ರಾಜೀವ್ ಚಂದ್ರಶೇಖರ್ ರಿಂದ ಚೇತನ್ ಕುಮಾರ್ ಸ್ನೇಹಿತರ ಬಗ್ಗೆ ಮೆಚ್ಚುಗೆ

ಬೆಂಗಳೂರು, ಫೆಬ್ರವರಿ 20: ಬೆಂಗಳೂರಿನಲ್ಲಿ ಏರೋ ಇಂಡಿಯಾ ಪ್ರದರ್ಶನಕ್ಕಾಗಿ ತಾಲೀಮು ನಡೆಸುವಾಗ 'ಸೂರ್ಯಕಿರಣ್' ಡಿಕ್ಕಿಯಾಗಿ ವಾಯುಪಡೆಯ ವಿಂಗ್ ಕಮ್ಯಾಂಡರ್ ಸಾಹಿಲ್ ಗಾಂಧಿ ಹುತಾತ್ಮರಾಗಿದ್ದಾರೆ. ಈ ಘಟನೆಗೆ ಸಂತಾಪ ವ್ಯಕ್ತಪಡಿಸಿರುವ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ವಿಂಗ್ ಕಮ್ಯಾಂಡರ್ ವಿಜಯ್ ಶೆಲ್ಕೆ ಹಾಗೂ ಸ್ಕ್ವಾಡ್ರನ್ ಲೀಡರ್ ತೇಜೇಶ್ವರ್ ಸಿಂಗ್ ನೆರವಿಗೆ ಧಾವಿಸಿದವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನವರು ಹಾಗೂ ಕನ್ನಡಿಗರೇ ಆದ ಬಿ.ಎಂ.ಚೇತನ್ ಕುಮಾರ್ ಮತ್ತು ಅವರ ಸ್ನೇಹಿತರು ಕೂಡಲೇ ನೆರವಿಗೆ ಧಾವಿಸಿದ್ದರು. ಈ ಸಹಾಯವನ್ನು ಮನಸಾರೆ ಸ್ಮರಿಸಿರುವ ರಾಜೀವ್ ಚಂದ್ರಶೇಖರ್, ಭಾರತೀಯ ವಾಯು ಸೇನೆಯ ಸದಸ್ಯನಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ಮಾಧ್ಯಮಗಳು ಹಾಗೂ ನಮ್ಮ ಬೆಂಗಳೂರು ಫೌಂಡೇಷನ್ ನಂಥವುಗಳಿಂದ ಮೆಚ್ಚುಗೆ ವ್ಯಕ್ತಪಡಿಸಿದರೆ, ಸನ್ಮಾನ ಕಾರ್ಯಕ್ರಮಗಳು ಮಾಡಿದರೆ ಅದೊಂದು ಧನ್ಯವಾದ ತಿಳಿಸುವ ಕಾರ್ಯಕ್ರಮದಂತೆ ಆಗುತ್ತದೆ ಎಂಬ ಅಭಿಪ್ರಾಯ ಪಟ್ಟಿದ್ದಾರೆ.

MP Rajeev Chandrasekhar urges to felicitate Chethan and his friends

ನಿಜವಾದ ಕನ್ನಡಿಗರು, ಬೆಂಗಳೂರು, ಭಾರತೀಯ ನಾಗರಿಕರು ಹಾಗೂ ಸ್ಫೂರ್ತಿಯನ್ನು ಚೇತನ್ ಕುಮಾರ್ ಮತ್ತು ಅವರ ಸ್ನೇಹಿತರು ಪ್ರತಿನಿಧಿಸುತ್ತಾರೆ. ನಮ್ಮ ಯೋಧರಿಗೆ ಅಗತ್ಯ ಸಮಯದಲ್ಲಿ ನೆರವಿಗೆ ಮುಂದಾಗಿದ್ದಾರೆ. ನಮಗಾಗಿ ಸೇವೆ ಸಲ್ಲಿಸುವ ಹಾಗೂ ಕಾಪಾಡುವವರ ಸೇವೆಗೆ ಹಾಗೂ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

ಚೇತನ್ ಹಾಗೂ ಅವರ ಸ್ನೇಹಿತರು ತಮ್ಮ ನಿಸ್ವಾರ್ಥ ಸೇವೆಗಾಗಿ ನಿಜಕ್ಕೂ ದೊಡ್ಡ ಗೌರವಕ್ಕೆ ಅರ್ಹರು. ಅವರಿಗಾಗಿ ಭಾರತೀಯ ವಾಯು ಸೇನೆಯ ಘೋಷ ವಾಕ್ಯ "ವೈಭವದೊಂದಿಗೆ ನೀವು ಆಕಾಶವನ್ನು ಸ್ಪರ್ಶಿಸಬಹುದು" ಎಂಬ ಮಾತನ್ನು ಉದಾಹರಿಸಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+