Sumalatha joins BJP: ಸುಮಲತಾ ಬಿಜೆಪಿ ಸೇರ್ಪಡೆ- ರೆಬಲ್ ಲೇಡಿ ಮುಂದಿನ ನಡೆ ಏನು?
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿಂದು ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆಗೊಂಡರು. ಈ ವೇಳೆ ರಾಕ್‌ಲೈನ್ ವೆಂಕಟೇಶ್ ಸುಮಲತಾಗೆ ಸಾಥ್ ನೀಡಿದರು.
ಬಿಜೆಪಿ ಸೇರ್ಪಡೆಗೂ ಮುನ್ನ ಅವರು ಅಂಬರೀಷ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಸುದ್ದಿರಾರರೊಂದಿಗೆ ಮಾತನಾಡಿದರು. 'ಇವತ್ತಿನಿಂದ ಹೊಸ ಅಧ್ಯಾಯ ಶುರುವಾಗಲಿದೆ' ಎಂದರು. ಬಳಿಕ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಹಾಗಾದರೆ ಬಿಜೆಪಿ ಸೇರಿರುವ ಸುಮಲತಾ ಅವರ ಮುಂದಿನ ನಡೆ ಏನು? ಎಚ್‌ಡಿ ಕುಮಾರಸ್ವಾಮಿ ಜೊತೆಗೆ ಪ್ರಚಾರದಲ್ಲಿ ಭಾಗಿಯಾಗ್ತಾರಾ? ಬೇರೆ ಯಾವ ಕ್ಷೇತ್ರದಲ್ಲಿ ಪ್ರಚಾರ ಮಾಡ್ತಾರೆ? ಎನ್ನುವ ಪ್ರಶ್ನೆ ಮೂಡಿವೆ.

ಈ ಹಿಂದೆ ಸುಮಲತಾ ಅಂಬರೀಷ್ ಬಿಜೆಪಿ ಸೇರಲ್ಲ ಅವರು ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ಸ್ಪರ್ಧೆ ಮಾಡ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಜೊತೆಗೆ ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುತ್ತಾರೆನ್ನುವ ಊಹಾಪೋಹಗಳು ಇದ್ದವು. ಆದರೀಗ ಅದೆಲ್ಲದಕ್ಕೂ ಸುಮಲತಾ ತೆರೆ ಎಳೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ತಮ್ಮ ನಿರ್ಧಾರಗಳನ್ನು ಬಿಜೆಪಿಗೆ ಹಸ್ತಾಂತರಿಸಿದ್ದಾರೆ.
ಹೌದು.. ಸುಮಲತಾ ಅವರಿಗೆ ಇದುವರೆಗೆ ಬೌಂಡರಿ ಇರಲಿಲ್ಲ. ಈಗ ಬಿಜೆಪಿ ಒಳಗೆ ಅವರು ಕಾಲಿಟ್ಟಿದ್ದಾರೆ. ಈವರೆಗೆ ಯಾವುದೇ ನಿರ್ಧಾರಗಳನ್ನು ಅವರು ಒಂಟಿಯಾಗಿ ತೆಗೆದುಕೊಳ್ಳುತ್ತಿದ್ದರು. ಅಂದರೆ ತಮ್ಮ ನಿರ್ಧಾರಗಳನ್ನು ತಾವೇ ತೆಗೆದುಕೊಳ್ತಾಯಿದ್ದರು. ಇದೀಗ ಬಿಜೆಪಿ ಪಕ್ಷ ಸೇರಿರುವುದರಿಂದ ಅವರು ಏನು ಮಾಡಬೇಕು? ಏನು ಮಾಡಬಾರದು ಎನ್ನುವುದೆಲ್ಲವೂ ಪಕ್ಷವೇ ನಿರ್ಧಾರ ಮಾಡುತ್ತದೆ. ಹೀಗಾಗಿ ಸುಮಲತಾ ಅವರು ಬಿಜೆಪಿ ಕೊಡುವ ಜವಬ್ದಾರಿಗಳನ್ನು ನಿರ್ವಹಣೆ ಮಾಡಬೇಕಾಗುತ್ತದೆ. ಹಾಗಾದರೆ ಸುಮಲತಾ ಪ್ರಚಾರದಲ್ಲಿ ಭಾಗಿಯಾಗ್ತಾರಾ?
ಮಂಡ್ಯದಲ್ಲಿ ಎಚ್‌ಡಿಕೆಯೊಂದಿಗೆ ರೆಬಲ್ ಲೇಡಿ ಪ್ರಚಾರ?
ಸುಮಲತಾ ಬಿಜೆಪಿ ಸೇರ್ಪಡೆಗೊಂಡ ಬಳಿಕ ಅವರ ಮುಂದಿನ ನಡೆ ಬಗ್ಗೆ ಭಾರೀ ಕುತೂಹಲ ಮೂಡಿದೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಎಚ್‌ಡಿ ಕುಮಾರಸ್ವಾಮಿಯನ್ನು ಕಣಕ್ಕೆ ಇಳಿಸಲಾಗಿದೆ. ಹೀಗಾಗಿ ಬಿಜೆಪಿ ಸಾಧ್ಯವಾದಷ್ಟು ಸುಮಲತಾ ಅವರನ್ನು ಮಂಡ್ಯ ಪ್ರಚಾರಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.
