• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರ್. ಆರ್. ನಗರ ಚುನಾವಣೆ; ಮುನಿರಾಜು ಗೌಡ ಜೊತೆ ಚರ್ಚೆ

|

ಬೆಂಗಳೂರು, ಅಕ್ಟೋಬರ್ 13 : ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಈಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಪ್ರಶ್ನೆಯಾಗಿದೆ. ಮುನಿರತ್ನ ಮತ್ತು ಮುನಿರಾಜು ಗೌಡ ಟಿಕೆಟ್ ಆಕಾಂಕ್ಷಿಗಳು.

ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾಗುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುನಿರಾಜು ಗೌಡ ಜೊತೆ ಚರ್ಚೆ ನಡೆಸಿದರು.

ಆರ್. ಆರ್. ನಗರ ಉಪ ಚುನಾವಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ

ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 16 ಕೊನೆ ದಿನ. ಆದರೆ, ಇಲ್ಲಿಯ ತನಕ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಖಚಿತವಾಗಿಲ್ಲ. ಮುನಿರತ್ನ ಮತ್ತು ಮುನಿರಾಜು ಗೌಡ ನಡುವೆ ಟಿಕೆಟ್‌ಗಾಗಿ ಪೈಪೋಟಿ ಇದೆ.

ಆರ್. ಆರ್. ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಚಾರ ಆರಂಭ!

ಮುನಿರತ್ನ ಮತ್ತು ತುಳಸಿ ಮುನಿರಾಜು ಗೌಡ ಬೆಂಬಲಿಗರು ಕ್ಷೇತ್ರದಲ್ಲಿ ಮನೆ ಮನೆ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷ ಅಧಿಕೃತವಾಗಿ ಅಭ್ಯರ್ಥಿ ಯಾರು? ಎಂದು ಇಂದು ಸಂಜೆ ಅಥವ ಬುಧವಾರ ಘೋಷಣೆ ಮಾಡುವ ನಿರೀಕ್ಷೆ ಇದೆ.

ಉಪ ಚುನಾವಣೆಯಲ್ಲಿ ಡಿ. ಕೆ. ರವಿ ಹೆಸರು ಬಳಕೆ; ಕುಸುಮಾ ಸ್ಪಷ್ಟನೆ

ಮುನಿರಾಜು ಗೌಡ ಹೇಳಿಕೆ

ಮುನಿರಾಜು ಗೌಡ ಹೇಳಿಕೆ

ಮಂಗಳವಾರ ಬಿಜೆಪಿ ಕಚೇರಿ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಮುನಿರಾಜು ಗೌಡ, "ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ. ಟಿಕೆಟ್ ಬಗ್ಗೆ ಹೈಕಮಾಂಡ್ ನಾಯಕರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ" ಎಂದು ಹೇಳಿದರು.

ನಾಯಕರು ತೀರ್ಮಾನ ಮಾಡುತ್ತಾರೆ

ನಾಯಕರು ತೀರ್ಮಾನ ಮಾಡುತ್ತಾರೆ

ಮಾಜಿ ಶಾಸಕ ಮುನಿರತ್ನ ಅವರು ಮಾಧ್ಯಮಗಳ ಜೊತೆ ಮಾತನಾಡಿ, "ಟಿಕೆಟ್ ವಿಚಾರ ನಾಯಕರು ತೀರ್ಮಾನ ಮಾಡುತ್ತಾರೆ. ಯಾವುದೇ ಆದರೂ ಕೂಡಾ ಪಕ್ಷ, ನಾಯಕರ ತೀರ್ಮಾನ ಅಂತಿಮ" ಎಂದು ಹೇಳಿದರು.

ಒಗ್ಗಟ್ಟಾಗಿ ಕೆಲಸ ಮಾಡಬೇಕು

ಒಗ್ಗಟ್ಟಾಗಿ ಕೆಲಸ ಮಾಡಬೇಕು

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಅವರು ಮಾತನಾಡಿ, "ಟಿಕೆಟ್ ಯಾರಿಗೆ ಸಿಗಲಿದೆ ಎನ್ನುವುದು ಮುಖ್ಯವಲ್ಲ. ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ" ಎಂದರು.

  Muniratna ಅವರಿಗೆ Ticket ಸಿಗುವ ಮುನ್ನವೇ Supreme Court ಕ್ಲೀನ್ ಚಿಟ್ | Oneindia Kannada
  ಜೆಡಿಎಸ್‌ ಸಹ ಘೋಷಣೆ ಮಾಡಿಲ್ಲ

  ಜೆಡಿಎಸ್‌ ಸಹ ಘೋಷಣೆ ಮಾಡಿಲ್ಲ

  ಆರ್. ಆರ್. ನಗರ ಕ್ಷೇತ್ರದ ಉಪ ಚುನಾವಣೆ ನವೆಂಬರ್ 3ರಂದು ನಡೆಯಲಿದೆ. ಅಕ್ಟೋಬರ್ 16 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಬೇಕಿದೆ. ಕಾಂಗ್ರೆಸ್‌ನಿಂದ ಕುಸುಮಾ ಹನುಮಂತರಾಯಪ್ಪ ಅಭ್ಯರ್ಥಿಯಾಗಿದ್ದಾರೆ.

  English summary
  Karnataka BJP president Nalin Kumar Kateel meeting with Muniraju Gowda in the issue of Rajarajeshwari Nagar by election ticket.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X