'ನನ್ನ ಹುಡುಗ ಹೀರೋಗಿಂತ ಕಡಿಮೆ ಇರಬಾರದು'- ದೇವರಿಗೆ ಪತ್ರ ಬರೆದ ಹುಡುಗಿ
ಬೆಂಗಳೂರು ಮೇ 24: ಬೆಂಗಳೂರಿನ ಬನಶಂಕರಿ ದೇವಸ್ಥಾನದ ಹುಂಡಿಯಲ್ಲಿ ಸಿಕ್ಕ ಪತ್ರವೊಂದು ನೋಡುಗರನ್ನು ಬೆಚ್ಚಿ ಬೀಳಿಸಿದೆ. ಹುಂಡಿಯಲ್ಲಿ ಹಾಕಿದ ಪತ್ರದಲ್ಲಿ ತಾನು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಹುಡುಗಿಯೊಬ್ಬಳು ವಿವರಿಸಿದ್ದಾಳೆ. ತಾನಂದುಕೊಂಡಂತಹ ಹುಡುಗನ್ನನ್ನೇ ತನಗೆ ಸಿಗಲೆಂದು ಆಶೀರ್ವಾದ ಮಾಡು ದೇವರೆ ಎಂದು ಹುಡುಗಿ ಪತ್ರ ಬರೆದು ಹುಂಡಿಯಲ್ಲಿ ಹಾಕಿದ್ದಾಳೆ.
ಪತ್ರದಲ್ಲಿ ಹುಡುಗಿ ತಾನು ಮದುವೆಯಾಗುವ ಹುಡುಗ ಹೇಗಿರಬೇಕು ಎಂದಷ್ಟೇ ವಿವರಿಸಿಲ್ಲ. ಅದರೊಂದಿಗೆ ತಾನು ಪ್ರೀತಿಸುತ್ತಿದ್ದ ಹುಡುಗನ ಬಗ್ಗೆ ಕೂಡ ವಿವರಿಸಿದ್ದಾಳೆ. ಹಾಗಾದರೆ ಹುಡುಗಿ ಬನಶಂಕರಿ ಹುಂಡಿಯಲ್ಲಿ ಹಾಕಿದ ಪತ್ರದಲ್ಲಿ ಏನಿದೆ ಅನ್ನೋದನ್ನು ನೀವು ಕೂಡ ಓದಿ ಬಿಡಿ.

''ಇವರಿಗೆ
ಶ್ರೀ ಬನಶಂಕರಿ ಅಮ್ಮ ಬೆಂಗಳೂರು,
ಅಮ್ಮ ನಾನು ತಪ್ಪು ಮಾಡಿದಿನಿ. ಹಿಂದೆ ಪತ್ರ ಬರೆದಾಗ ನಾನು ಗೋಪಿನಾಥ ಅಂಬು ಬಿಟ್ಟರೆ ಬೇರೆ ಯಾರನ್ನೂ ಮದುವೆ ಆಗಬಾರದು ಅಂತ ಬರೆದಿದ್ದೆ. ಆದರೆ ಈಗ ಅವನು ನನಗೆ ಬೇಡ. ಆದಷ್ಟು ಬೇಗ ಮುಂದಿನ ವರ್ಷ 2024ರಲ್ಲಿ ನನ್ನ ಮದುವೆ ಒಳ್ಳೆಯ ಹೆಸರು, ಕೀರ್ತಿ ಹೊಂದಿರುವ ಗುಣವಂತ, ಸಿರಿವಂತ, ಹೃದಯವಂತ, ಐಶ್ವರ್ಯವಂತ, ಬುದ್ಧಿವಂತ, ಯಾವ ಹೀರೋಗಿಂತ ಕಡಿಮೆ ಇರದ, ಚೆನ್ನಾಗಿರುವ, ಐಎಎಸ್ ಅಧಿಕಾರಿ ಜೊತೆ ನನ್ನ ಮದುವೆ ಮಾಡಿಸು.
''ನನ್ನ ಗಂಡ ಬೇರೆ ಯಾವ ಹೆಂಗಸರನ್ನು ಕೆಟ್ಟ ದೃಷ್ಟಿಯಲ್ಲಿ ನೋಡಬಾರದು. ನನ್ನ ಗಂಡ ನನ್ನ ತುಂಬಾ ಚೆನ್ನಾಗಿ ಪ್ರೀತಿಯಿಂದ ನೋಡಿಕೊಳ್ಳಬೇಕು. ನಾನಂದ್ರ ಅವರ ಜೀವ ಆಗಿರಬೇಕು. ನಾವಿಬ್ಬರೂ ನೂರು ಕಾಲ ಮಕ್ಕಳು ಮೊಮ್ಮಕ್ಕಳ ಜೊತೆ ಜೀವನ ಮಾಡಬೇಕು. ನಮ್ಮಿಬ್ಬರಿಗೆ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡು. ಇಷ್ಟು ವರ್ಷ ಕಾದಿದ್ದಕ್ಕೆ ಒಳ್ಳೆ ಹುಡುಗ ಸಿಕ್ಕ ಅಂತ ಖುಷಿ ಆಗ್ಬೇಕು. ನನ್ನನ್ನು ಆಡಿಕೊಳ್ಳವರ ಬಾಯಿ ಮುಚ್ಚಿಸಬೇಕು'' ಅಂತ ಹುಡುಗಿ ಪತ್ರದಲ್ಲಿ ಬರೆದಿದ್ದಾಳೆ.
ಪತ್ರ ದೇವರ ಹುಂಡಿ ಹಣ ಏನಿಸುವ ವೇಳೆ ಸಿಕ್ಕಿದೆ. ದೇವರ ಹುಂಡಿ ಏಣಿಕೆ ಕಾರ್ಯ ಇಂದು (ಮೇ 24) ನಡೆಯಿತು. ಇದನ್ನು ಓದಿದ ಹುಂಡಿ ಹಣ ಏನಿಕೆದಾರರು ಶಾಕ್ ಆಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಪತ್ರ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಸಾಕಷ್ಟು ಕಮೆಂಟ್‌ಗಳು ಬರುತ್ತಿವೆ.
ಹಾಗಾದರೆ ಈ ಪತ್ರ ಓದಿ ನಿಮಗೇನು ಅನಿಸಿತು ಎನ್ನುವ ಬಗ್ಗೆ ನೀವೂ ಕೂಡ ಕಮೆಂಟ್ ಮಾಡಿ. ಅಲ್ಲದೆ ದೇವಸ್ಥಾನದಲ್ಲಿ ಇಂಥಹ ಪತ್ರ ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ಪತ್ರಗಳು ಬಂದಿವೆ.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ










Click it and Unblock the Notifications