KSR Bengaluru: ನಿಲ್ದಾಣದಲ್ಲಿ ವಿಶೇಷ MTUS ಸೌಲಭ್ಯ, ಏನಿದು?: ವಿಶೇಷ ರೈಲು ಸೇವೆ ವಿಸ್ತರಣೆ

ಬೆಂಗಳೂರು, ನವೆಂಬರ್ 02: ದೀಪಾವಳಿ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಲ್ಲಿ ಸಹ ಆಚರಣೆಗಳು ಇದೆ. ಹೀಗಾಗಿ ಹಬ್ಬದ ಋತುವಿನಲ್ಲಿ ಪ್ರಯಾಣಿಕರ ಹೆಚ್ಚಿದ ಬೇಡಿಕೆಯನ್ನು ಪೂರೈಸುವ ಹಾಗೂ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನೈಋತ್ಯ ರೈಲ್ವೆ ವಲಯದಿಂದ (South Western Railway) ವಿಶೇಷ ರೈಲುಗಳ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ.

ಹೊಸ ಟಿನ್ಸುಕಿಯಾ-ಬೆಂಗಳೂರು ವಿಶೇಷ ರೈಲು ಮುಂದುವರಿಸಲಾಗುತ್ತಿದೆ. ಹೌದು, ಹೊಸ ಟಿನ್ಸುಕಿಯಾ ಜಂಕ್ಷನ್‌ನಿಂದ ಎಸ್‌ಎಂವಿಟಿ ಬೆಂಗಳೂರಿಗೆ ಹಾಗೂ ಹಿಂದಿರುಗಿ ಬೆಂಗಳೂರಿನಿಂದ ಹೊಸ ಟಿನ್ಸುಕಿಯಾ ಜಂಕ್ಷನ್‌ಗೆ ಸಂಚರಿಸುವ ವಾರದ ವಿಶೇಷ ರೈಲುಗಳ ಸಂಚಾರಾವಧಿಯನ್ನು ವಿಸ್ತರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

MUTS Assistants Appointed at KSR Bengaluru Railway Station Know more Details

ರೈಲು ಸಂಖ್ಯೆ, ವೇಳಾಪಟ್ಟಿ ವಿವರ

ಹೊಸ ಟಿನ್ಸುಕಿಯಾ - ಎಸ್‌ಎಂವಿಟಿ ಬೆಂಗಳೂರು ರೈಲು (ಸಂಖ್ಯೆ 05952) ಗುರುವಾರ ಸಂಚರಿಸಲಿದೆ. ಮೊದಲು 30 ಅಕ್ಟೋಬರ್ 2025ರವರೆಗೆ ನಿಗದಿಯಾಗಿದ್ದ ಈ ರೈಲು ಸಂಚಾರವನ್ನು 2025 6 ನವೆಂಬರ್ ರವರೆಗೆ ವಿಸ್ತರಿಸಲಾಗಿದೆ. ಎಸ್‌ಎಂವಿಟಿ ಬೆಂಗಳೂರು - ಹೊಸ ಟಿನ್ಸುಕಿಯಾ ರೈಲು (05951) ಸೋಮವಾರ ಸಂಚರಿಸಲಿದೆ. ಮೊದಲು 3 ನವೆಂಬರ್ 2025ರವರೆಗೆ ನಿಗದಿಯಾಗಿದ್ದ ಸಂಚಾರವನ್ನು 10 ನವೆಂಬರ್ 2025ರವರೆಗೆ ವಿಸ್ತರಿಸಲಾಗಿದೆ.

ರೈಲ್ವೆ ಪ್ರಯಾಣಿಕರು ಈ ವಿಶೇಷ ರೈಲುಗಳ ಸಮಯ, ಬೋಗಿ, ಸಂಚಾರ ವೇಳಾಪಟ್ಟಿ ಗಮನಿಸಿ ಪ್ರಯಾಣ ಯೋಜಿಸಬೇಕು. ಇತರ ವಿವರಗಳನ್ನು ತಿಳಿಯಲು ಅಧಿಕೃತ ವೆಬ್‌ಸೈಟ್ www.enquiry.indianrail.gov.in ಗೆ ಭೇಟಿ ನೀಡಬೇಕು. NTES ಆ್ಯಪ್ ಬಳಸಿ ಅಥವಾ 139 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು.

KSR ರೈಲು ನಿಲ್ದಾಣದಲ್ಲಿ MUTS ನೇಮಕ, ಏನಿದು?

ನೈಋತ್ಯ ರೈಲ್ವೆ ವ್ಯಾಪ್ತಿಯ ಬೆಂಗಳೂರು ವಿಭಾಗವು ಕೆಎಸ್ಆರ್ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಕಾಯ್ದಿರಿಸದ ಟಿಕೆಟ್‌ಗಳನ್ನು ಪ್ರಯಾಣಿಕರಿಗೆ ನೀಡಲು ಎಂಯುಟಿಎಸ್ (ಮೊಬೈಲ್ ಯುಟಿಎಸ್) ಸಹಾಯಕ್‌ಗಳನ್ನು ನೇಮಿಸಿಕೊಂಡಿದೆ.

ಈ ಉಪಕ್ರಮದಿಂದ ಪ್ರಯಾಣಿಕರಿಗೆ ಕಾಯ್ದಿರಿಸದ ಟಿಕೆಟ್‌ಗಳನ್ನು ಬುಕ್ ಮಾಡಲು ಹೆಚ್ಚುವರಿ ಆಯ್ಕೆಯನ್ನು ಒದಗಿಸುತ್ತದೆ. ಕೌಂಟರ್‌ಗಳಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣದ ಅನುಕೂಲವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನೀವು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ. ರೈಲ್ವೆ ಮಂಡಳಿಯ ಎಂಯುಟಿಎಸ್ ಸಹಾಯಕ್ ಪೈಲಟ್ ಯೋಜನೆಗೆ ಆಯ್ಕೆಯಾದ 5 ನಿಲ್ದಾಣಗಳಲ್ಲಿ ಕೆಎಸ್ಆರ್ ಬೆಂಗಳೂರು ಸೇರಿದೆ ಮತ್ತು ಬೆಂಗಳೂರು ವಿಭಾಗ (ಎಸ್‌ಡಬ್ಲ್ಯುಆರ್) ಇದನ್ನು ಜಾರಿಗೆ ತಂದ ಮೊದಲ ನಿಲ್ದಾಣವಾಗಿದೆ.

ರೈಲ್ವೆ ಇಲಾಖೆಯು ಬೆಂಗಳೂರಿನಲ್ಲಿ ಇತರ ರೈಲ್ವೆ ನಿಲ್ದಾಣಗಳಾದ ಎಸ್‌ಎಂವಿಟಿ, ಯಶವಂತಪುರ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರುವ ವಿಶ್ವಾಸ ಇದೆ. ಇದರೊಂದಿಗೆ ಕರ್ನಾಟಕದ ಪ್ರಮುಖ ನಿಲ್ದಾಣಗಳಲ್ಲಿ (ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಮತ್ತಿತರರ ಕಡೆ) ಉಪಕ್ರಮ ಜಾರಿಗೊಳಿಸುವ ಚಿಂತನೆಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+