ನವ ಭಾರತಕ್ಕಾಗಿ ನವ ಬೆಂಗಳೂರು ಸಂವಾದದಲ್ಲಿ ರಾಜೀವ್ ಚಂದ್ರಶೇಖರ್

ಬೆಂಗಳೂರು, ಏಪ್ರಿಲ್ 27: ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ನ್ಯೂ ಬೆಂಗಳೂರು ಫಾರ್ ನ್ಯೂ ಇಂಡಿಯಾ(ಎನ್‌ಬಿಎನ್ ಐ) ಎಂಬ ನೂತನ ಅಭಿಯಾನದೊಂದಿಗೆ ಇಂದು 4.೦೦ರಿಂದ 5.30.ರವರೆಗೆ ಫೇಸ್ ಬುಕ್ ಲೈವ್ ಅಭಿಯಾನ ನಡೆಸಲಿದ್ದಾರೆ.

ಬೆಂಗಳೂರು ಸಮಸ್ಯೆಗಳ ಗೂಡಾಗಿದೆ, ಜನರನ್ನು ಈ ಸಮಸ್ಯೆಯಿಂದ ಹೊರತರುವ ಅಗತ್ಯವಿದೆ. ಹೀಗಾಗಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಎನ್‌ಬಿಎನ್ ಐ ಫೇಸ್ ಲೈವ್ ಮೂಲಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದ್ದಾರೆ.

ಹೊಸ ಬೆಂಗಳೂರು ನಿರ್ಮಾಣದ ಜತೆಗೆ ಹೊಸ ಭಾರತ ನಿರ್ಮಾಣ ಎಂಬ ಧ್ಯೇಯದೊಂದಿಗೆ ಸತತ ನಾಲ್ಕನೇ ಬಾರಿ ಈ ಅಭಿಯಾನವನ್ನು ನಡೆಸುತ್ತಿದ್ದು, ಸಾರ್ವಜನಿಕರು ಫೇಸ್ ಬುಕ್ ನೇರ ಪ್ರಸಾರದಲ್ಲಿ ಸಂಸದ ರಾಜೀವ್ ಚಂದ್ರಶೇಖರ್ ಅವರೊಂದಿಗೆ ಮಾತನಾಡಬಹುದಾಗಿದೆ.

MP Rajeev Chandrasekhar goes live with Bengaluru citizens

ಬೆಂಗಳೂರು ಅಭಿವೃದ್ಧಿ ಕುರಿತಂತೆ ಸಲಹೆ, ದೂರುಗಳಿದ್ದಲ್ಲಿ ಸಂಸದರೊಂದಿಗೆ ಚರ್ಚಿಸಬಹುದು, ಬೆಂಗಳೂರಿನ ತಜ್ಞರು ಕೂಡ ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೂಡ್ಲು, ಹೊಸಪಾಳ್ಯ, ಎಚ್ ಎಸ್ ಆರ್ ಲೇಔಟ್, ಸೋಮಸುಂದರಪಾಳ್ಯ, ಪರಂಗಿಪಾಳ್ಯ ಮತ್ತು ಗಾರ್ಡನ್ ಲೇಔಟ್ ಸುತ್ತಮುತ್ತಲ ಪ್ರದೇಶದವರು ಕೆಸಿಡಿಸಿ ಘಟಕದ ದುರ್ನಾತ ಹಾಗೂ ಮಾಲಿನ್ಯದಿಂದ ಬಹಳ ಕಾಲದಿಂದ ತೊಂದರೆ ಅನುಭವಿಸಿದ್ದಾರೆ. ಇಪ್ಪತ್ತೈದು ಸಾವಿರ ನಾಗರಿಕರ ಸಮಸ್ಯೆಯನ್ನು ಅಧಿಕಾರಿಗಳು ಸಹ ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+