ಒಂದು Sorry ಕೇಳದೆ ಜೀವ ಕಳೆದುಕೊಂಡ ವ್ಯಕ್ತಿ, ಇಷ್ಟು ಸಣ್ಣ ವಿಷಯಕ್ಕೆ ಕೊಲೆ
ಎಷ್ಟು ಸಣ್ಣ ಸಣ್ಣ ವಿಷಯಗಳಿಗೆ ಕೊಲೆಯಾಗುತ್ತದೆ ಎನ್ನುವುದಕ್ಕೆ ಬೆಂಗಳೂರಿನಲ್ಲಿ ಸೋಮವಾರ ನಡೆದಿರುವ ಕೊಲೆಯೇ ಸಾಕ್ಷಿ. ಸೋಮವಾರ ಬೆಂಗಳೂರಿನಲ್ಲಿ ಅತ್ಯಂತ ಸಣ್ಣ ವಿಷಯಕ್ಕೆ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಅಷ್ಟಕ್ಕೂ ಅವರಿಬ್ಬರ ನಡುವೆ ಅಂತಹ ಹೇಳಿಕೊಳ್ಳುವ ವಿಷಯಕ್ಕೂ ಜಗಳವಾಗಿರಲಿಲ್ಲ. ಆದರೆ, ಇಬ್ಬರೂ ಕುಡಿದ ಅಮಲಿನಲ್ಲಿ ಇದ್ದರು. ಸಣ್ಣ Sorry ಕೇಳಿದ್ದರೂ, ಜಗಳಕ್ಕೆ ಅಂತ್ಯವಾಡಬಹುದಿತ್ತು. ಆದರೆ, ಇಬ್ಬರೂ ಅದನ್ನು ಮಾಡಲಿಲ್ಲ.
ಬೆಂಗಳೂರಿನ ಜನನಿಬಿಡ ಪ್ರದೇಶದಲ್ಲಿ, ಮೆಟ್ರೋ, ಬಸ್ ಹಾಗೂ ರೈಲು ನಿಲ್ದಾಣ ಅಂತ ಎಲ್ಲೆಂದರಲ್ಲಿ ಒಬ್ಬರು ಮತ್ತೊಬ್ಬರನ್ನು ತಳ್ಳುವುದು ಅಥವಾ ಆಕಸ್ಮಿಕವಾಗಿ ತುಳಿಯುವುದು ಸಾಮಾನ್ಯ. ಈ ರೀತಿ ತಳ್ಳಿಸಿಕೊಂಡವರು ಹಾಗೂ ತುಳಿಸಿಕೊಂಡವರು ತುಳಿದವರನ್ನು ಕೊಂದರೆ ಏನು ಗತಿ. ಬೆಂಗಳೂರಿನಲ್ಲಿ ಸೋಮವಾರ ನಡೆದಿರುವುದು ಸಹ ಇಂತಹದ್ದೇ ಒಂದು ಸಣ್ಣ ಅಚಾತುರ್ಯ ಆದರೆ, ಅದಕ್ಕೆ ಒಬ್ಬರ ಅಮೂಲ್ಯ ಜೀವವೇ ಹೋಗಿದೆ. ಬೆಂಗಳೂರಲ್ಲಿ ಮುಂದಿನ ಮನೆಯ ವ್ಯಕ್ತಿ ಕಾಲು ತುಳಿದ ಎನ್ನುವ ಕಾರಣಕ್ಕೆ ಆ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಮೂರ್ತಿ ಎನ್ನುವ ವ್ಯಕ್ತಿಯು ಸೋಮವಾರ ರಾತ್ರಿ ಅವರ ಮನೆಯ ಮುಂದೆ ಇರುವ ಕೀರ್ತಿ ಎನ್ನುವ ವ್ಯಕ್ತಿಯ ಕಾಲನ್ನು ತಿಳಿಯದೆ ತುಳಿದಿದ್ದಾರೆ. ಆದರೆ, ಇದೇ ಸಣ್ಣ ವಿಷಯಕ್ಕೆ ಜಗಳ ತೆಗೆದಿರುವ ಕೀರ್ತಿ ಎನ್ನುವ ವ್ಯಕ್ತಿ ಮೂರ್ತಿ ಅವರ ಮೇಲೆ ಹಲ್ಲೇ ಮಾಡಿದ್ದು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಸಣ್ಣ ಸಣ್ಣ ವಿಷಯಗಳಿಗೂ ಕೊಲೆಯಾಗುವುದು ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ವರದಿಯಾಗುತ್ತಿದೆ. ಆದರೆ, ಕಾಲು ತುಳಿದರು ಎನ್ನುವ ವಿಚಾರ ಇಷ್ಟೊಂದು ವಿಕೋಪಕ್ಕೆ ಹೋಗಿದೆ.

