Namma Metro: ಪ್ರಯಾಣಿಕರೇ ಗಮನಿಸಿ, ಮೈಸೂರು ರಸ್ತೆ- ಕೆಂಗೇರಿ ಮಾರ್ಗದಲ್ಲಿ ನಾಲ್ಕು ದಿನ ಮೆಟ್ರೋ ಸ್ಥಗಿತ
ಬೆಂಗಳೂರು, ಜನವರಿ. 24: ಸಿಲಿಕಾನ್ ಸಿಟಿಯಲ್ಲಿ ಮೆಟ್ರೋ ಒಂಥರಾ ಜೀವನಾಡಿ ಎನ್ನುವಂತಾಗಿದೆ. ಪ್ರತಿದಿನ ಲಕ್ಷಾಂತರ ಜನರು ಮೆಟ್ರೋ ಮೂಲಕ ಪ್ರಯಾಣಿಸುತ್ತಾರೆ. ಮೆಟ್ರೋ ಸಂಚಾರವನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದ್ದು, ಇದೇ ಹಿನ್ನೆಲೆ ಮೈಸೂರು ರಸ್ತೆ ಮತ್ತು ಕೆಂಗೇರಿ ನಡುವಿನ ನಮ್ಮ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕೆಂಗೇರಿಯಿಂದ ಚಲ್ಲಘಟ್ಟ ಮಾರ್ಗದ ವಿಸ್ತರಣೆ ಕಾಮಗಾರಿಗೆ ಸಂಬಂಧಿಸದಂತೆ ಜನವರಿ 27 ರಿಂದ ಕೆಲಸ ಆರಂಭವಾಗುತ್ತಿದ್ದು, ನಾಲ್ಕು ದಿನಗಳ ಕಾಲ ಮೈಸೂರು ರಸ್ತೆ ಮತ್ತು ಕೆಂಗೇರಿ ನಡುವಿನ ನಮ್ಮ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸಿಲ್ಕ್ ಬೋರ್ಡ್- ಏರ್‌ಪೋರ್ಟ್ ಮಾರ್ಗ: 6 ಮೆಟ್ರೋ ನಿಲ್ದಾಣಗಳ ಬಳಿ TOD- ಏನಿದು? ಸೌಲಭ್ಯ, ಅನುಕೂಲಗಳೇನು? ತಿಳಿಯಿರಿ
"ಕೆಂಗೇರಿಯಿಂದ ಚಲ್ಲಘಟ್ಟದವರೆಗಿನ ವಿಸ್ತರಣಾ ಮಾರ್ಗದ ಕಾರ್ಯಾರಂಭಕ್ಕೆ ಸಂಬಂಧಿಸಿದ ನಿಯೋಜಿತ ಕಾಮಗಾರಿಗಳಿಗಾಗಿ, ಮೈಸೂರು ರಸ್ತೆ ಮತ್ತು ಕೆಂಗೇರಿ ನಿಲ್ದಾಣಗಳ ನಡುವೆ ನೇರಳೆ ಮಾರ್ಗದ ಮೆಟ್ರೋ ರೈಲು ಸೇವೆಗಳನ್ನು ದಿನಾಂಕ ಜನವರಿ 27 (ಶುಕ್ರವಾರ) ದಿಂದ ಜನವರಿ 30 (ಸೋಮವಾರ) ದವರೆಗೆ, ಎರಡೂ ದಿನಗಳು ಒಳಗೊಂಡಂತೆ 4 ದಿನಗಳ ಅವಧಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು" ಎಂದು ಬಿಎಂಆರ್‌ಸಿಎಲ್ ಸೂಚನೆ ಹೊರಡಿಸಿದೆ.
ಆದರೆ, ಈ ದಿನಗಳಲ್ಲಿ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಮೆಟ್ರೋ ರೈಲು ಸೇವೆಗಳು ಲಭ್ಯವಿರುತ್ತದೆ. ಬೈಯಪ್ಪನಹಳ್ಳಿಯಿಂದ ಕೆಂಗೇರಿವರೆಗಿನ ಮಾರ್ಗದಲ್ಲಿ ರೈಲು ಸೇವೆಗಳು 31ನೇ ಜನವರಿ 2023 ರಿಂದ ಬೆಳೆಗೆ 5.00 ಗಂಟೆಯಿಂದ ವೇಳಾಪಟ್ಟಿಯ ಪುಕಾರ ಪುನರಾರಂಭಿಸಲಾಗುತ್ತದೆ.

ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವಿನ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಮೆಟ್ರೋ ರೈಲುಗಳು ವೇಳಾಪಟ್ಟಿಯ ಪ್ರಕಾರ ಚಲಿಸಲಿವೆ. ಕೆಂಗೇರಿಯಿಂದ ಚಲ್ಲಘಟ್ಟದವರೆಗಿನ ವಿಸ್ತರಣಾ ಮಾರ್ಗದ ಕಾಮಗಾರಿಗಳನ್ನು ತ್ವರಿತಗೊಳಿಸಲು ಸಹಕರಿಸಬೇಕಾಗಿ ವಿನಂತಿ ಎಂದು ಮೆಟ್ರೋ ಪ್ರಯಾಣಿಕರಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಮನವಿ ಮಾಡಿದ್ದಾರೆ.