ಕಳೆದ ಒಂದು ಗಂಟೆಯಿಂದ ಯಶವಂತಪುರದಿಂದ ನಾಗಸಂದ್ರ ಹಸಿರು ಮಾರ್ಗ ಮೆಟ್ರೋ ಸಂಚಾರ ಸ್ಥಗಿತ!

ಬೆಂಗಳೂರು ಡಿಸೆಂಬರ್ 15: ಕಳೆದ ಒಂದು ಗಂಟೆಯಿಂದ ಬೆಂಗಳೂರಿನಲ್ಲಿ ಹಸಿರು ಮಾರ್ಗ ಮೆಟ್ರೋ ಸಂಚಾರ ಸ್ಥಗಿತಗೊಂಡಿದ್ದು ಪ್ರಯಾಣಿಕರು ಪರಿದಾಡುವಂತಾಗಿದೆ.

ಇಂದು ಬೆಳಿಗ್ಗೆ ಪೀಣ್ಯ ಮೆಟ್ರೋ ನಿಲ್ದಾಣದ ಮೇಟ್ರೋದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದೆ. ಹೀಗಾಗಿ ಯಶವಂತಪುರದಿಂದ ನಾಗಸಂದ್ರ ಕಡೆಗೆ ಸಂಚಾರ ಮಾಡುವ ಹಸಿರು ಮಾರ್ಗ ಮೆಟ್ರೋ ಸ್ಥಗಿತಗೊಂಡಿದೆ. ಎರಡು ಕಡೆಯಿಂದಲೂ ಮೆಟ್ರೋ ಸಂಚಾರ ನಿಲ್ಲಿಸಲಾಗಿದ್ದು ಪ್ರಯಾಣಿಕರು ಮೆಟ್ರೋ ನಿಲ್ದಾಣಕ್ಕೆ ಬಂದು ವಾಪಾಸ್ ಹೋಗುತ್ತಿದ್ದಾರೆ.

Nagasandra Green Line Metro traffic has been suspended for the past one hour

ಇದರಿಂದಾಗಿ ಟೋಕನ್ ಪಡೆದ ಪ್ರಯಾಣಿಕರು ಪರದಾಡುವಂತಾಗಿದೆ. ಈ ಬಗ್ಗೆ ಮಾತನಾಡಿದ ಪ್ರಯಾಣಿಕರೊಬ್ಬರು,'ನಾವು ಈಗಾಗಲೇ ಹಣ ಕೊಟ್ಟು ಟೋಕನ್ ಪಡೆದಿದ್ದವು. ಆದರೆ ಮೆಟ್ರೋ ಬೇಗ ಬರಲಿಲ್ಲ. ಇದರಿಂದಾಗಿ ನಮಗೆ ವಾಪಸ್ ಹೋಗಲೂ ಸಾಧ್ಯವಾಗುತ್ತಿಲ್ಲ. ನನಗೆ ಆಫೀಸ್ ಹೋಗಲು ತಡವಾದ್ದರಿಂದ ಅನಿವಾರ್ಯವಾಗಿ ಟೋಕನ್ ಬಳಸದೆ ಹೊರಬಂದೆ' ಎಂದಿದ್ದಾರೆ.

ಆದರೀಗ ಮೆಟ್ರೋ ಸಂಚಾರ ಸುಗಮಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+