ ರದ್ದು ಮಾಡಲಾಯಿತು. ಆಗ ನನಗೆ ನಷ್ಟ ಆದರೂ ನನಗೆ ಶಮ್ಮಿ ಕಪೂರ್ ಅವರ ಜೊತೆ ಕಾರ್ಯಕ್ರಮ ಮಾಡಲಾಗಲಿಲ್ಲ ಎಂಬ ಬೇಸರ ಹಾಗು ನಿರಾಶೆ ಬಹಳ ಆಯಿತು.

ಆಗ ಶಮ್ಮಿ ಕಪೂರ್ ಅವರು ನನಗೊಂದು ಈ ಮೇಲ್ ಕೂಡ ಬರೆದರು. 'ನಿರಾಶರಾಗದಿರಿ ರಾಜ್ ಜೀ, ನೀವು ಮುಂದೆ ಇಂಥದ್ದೇ ಕಾರ್ಯಕ್ರಮ ಮಾಡಿದಾಗ ನನಗೆ ತಿಳಿಸಿ, ನಾನು ಖಂಡಿತವಾಗಿ ಬರುತ್ತೇನೆ' ಎಂದು. ಆದರೆ ನನಗೆ ಆ ಅವಕಾಶ ನನಗೆ ದೊರೆಯಲೇ ಇಲ್ಲ," ಎನ್ನುತ್ತಾರೆ ಮಾನೇಜ್ಮೆಂಟ್ ಕನ್ಸಲ್ಟೆಂಟ್ ಹಾಗು ಮ್ಯೂಸಿಕಲ್ ಪೀಸ್ ಆಫ಼್ ಕ್ಲಬ್ ಸಂಸ್ಥೆಯ ಸ್ಥಾಪಕರು, ಬಿ.ಜಿ.ರಾಜ್ ಅವರು.

ಮ್ಯೂಸಿಕಲ್ ಪೀಸ್ ಆಫ಼್ ಮೈಂಡ್ ಮೇ 12, 2017, ಶುಕ್ರವಾರ, ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಸಂಜೆ 6.30 ಇಂದ 9.30 ವರೆಗು ನಡೆಯುತ್ತದೆ. ಟಿಕೇಟುಗಳನ್ನು ಬುಕ್ ಮೈ ಶೋ ನಲ್ಲಿ ಬುಕ್ ಮಾಡ ಬಹುದು (95389 22211). ಮಲ್ಲೇಶ್ವರಂ ನ ವೀಣ ಸ್ಟೋರ್ಸ್ (94484 30405), ಜಯನಗರ ನಾಲಕ್ನೆಯ ಬಡಾವಣೆಯ ಕಾಲಿಪ್ಸೊ (080 4121 0889), ಆಯೋನ್ ಆಪ್ಟಿಕ್ ಅಂಗಡಿಯಲ್ಲೂ (ವಿಜಯಾ ಬ್ಯಾಂಕ್, ಬಿಟಿಎಂ ಲೇ ಔಟ್ ಎರಡನೆಯ ಹಂತ, ಎಸ್.ಜಿ ಪಾಳ್ಯ, ಬೊಮ್ಮನಹಳ್ಳಿ, ಗರ್ವೆ ಭಾವಿ ಪಾಳ್ಯ) ಟಿಕೇಟ್ ಗಳು ದೊರೆಯುತ್ತವೆ. ಮತ್ತಷ್ಟು ಮಾಹಿತಿಗಾಗಿ 78290 13431/ 95389 22211 ಅನ್ನು ಸಂಪರ್ಕಿಸಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+