ಮ್ಯಾನ್ಮಾರ್ ಯುವತಿ ಮೇಲೆ 2 ತಿಂಗಳಿಂದ ಅತ್ಯಾಚಾರ

ಥಣಿಸಂದ್ರ ಮೇಸ್ತ್ರಿಪಾಳ್ಯದಲ್ಲಿ ಶೆಡ್‌ನಲ್ಲಿ ಕೂಡಿಟ್ಟು ಯುವತಿಯನ್ನು ಅತ್ಯಾಚಾರ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯೊಬ್ಬನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹೈದ್ರಾಬಾದ್‌ನ ನಿರಾಶ್ರಿತರ ಶಿಬಿರದಿಂದ ಎರಡು ವರ್ಷದ ಹಿಂದೆ ಪರಾರಿಯಾಗಿ ಬೆಂಗಳೂರಿಗೆ ಬಂದಿದ್ದ ಯುವತಿ ಕುಟುಂಬ ಪ್ಲಾಸ್ಟಿಕ್ ಆಯುವ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ನಗರದಲ್ಲಿ ಇದೇ ವೃತ್ತಿ ಮಾಡಿಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಮೊಹಮ್ಮದ್ ಬಬೂಲ್(35)ನ ಪರಿಚಯವಾಗಿದೆ.
ಯುವತಿಯ ಪೋಷಕರು ಮತ್ತು ಮೊಹಮ್ಮದ್ ಬಬೂಲ್‌ಗೆ ತಾವು ಸಂಗ್ರಹಿಸಿದ್ದ ಪ್ಲಾಸ್ಟಿಕ್‌ನ್ನು ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಇತ್ತೀಚಿಗೆ ಬಬೂಲ್ ತೂಕದ ವಿಚಾರದಲ್ಲಿ ಅವ್ಯವಹಾರ ನಡೆಸುತ್ತಿರುವುದು ತಿಳಿಯುತ್ತಿದ್ದಂತೆ ಇವನೊಂದಿಗಿನ ವ್ಯವಹಾರದಿಂದ ಹಿಂದೆ ಸರಿದಿದ್ದರು.[ಪಾನಮತ್ತ ಚಾಲನೆ: 973 ಪ್ರಕರಣ ದಾಖಲು]
ಯುವತಿಯ ಪೋಷಕರ ಈ ಕ್ರಮದಿಂದ ಸಿಟ್ಟಾಗಿ ಬಬೂಲ್ ಯುವತಿಯನ್ನು ಎರಡು ತಿಂಗಳ ಹಿಂದೆ ಅಪಹರಿಸಿ ವಾಸವಾಗಿದ್ದ ಮನೆಗೆ ಕರೆದುಕೊಂಡು ಹೋಗಿ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ.
ಹೇಗೋ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ಯುವತಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಳು. ಯುವತಿ ತಪ್ಪಿಸಿದ್ದರೂ, ಬಬೂಲ್ ಮತ್ತೆ ಪುನಃ ಮನೆಗೆ ಕರೆದುಕೊಂಡು ಹೋಗಿ ಹೋಗಿ ಅತ್ಯಾಚಾರ ನಡೆಸಿದ್ದಾನೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.[ಟೋಲ್ ವಿರೋಧಿಸಿ ಪ್ರತಿಭಟನೆ, ಸಂಚಾರ ಅಸ್ತವ್ಯಸ್ತ]
ಯುವತಿಗೆ ಎಷ್ಟು ವಯಸ್ಸಾಗಿದೆ ಎನ್ನುವುದು ಇನ್ನು ಗೊಂದಲದಲ್ಲಿದೆ. ಯುವತಿ ತನಗೆ 17 ವರ್ಷವಾಗಿದೆ ಎಂದು ಹೇಳುತ್ತಿದ್ದರೆ, ಯುವತಿಯನ್ನು ಪರೀಕ್ಷಿಸಿದ ವೈದ್ಯರು ಯುವತಿಗೆ 18ಕ್ಕಿಂತಲೂ ಹೆಚ್ಚಿನ ವಯಸ್ಸಾಗಿದೆ ಎಂದು ಹೇಳಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಯುವತಿ 2 ತಿಂಗಳ ಗರ್ಭಿಣಿಯಾಗಿರುವ ವಿಚಾರ ತಿಳಿದು ಬಂದಿದೆ.
ಯುವತಿಯ ಹೇಳಿಕೆಯಂತೆ ಪೊಲೀಸರು ಬಬೂಲ್ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ. ನಾನು ಯುವತಿಯನ್ನು ಬಲವಂತವಾಗಿ ಶೆಡ್‌ನಲ್ಲಿ ಇರಿಸಿಲ್ಲ. ಇಬ್ಬರು ಮದುವೆಯಾಗಲು ನಿರ್ಧರಿಸಿ ಒಪ್ಪಿಕೊಂಡು ವಾಸವಾಗಿದ್ದೆವು ಎಂದು ಮೊಹಮ್ಮದ್ ಬಬೂಲ್ ಪೊಲೀಸರಲ್ಲಿ ಹೇಳಿದ್ದಾನೆ.
ಬಬೂಲ್ ಯುವತಿಯನ್ನು ಕೂಡಿಟ್ಟಿದ್ದ ಎನ್ನಲಾದ ಶೆಡ್ ಅಕ್ಕಪಕ್ಕದ ಮನೆಗಳ ನಿವಾಸಿಗಳನ್ನು ವಿಚಾರಿಸಿದಾಗ ಇಬ್ಬರು ಶೆಡ್‌ನಲ್ಲಿ ವಾಸವಾಗಿದ್ದರು. ನಿತ್ಯ ಪ್ಲಾಸ್ಟಿಕ್ ಆಯಲು ಹೋಗುತ್ತಿದ್ದರು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.












Click it and Unblock the Notifications