ಘಟನೆಯ ಹಿನ್ನೆಲೆ ಏನು: ಬೆಂಗಳೂರಿನ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಪಿತೃಪಕ್ಷ ಪೂಜೆ ಆಯೋಜಿಸಲಾಗಿತ್ತು. ಈ ಪೂಜೆಗೆ ಮೂರ್ತಿ ಅವರ ಮನೆಗೆ ಕುಟುಂಬದವರೆಲ್ಲ ಬಂದಿದ್ದರು. ಕುಟುಂಬಸ್ಥರೆಲ್ಲ ಸೇರಿ ಹಿರಿಯ ಪೂಜೆ ಮಾಡಿ, ಕೆಲವರು ಊಟ ಮಾಡುತ್ತಿದ್ದರು. ಪೂಜೆಯ ದಿನವೇ ಮನೆಯಲ್ಲಿ ಎಣ್ಣೆ ಪಾರ್ಟಿಯನ್ನು ಸಹ ನಡೆಸಲಾಗಿದೆ. ಕುಡಿದು ಹೊರಗೆ ಬಂದಿರುವ ಮೂರ್ತಿ ತಿಳಿಯದೆ ಕೀರ್ತಿಯ ಕಾಲು ತುಳಿದಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಕೀರ್ತಿ, ಮೂರ್ತಿ ಎನ್ನುವವರ ಮೇಲೆ ರೇಗಾಡಿದ್ದಾನೆ. ಪರಸ್ಪರ ಮಾತು ಕೈ ಮೀರಿದೆ. ನೋಡ ನೋಡುತ್ತಿದ್ದಂತೆಯೇ ಮೂರ್ತಿ ಹೊಟ್ಟೆಗೆ ಕೀರ್ತಿ ಚಾಕು ಇರಿದಿದ್ದಾನೆ. ಚಾಕುವಿನ ಇರಿತಕ್ಕೆ ತೀವ್ರ ರಕ್ತಸ್ರಾವದಿಂದ ಮೂರ್ತಿ ಅವರು ಮೃತಪಟ್ಟಿದ್ದಾರೆ. ಆದರೆ, ಆರೋಪಿ ಚಾಕುವಿನಿಂದ ಚುಚ್ಚಿದ ಕೂಡಲೇ ಪರಾರಿಯಾಗಿದ್ದಾನೆ.
ತಪ್ಪಿಸಿಕೊಂಡಿದ್ದ ವ್ಯಕ್ತಿ: ಚಾಕುವಿನಿಂದ ಇರಿದು ಕೊಲೆ ಮಾಡಿದ ಕೂಡಲೇ ಕೀರ್ತಿ ಸ್ಥಳದಿಂದಲೇ ಪರಾರಿಯಾಗಿದ್ದಾನೆ. ಅವನನ್ನು ಹಿಡಿದುಕೊಳ್ಳಲು ಸ್ಥಳೀಯರು ಪ್ರಯತ್ನಿಸಿದರೂ, ಅವರ ಕೈಗೆ ಸಿಕ್ಕಿಲ್ಲ. ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ವ್ಯಕ್ತಿಯಲ್ಲಿ ಪತ್ತೆ ಹಚ್ಚಿ ಬಂದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ಆರೋಪಿಯ ಮೊಬೈಲ್ ಲೊಕೇಷನ್ ಆಧಾರದ ಮೇಲೆ ಅವನನ್ನು ಬಂಧಿಸಲಾಗಿದೆ. ಜ್ಞಾನಭಾರತಿ ಠಾಣೆ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.












Click it and Unblock the Notifications