ಮಂಡ್ಯದಲ್ಲಿ ರೆಬಲ್ ಸ್ಟಾರ್ ಅಂಬರೀಷ್, ಸುಮಲತಾ, ಅಭಿಷೇಕ್ ಹಾಗೂ ದರ್ಶನ್ ಅಭಿಮಾನಿಗಳ ಬೃಹತ್ ಬಳಗವಿದೆ. ಅವರನ್ನು ಸೆಳೆಯಲು ಸುಮಲತಾ ಪ್ರಚಾರಕ್ಕೆ ಬಿಜೆಪಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಬಿಜೆಪಿ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ. ಹೀಗಾಗಿ ರಾಜ್ಯದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಭಾರೀ ಕುತೂಹಲವನ್ನು ಮೂಡಿಸಿದೆ. ಹಾಗಾದರೆ ಸುಮಲತಾ ಬೇರೆ ಕ್ಷೇತ್ರಗಳಲ್ಲೂ ಪ್ರಚಾರ ಮಾಡ್ತಾರಾ?
ಬೇರೆ ಕ್ಷೇತ್ರದಲ್ಲೂ ಸುಮಲತಾ ಪ್ರಚಾರ?
ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಬಿಜೆಪಿ ಅವರಿಗೆ ಟಿಕೆಟ್ ನೀಡಲಿಲ್ಲ. ಈ ವೇಳೆ ಬೇರೆ ಕ್ಷೇತ್ರದಿಂದ ಸುಮಲತಾ ಸ್ಪರ್ಧೆಗೆ ಆಫರ್ ಕೂಡ ಬಂದಿತ್ತು. ಆದರೆ ಸುಮಲತಾ ಖಡಾಖಂಡಿತವಾಗಿ ಮಂಡ್ಯ ಬಿಟ್ಟು ಬೇರೆಡೆ ಸ್ಪರ್ಧೆ ಮಾಡುವುದಿಲ್ಲ ಎಂದಿದ್ದರು.
ಇದೀಗ ಅವರು ಬಿಜೆಪಿ ಸೇರ್ಪಡೆಗೊಂಡಿದ್ದರಿಂದ ಬೇರೆ ಕ್ಷೇತ್ರದ ಪ್ರಚಾರದಲ್ಲಿ ಭಾಗಿಯಾಗುವ ಸಾಧ್ಯತೆಗಳು ಇವೆ. ಆದರೆ ಈ ತೀರ್ಮಾನಗಳನ್ನು ಬಿಜೆಪಿ ಇನ್ನೂ ಕೂಡ ಮಾಡಿಲ್ಲ. ಚುನಾವಣೆ ಮುಗಿಯುವರೆಗೂ ಕೂಡ ಸುಮಲತಾ ಸ್ಥಾನಮಾನ ಕೊಡುವ ಬಗ್ಗೆ ತೀರ್ಮಾನ ತೊಗೆದುಕೊಳ್ಳುವ ಲಕ್ಷಣಗಳಿಲ್ಲ. ಚುನಾವಣೆ ಪ್ರಚಾರಕ್ಕೆ ಮಾತ್ರ ಅವರನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.
ಮಂಡ್ಯದಲ್ಲಿ ಸುಮಲತಾ ಕೈಹಿಡಿಯುತ್ತಾರಾ ಮತದಾರರು?
ಸುಮಲತಾ ಅವರಿಗೆ ಬಿಜೆಪಿ ಸೇರ್ಪಡೆಯಾಗಲು ಮಂಡ್ಯದಲ್ಲಿ ಭಿನ್ನಾಭಿಪ್ರಾಯಗಳಿವೆ. ಬಿಜೆಪಿ ಸೇರಲು ಕೆಲವರು ಸಲಹೆ ನೀಡಿದ್ದರೆ ಇನ್ನಷ್ಟು ಅಭಿಮಾನಿಗಳು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಲು ಸಲಹೆ ನೀಡಿದ್ದರು. ಆದರೆ ಸುಮಲತಾ ಬಿಜೆಪಿ ಸೇರ್ಪಡೆಗೊಂಡಿರುವ ನಿರ್ಧಾರ ಕೆಲವರಿಗೆ ಬೇಸರ ತಂದಿದೆ. ಹೀಗಾಗಿ ಈ ಮತಗಳು ಕಾಂಗ್ರೆಸ್ ಪಾಲಾಗುವ ಸಾಧ್ಯತೆ ಕೂಡ ಇದೆ.
ಕಾಂಗ್ರೆಸ್ ಗ್ಯಾರಂಟಿಗಳ ಮುಂದೆ ರೆಬೆಲ್ ಲೇಡಿ ಗೆಲ್ತಾರಾ? ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ಸುಮಲತಾ ಅವರಿಂದ ಹೆಚ್ಚಿನ ಮತಗಳು ಬರುತ್ತಾ? ಸುಮಲತಾ ಬಿಜೆಪಿ ಸೇರ್ಪಡೆ ಮಂಡ್ಯ ಜನತೆಗೆ ಎಷ್ಟು ಸಂತೋಷ ತಂದಿದೆ ಎನ್ನುವುದು ಚುನಾವಣೆ ಬಳಿಕವೇ ಸ್ಪಷ್ಟವಾಗಲಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ












Click it and Unblock the Notifications