ಡಿ.ಕೆ ಶಿವಕುಮಾರ್ 3 "ಕೆ" ಹೇಳಿಕೆ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ "ನಾಲ್ವಡಿ ಕೃಷ್ಣರಾಜ ಒಡೆಯರ್" ಕೊಡುಗೆ ವೈರಲ್!
ಬೆಂಗಳೂರಿಗರು ಹಾಗೂ ಕನ್ನಡಿಗರು ನಾಲ್ವಡಿ ಕೃಷ್ಣರಾಜ ಒಡೆಯರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಈಚೆಗೆ ಕೊಟ್ಟಿರುವ ಹೇಳಿಕೆ. ಡಿ.ಕೆ ಶಿವಕುಮಾರ್ ಅವರು ಈಚೆಗೆ ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಕಾರ್ಯಕ್ರಮದಲ್ಲಿ ಕೆಲವೊಂದು ವಿಚಾರಗಳನ್ನು ಮಾತನಾಡಿದ್ದರು. ಇದಾದ ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬೆಂಗಳೂರು ಹಾಗೂ ಕರ್ನಾಟಕಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಸ್ಮರಿಸಲಾಗುತ್ತಿದೆ.
ಈಚೆಗೆ ಮಾತನಾಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ನಾವು 3 'ಕೆ'ಯನ್ನು ಸದಾ ನೆನಪಿಟ್ಟುಕೊಳ್ಳಬೇಕು. ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು, ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರು, ವಿಕಾಸ ಸೌಧ ಹಾಗೂ ಉದ್ಯೋಗ ಸೌಧದ ನಿರ್ಮಾತೃ ಎಸ್.ಎಂ. ಕೃಷ್ಣ ಅವರು. ಇಡೀ ವಿಶ್ವಕ್ಕೆ ಬೆಂಗಳೂರನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದಿದ್ದರು.

"ಕರ್ನಾಟಕ ವಿಶೇಷ" ಎನ್ನುವ ಪುಟದಿಂದ ಸೋಷಿಯಲ್ ಮೀಡಿಯಾದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವಿಶೇಷ ಬರಹವನ್ನು ಹಂಚಿಕೊಳ್ಳಲಾಗಿದೆ.
* ಬೆಂಗಳೂರಿಗೆ ಆಧುನಿಕತೆಯ ದಾರಿತೋರಿದ ಮಹಾನ್ ರಾಜರ್ಷಿ - ನಾಲ್ವಡಿ ಕೃಷ್ಣರಾಜ ಒಡೆಯರರು
* 1910 ರಿಂದ 1940ರವರೆಗೆ ಆಡಳಿತ ನಡೆಸಿದ ಈ ಮೈಸೂರಿನ ಮಹಾರಾಜರು, ಬೆಂಗಳೂರನ್ನು ಜ್ಞಾನ, ವಿಜ್ಞಾನ ಮತ್ತು ಬೆಳಕಿನ ನಗರವನ್ನಾಗಿ ರೂಪಿಸಿದವರು.
ಬೆಂಗಳೂರಿಗೆ ಅವರ ಪ್ರಮುಖ ಕೊಡುಗೆಗಳು:
🔹 Indian Institute of Science (#IISc) ಸ್ಥಾಪನೆ 1909 ಇದು ಬೆಂಗಳೂರನ್ನು ಶೈಕ್ಷಣಿಕ ಮತ್ತು ವಿಜ್ಞಾನ ಕೇಂದ್ರವನ್ನಾಗಿ ರೂಪಿಸಿತು. ಇಂದು ಐಐಎಸ್‌ಸಿ ಭಾರತದಲ್ಲಿನ ಅತ್ಯುತ್ತಮ ವಿಜ್ಞಾನ ಸಂಸ್ಥೆಗಳಲ್ಲಿ ಒಂದಾಗಿದೆ.
