• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ಉಳಿವಿಗಾಗಿ ನಾಗರಿಕರು, ಜನಪ್ರತಿನಿಧಿಗಳ ಒಂದು ಸಂವಾದ

|

ಬೆಂಗಳೂರು, ಸೆಪ್ಟೆಂಬರ್ 22: ಯುನೈಟೆಡ್ ಬೆಂಗಳೂರು ಸಂಸ್ಥೆಯು ಬೆಂಗಳೂರಿನ ಉಳಿವಿಗಾಗಿ 'ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ನಾಗರಿಕರ ಸಂವಾದ' ವನ್ನು ಸೆ.29ರಂದು ಶನಿವಾರ ಇಂದಿರಾನಗರ ಕ್ಲಬ್‌ನಲ್ಲಿ ಹಮ್ಮಿಕೊಂಡಿದೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು, ಗೃಹಿಣಿಯರು ಯಾರು ಬೇಕಾದರೂ ಈ ಸಂವಾದದಲ್ಲಿ ಪಾಲ್ಗೊಳ್ಳಬಹುದಾಗಿದೆ, ಈ ಬೆಂಗಳೂರಿನ ಭವಿಷ್ಯವನ್ನು ಉತ್ತಮವಾಗಿಸಲು ಎಲ್ಲರೂ ಪಾಲುದಾರರು ಎಂದು ಸಂಸ್ಥೆ ಹೇಳಿದೆ.

ಜನವಸತಿ ಪ್ರದೇಶಗಳಲ್ಲಿನ ಅಕ್ರಮ ವಾಣಿಜ್ಯೀಕರಣಸಿಂದ ವಾಯುಮಾಲಿನ್ಯ, ಶಬ್ದ ಮಾಲಿನ್ಯದಿಂದ ನಾಗರಿಕರ ಬದುಕನ್ನು ಕಸಿಯುತ್ತಿದೆಯೇ? ಬಾರ್ ಮತ್ತು ರಾತ್ರಿ ಕ್ಲಬ್ ಗಳ ಹಾವಳಿಯಿಂದ ಜನರಿಗೆ ತೊಂದರೆಯಾಗುತ್ತಿದೆಯೇ ಹೀಗೆ ವಿವಿಧ ವಿಚಾರಗಳ ಕುರಿತು ಜನಪ್ರತಿನಿಧಿಗಳ ಜೊತೆ ಮುಕ್ತವಾಗಿ ಮಾತನಾಡಬಹುದಾಗಿದೆ. ಸೆ.29ರಂದು ಶನಿವಾರ ಇಂದಿರಾನಗರ ಕ್ಲಬ್‌ನಲ್ಲಿ ಬೆಳಗ್ಗೆ 10 ಗಂಟೆಗೆ ಸಂವಾದ ನಡೆಯಲಿದೆ.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ಇದನ್ನು ಹೊರತುಪಡಿಸಿ ಇನ್ಯಾವುದೇ ತೊಂದರೆಗಳಿದ್ದರೂ ಮುಕ್ತವಾಗಿ ಹಂಚಿಕೊಳ್ಳಬಹುದಾಗಿದೆ, ಇತ್ತೀಚೆಗೆ ಇಂದಿರಾನಗರದಲ್ಲಿ ಅನಧಿಕೃತ ಕ್ಲಬ್‌ಗಳ ಹಾವಳಿಯಿಂದ ಬೇಸತ್ತಿದ್ದ ನಾಗರಿಕರು ಪೊಲೀಸರಿಗೆ ದೂರು ನೀಡಿದ್ದರು ಈ ಹಿನ್ನೆಲೆಯಲ್ಲಿ ಪೊಲೀಸರು ಹಲವು ಕ್ಲಬ್ ಗಳ ಮೇಲೆ ದಾಳಿ ನಡೆಸಿ ಪರವಾನಗಿ ಇಲ್ಲದೆ ಅಕ್ರಮವಾಗಿ ನಡೆಸುತ್ತಿದ್ದ ಕ್ಲಬ್ ಗಳಿ ಬೀಗ ಹಾಕಿತ್ತು.

ಅಷ್ಟೇ ಅಲ್ಲದೆ ಕ್ಲಬ್‌ಗಳಲ್ಲಿ ಲೈವ್ ಬ್ಯಾಂಡ್ ನಿಷೇಧಿಸುವಂತೆ ಕೂಡ ಮನವಿ ಮಾಡಿ ಹಲವು ಕಡೆ ನಾಗರಿಕರು ಪ್ರತಿಭಟನೆ ನಡೆಸಿದ್ದರು. ಯುನೈಟೆಡ್ ಬೆಂಗಳೂರು ಇದೀಗ ನಾಗರಿಕರಿಗೆ ಒಂದು ಅವಕಾಶ ಮಾಡಿಕೊಟ್ಟಿದ್ದು ಏನೇ ಸಮಸ್ಯೆಗಳಿದ್ದರೂ ಜನಪ್ರತಿನಿಧಿಗಳಲ್ಲಿ ಹೇಳಿಕೊಳ್ಳಬಹುದಾಗಿದೆ.

English summary
United Bengaluru is organising Naagarika-Citizens Watch Committee Meeting to Reclaim and Protect Bengaluru in September 29 at Indiranagar club.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X