ಬಿಜೆಪಿಗೆ ಪ್ರತಾಪ್ ಸಿಂಹ ಅಧಿಕೃತ ಸೇರ್ಪಡೆ
ಬೆಂಗಳೂರು, ಮಾ.14: ಲೋಕಸಭೆ ಚುನಾವಣೆಯಲ್ಲಿ ಮೈಸೂರಿನ ಘೋಷಿತ ಅಭ್ಯರ್ಥಿಯಾಗಿರುವ ಖ್ಯಾತ ಅಂಕಣಕಾರ ಪ್ರತಾಪ್ ಸಿಂಹ ಅವರು ಶುಕ್ರವಾರ ಮಧ್ಯಾಹ್ನ ಅಧಿಕೃತವಾಗಿ ಕಮಲ ಪಕ್ಷದ ಕೈ ಹಿಡಿದಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿ.ಜೆ.ಪಿಯ ಪ್ರಧಾನ ಕಚೇರಿಯಲ್ಲಿ ಪ್ರತಾಪ್ ಸಿಂಹ ಹಾಗೂ ಮಂಡ್ಯದ ಡಾ. ಶಿವಲಿಂಗಯ್ಯ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಇಬ್ಬರನ್ನು ಸ್ವಾಗತಿಸಿದರೆ ಪಕ್ಷದ ಹಿರಿಯ ನಾಯಕರಾದ ಬೆಂಗಳೂರು ದಕ್ಷಿಣ ಕ್ಷೇತ್ರ ಅಭ್ಯರ್ಥಿ ಅನಂತಕುಮಾರ್, ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನರೇಂದ್ರ ಮೋದಿಯನ್ನ ಪ್ರಧಾನಿ ಮಾಡುವ ಆಶಯದೊಂದಿಗೆ ರಾಜಕೀಯಕ್ಕಿಳಿದಿದ್ದೇನೆ. ಹಾಗೆಯೇ, ಹೊಸ ರೀತಿಯ ರಾಜಕಾರಣ ಮಾಡುವ ಆಶಯ ಹೊಂದಿದ್ದೇನೆ ಎಂದು ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದ ನಂತರ ಪ್ರತಾಪ್ ಸಿಂಹ ಅವರು ಹೇಳಿದರು.
ಗುರುವಾರ ಘೋಷಣೆಗೊಂಡ ಬಿಜೆಪಿ ಎರಡನೇ ಪಟ್ಟಿಯಲ್ಲಿ ಮೈಸೂರು ಅಭ್ಯರ್ಥಿ ಪ್ರತಾಪ್ ಸಿಂಹ ಎಂದು ತಿಳಿಯುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಎಚ್ ವಿಜಯ ಶಂಕರ್ ಅವರ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು.
ಕೊನೆಗೆ ಪಕ್ಷದ ಜಿಲ್ಲಾಧ್ಯಕ್ಷಮಾರುತಿ ರಾವ್ ಅವರು ಹಾಗೂ ಹೀಗೂ ಮೈಸೂರು ಜಿಲ್ಲಾ ಬಿಜೆಪಿ ಕಾರ್ಯಕರ್ತರ ಆಕ್ರೋಶವನ್ನು ತಣ್ಣಗೆ ಮಾಡಿದ್ದಾರೆ. ಆದರೆ, ಅಸಮಾಧಾನದ ಹೊಗೆ ನಡುವೆ ಪ್ರತಾಪ್ ಸಿಂಹ ಅವರು ಪ್ರಚಾರ ಕಾರ್ಯ ಆರಂಭಿಸಬೇಕಿದೆ. ಶುಕ್ರವಾರ ಬಿಜೆಪಿ ಕಚೇರಿಗೆ ಕಾಲಿಡುವ ಮುನ್ನ ಆರೆಸ್ಸೆಸ್ ಮುಖಂಡರ ಬೆಂಬಲವನ್ನು ಪ್ರತಾಪ್ ಅವರು ಕೋರಿದ್ದರು ಎಂದು ತಿಳಿದು ಬಂದಿದೆ. ಈ ನಡುವೆ ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ಅವರು ಬಿಜೆಪಿ ಕಚೇರಿಯಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದರು.

ಘೋಷಣೆಗೊಂಡ ಬಿಜೆಪಿ ಎರಡನೇ ಪಟ್ಟಿ
ಗುರುವಾರ ಘೋಷಣೆಗೊಂಡ ಬಿಜೆಪಿ ಎರಡನೇ ಪಟ್ಟಿಯಲ್ಲಿ ಮೈಸೂರು ಅಭ್ಯರ್ಥಿ ಪ್ರತಾಪ್ ಸಿಂಹ ಎಂದು ತಿಳಿಯುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಎಚ್ ವಿಜಯ ಶಂಕರ್ ಅವರ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು.

ಬಿಜೆಪಿ ಕಚೇರಿಗೆ ಕಾಲಿಡುವ ಮುನ್ನ
ಶುಕ್ರವಾರ ಬಿಜೆಪಿ ಕಚೇರಿಗೆ ಕಾಲಿಡುವ ಮುನ್ನ ಆರೆಸ್ಸೆಸ್ ಮುಖಂಡರ ಬೆಂಬಲವನ್ನು ಪ್ರತಾಪ್ ಅವರು ಕೋರಿದ್ದರು ಎಂದು ತಿಳಿದು ಬಂದಿದೆ.

ಅಸಮಾಧಾನದ ಹೊಗೆ ನಡುವೆ ಪ್ರಚಾರ
ಅಸಮಾಧಾನದ ಹೊಗೆ ನಡುವೆ ಪ್ರತಾಪ್ ಸಿಂಹ ಅವರು ಪ್ರಚಾರ ಕಾರ್ಯ ಆರಂಭಿಸಬೇಕಿದೆ.

ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ಎಂಟ್ರಿ
ಬಿಜೆಪಿ ಕಚೇರಿಗೆ ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ಎಂಟ್ರಿ ಕೊಟ್ಟು ಕುತೂಹಲ ಕೆರಳಿಸಿದರು. ಚಿತ್ರನಟಿ ರಕ್ಷಿತಾ ಪ್ರೇಮ್ ಭಾರತೀಯ ಜನತಾ ಪಕ್ಷ ಸೇರಲಿದ್ದಾರೆ. ಅವರ ಪತಿ ಹಾಗೂ ನಿರ್ದೇಶಕ ಪ್ರೇಮ್ ಕೂಡ ಬಿಜೆಪಿ ಸೇರಲಿದ್ದಾರೆ. ರಕ್ಷಿತಾ ಪ್ರೇಮ್ ಅವರು ಜೆಡಿಎಸ್'ಗೆ ಗುಡ್'ಬೈ ಹೇಳಿ ಬಿಜೆಪಿಗೆ ಸೇರಲು ನಿರ್ಧರಿಸಿದ್ದಾರೆ ಎಂಬ ಸುದ್ದಿಗೆ ರೆಕ್ಕೆ ಪುಕ್ಕ ಬಂತು.
|
ಜನಪ್ರಿಯ ಬರಹಗಾರ ಪ್ರತಾಪ್ ಸಿಂಹ
ವಿಜಯ ಕರ್ನಾಟಕ, ಕನ್ನಡಪ್ರಭದಲ್ಲಿ ಬೆತ್ತಲೆ ಜಗತ್ತು ಅಂಕಣದ ಮೂಲಕ ಜನಪ್ರಿಯತೆ ಗಳಿಸಿರುವ ಪ್ರತಾಪ್ ಸಿಂಹ ಅವರು ರಾಜ್ಯದೆಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದಾರೆ. ಮೋದಿ ಅವರ ಬಗ್ಗೆ ಪುಸ್ತಕ ಬರೆದಿರುವ ಪ್ರತಾಪ್ ಅವರು ಮೋದಿ ಅವರನ್ನು ಪ್ರಧಾನಿ ಮಾಡುವುದು ನನ್ನ ಗುರಿ ಎಂದು (@mepratap) ಟ್ವೀಟ್ ಮಾಡಿದ್ದಾರೆ.












Click it and Unblock the Notifications