🔹 ಶಿವನ ಸಮುದ್ರ ವಿದ್ಯುತ್ ಯೋಜನೆ 1902 : ಇದು ಏಷ್ಯಾದ ಮೊದಲ ಜಲವಿದ್ಯುತ್ ಘಟಕ! ಇದರಿಂದಲೇ ಬೆಂಗಳೂರು ಜಾಗತಿಕವಾಗಿ ಮೊದಲನೆಯದಾಗಿ ವಿದ್ಯುತ್ ಪಡೆದ ನಗರಗಳ ಪೈಕಿ ಒಂದಾಯಿತು. ವಿದ್ಯುತ್‌ನಿಂದಲೇ ದೂರವಾಣಿ, ಟೆಲಿಗ್ರಾಫ್, ಟೈಪಿಂಗ್, ಕಂಪ್ಯೂಟಿಂಗ್ ಇತ್ಯಾದಿ ಕ್ಷೇತ್ರಗಳು ಬೆಳೆದವು. ನಂತರದ ದಶಕಗಳಲ್ಲಿ IT ಕಂಪನಿಗಳ ಪ್ರಾರಂಭಕ್ಕೂ ಇದು ಅಡಿಪಾಯವಾಯಿತು. ಇಂದು ಬೆಂಗಳೂರು IT-BT ಕೇಂದ್ರವಾಗಿ ಬೆಳೆದು ವಿಶ್ವದ ಗಮನ ಸೆಳೆಯುತ್ತಿದೆ.
🔹 ಬೆಂಗಳೂರಿನ ವೈದ್ಯಕೀಯ ಕಾಲೇಜುಗಳು: 1900ರ ದಶಕದಲ್ಲಿ ವೈದ್ಯಕೀಯ ಶಿಕ್ಷಣ ನೀಡಲು ಬೆಂಗಳೂರು ವೈದ್ಯಕೀಯ ಕಾಲೇಜು (BMC) ಸ್ಥಾಪನೆ. ಇಂದಿನ ಕರ್ನಾಟಕದ ಪ್ರಮುಖ ವೈದ್ಯಕೀಯ ಕಾಲೇಜುಗಳಲ್ಲಿ ಒಂದಾಗಿದೆ.
🔹 ಸಾರ್ವಜನಿಕ ಆರೋಗ್ಯಕ್ಕೆ ಬುನಾದಿ ಹಾಕಿದರು: ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆಗೆ ನೂತನ ತಂತ್ರಜ್ಞಾನ ಮತ್ತು ವೈದ್ಯರನ್ನು ಒದಗಿಸಿದರು.
🔹 ಉದ್ಯಮ, ಕಾರ್ಖಾನೆಗಳಿಗೆ ಪ್ರೋತ್ಸಾಹ - ಸೀರೆ, ತಂಬಾಕು, ಇಂಜಿನಿಯರಿಂಗ್ ಕ್ಷೇತ್ರಗಳಿಗೆ ಉತ್ತೇಜನ.
🔹 ಶಿಕ್ಷಣ, ವಿಶ್ವವಿದ್ಯಾನಿಲಯ ಸ್ಥಾಪನೆಯಲ್ಲೂ ಪ್ರಮುಖ ಪಾತ್ರ.
ಇಂದಿನ ಬೆಂಗಳೂರು - ಟೆಕ್ ಹಬ್, ಶಿಕ್ಷಣ ಕೇಂದ್ರ, ವಿಜ್ಞಾನ ನಗರ... ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಬೆಳೆದ ದಾರಿ, ಅವರ ದೃಷ್ಟಿಕೋನದಿಂದಲೇ ಮೊದಲುಗೊಂಡಿತು. ಅವರಿಗೆ ನಮ್ಮ ಕೋಟಿ ಕೋಟಿ ನಮನಗಳು ಎಂದು ಕರ್ನಾಟಕ ವಿಶೇಷ ಪುಟದಿಂದ ಹಂಚಿಕೊಳ್ಳಲಾಗಿತ್ತು. ಈ ಬರಹವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
-
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Bengaluru Second Airport: 5 ತಿಂಗಳಲ್ಲಿ ಬೆಂಗಳೂರು 2ನೇ ವಿಮಾನ ನಿಲ್ದಾಣ ಸ್ಥಳ ಫೈನಲ್: 3 ತಾಣಗಳಿಗೆ ಕಾರ್ಯಸಾಧ್ಯತಾ ವರದಿ -
ಬೆಂಗಳೂರು ಉತ್ತರ: ಮಳೆಗಾಲಕ್ಕೂ ಮುನ್ನ ಮುನ್ನೆಚ್ಚರಿಕೆ ಕ್ರಮ, ರಸ್ತೆ ಅಗಲೀಕರಣ, ಟಿ.ಡಿ.ಆರ್ ಬಗ್ಗೆ ಮಹತ್ವದ ಚರ್ಚೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications