ರೂಪಾ-ಸಿಂಧೂರಿ ರಂಪ: ಮೋದಿ, ಅಮಿತ್ ಶಾಗೆ ನಟ ಜಗ್ಗೇಶ್ ಮನವಿ
ಇಬ್ಬರು ಮಹಿಳಾ ಅಧಿಕಾರಿಗಳ ಸಂಘರ್ಷ ಮುಂದುವರಿದೆ. ಈ ಸಂಬಂಧ ಬಿಜೆಪಿ ಸಂಸದ ನವರಸನಾಯಕ ಜಗ್ಗೇಶ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೊರೆ ಹೋಗಿದ್ದಾರೆ.
ಬೆಂಗಳೂರು, ಫೆಬ್ರವರಿ 21: ಐಎಎಸ್ ಮತ್ತು ಐಪಿಎಸ್‌ನ ಇಬ್ಬರು ಮಹಿಳಾ ಅಧಿಕಾರಿಗಳ ಬಹಿರಂಗ ಕಿತ್ತಾಟ ರಾಜ್ಯದಿಂದ ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದೆ.
ಹೌದು, ನಟ ಹಾಗೂ ಬಿಜೆಪಿ ಸಂಸದರಾದ ನವರಸನಾಯಕ ಜಗ್ಗೇಶ್ ಅವರು ಇಬ್ಬರು ಮಹಿಳಾ ಅಧಿಕಾರಿಗಳ ಬಹಿರಂಗ ಸಂಘರ್ಷ, ಆರೋಪ ಪ್ರತ್ಯಾರೋಪ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.
ಉನ್ನತ ಹುದ್ದೆಯಲ್ಲಿರುವ ಜನರಿಗೆ ಮಾರ್ಗದರ್ಶನ ಮಾಡಬೇಕಾದ ಐಪಿಎಸ್ ಅಧಿಕಾರಿ ರೂಪಾ ಡಿ. ಮೌದ್ಗಿಲ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವೈಯಕ್ತಿಕ ದ್ವೇಷ ಮಾಧ್ಯಮಗಳ ಮುಂದೆ ತರಬಾರದು. ಐಎಎಸ್ ಮತ್ತು ಐಪಿಎಸ್ ಹುದ್ದೆಗಳು ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಬೇಕಾದ ಜವಾಬ್ದಾರಿಯುತ ಸ್ಥಾನಗಳಾಗಿವೆ.

ಸರ್ಕಾರ ಹಾಗೂ ಜನಸಾಮಾನ್ಯರ ಮಧ್ಯೆ ಸೇತುವೆಯಂತೆ ಕಾರ್ಯ ನಿರ್ವಹಿಸುವ ಹುದ್ದೆಗಳಾಗಿವೆ. ಸಾರ್ವಜನಿಕವಾಗಿ ಘನತೆ ಕಾಪಾಡಿಕೊಳ್ಳಲು ಈ ಇಬ್ಬರು ಅಧಿಕಾರಿಗಳಿಗೆ ಗೆ ಪ್ರಧಾನಮಂತ್ರಿಗಳು ಮತ್ತು ಗೃಹ ಸಚಿವರು ಸಲಹೆ ನೀಡಬೇಕೆಂದು ನಾನು ಕೋರುತ್ತೇನೆ ಎಂದು ಸಂಸದರು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಅನ್ನು ನರೇಂದ್ರ ಮೋದಿ, ಅಮಿತ್ ಶಾ ಮತ್ತು ರೂಪಾ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಅಧಿಕಾರಿಗಳಾ ರೂಪಾ ಡಿ ಮೌದ್ಗಿಲ್ ಮತ್ತು ರೋಹಿಣಿ ಸಿಂಧೂರಿ ಅವರ ಬಹಿರಂಗ ಕಿತ್ತಾಟ, ಆರೋಪ ಪ್ರತ್ಯಾರೋಪಗಳು ಮುಂದುವರಿಯುತ್ತಲೇ ಇವೆ. ಸುದ್ದಿಗೋಷ್ಠಿ ನಡೆಸುವ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆ, ಫೋಸ್ಟ್ ಹಾಕುವುದು ಮುಂದುವರಿದಿದೆ. ಈ ಸಂಘರ್ಷ ಬೇರೆಯದ್ದೆ ಆಯಾಮಗಳಿಗೆ ತಿರುಗುತ್ತಿದೆ. ಎಲ್ಲೆಡೆ ಇವರ ಸಂಘರ್ಷ ಬಗ್ಗೆ ತೀವ್ರ ಚರ್ಚೆಗಳಾಗುತ್ತವೆ. ರಾಜಕೀಯ ನಾಯಕರು ಸೇರಿದಂತೆ ಅನೇಕರು ಇವರ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ವಿವಿಧ ಆರೋಪಗಳ ಕುರಿತಾಗಿ ಸುದ್ದಿಯಾಗುತ್ತಿದ್ದ ರೋಹಿಣಿ ಸಿಂಧೂರಿಯವರು ಶಾಸಕ ಸಾ.ರಾ. ಮಹೇಶ್ ಜೊತೆಗೆ ಸಂಧಾನ ಯತ್ನ ನಡೆಸುತ್ತಿದ್ದಾರೆ ಎಂಬ ವಿಚಾರವನ್ನು ರೂಪಾ ಡಿ. ಮೌದ್ಗಿಲ್ ಪ್ರಸ್ತಾಪಿಸಿದರು. ಅಲ್ಲಿಂದ ತೀವ್ರ ವಾಗ್ದಾಳಿ ನಡೆಯಿತಿ. ಪ್ರತಿ ಆರೋಪಗಳು ಶುರುವಾದರು. ರೋಹಿಣಿಯವರ ಕೆಲವು ಖಾಸಗಿ ಫೋಟೊಗಳು ವೈರಲ್ ಆದವು. ನಂತರ ಇದು ನಗ್ನ ಚಿತ್ರ ಹಂಚಿಕೆಯಾಗಿರುವ ಮಟ್ಟಕ್ಕೆ ಬಂದು ನಿಂತಿದೆ.
ಮುಖ್ಯಮಂತ್ರಿಗಳು ಅಧಿಕಾರಿಗಳ ಬಳಿ ಸ್ಪಷ್ಟನೆಗಾಗಿ ನೋಟಿಸ್ ಜಾರಿ ಮಾಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದರು. ಮಂಗಳವಾರ ಇಬ್ಬರು ಅಧಿಕಾರಿಗಳು ನೋಟಿಸ್ ಸಹ ನೀಡಲಾಗಿದೆ. ಅಧಿಕಾರಿಗಳ ಶಿಸ್ತು ಉಲ್ಲಂಘನೆ, ದುರ್ನಡತೆ, ಸೇವಾ ನಿಯಮಗಳ ಉಲ್ಲಂಘನೆ ಆಗಿದೆ. ಸೂಕ್ತ ಕ್ರಮಕ್ಕೆ ಸರ್ಕಾರ ಸೂಚನೆ ನೀಡಿದೆ.












Click it and Unblock the Notifications