ಮೇಕೆದಾಟು ಯೋಜನೆ ಬಂದೇ ಬರುತ್ತೆ: ಹೀಗೆ ಹೇಳಿದ್ದು ಯಾರು?

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ರಾಜಕೀಯ ಜಿದ್ದಾಜಿದ್ದಿ ಶುರುವಾಗಿ, ಫೈಟಿಂಗ್ ಬಲು ಜೋರಾಗಿದೆ. ಹೀಗಿದ್ದಾಗ ಇಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಡಿ.ಕೆ. ಸುರೇಶ್ ಅವರು ಮೇಕೆದಾಟು ಯೋಜನೆಯ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್ ಅವರು ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಮಾತನಾಡಿದರು. 4ನೇ ಬಾರಿ ಈ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಮತ್ತೊಂದು ಅವಕಾಶ ನೀಡಿದೆ. ಕ್ಷೇತ್ರದ ಜನರು, ಈ ಹಿಂದೆ ನಾನು ಮಾಡಿರುವ ಕೆಲಸಗಳನ್ನು‌ ಬೆಂಬಲಿಸಲಿದ್ದಾರೆ. ಅಣ್ಣ, ತಮ್ಮ, ಮಗ ಮತ್ತು ಸ್ನೇಹಿತನಾಗಿ ಜನರ ಕೆಲಸವನ್ನು ಮಾಡಿದ್ದೇನೆ, ಎಂದು ಇದೇ ವೇಳೆ ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪ ಮಾಡಿದ್ದಾರೆ.

MP DK Suresh Said This About Mekedatu Project

10 ವರ್ಷ 8 ತಿಂಗಳ...

ನಮ್ಮ ಕೆಲಸಕ್ಕೆ ಜನ ಕೂಲಿ ನೀಡಲು ಸಿದ್ದರಾಗಿದ್ದಾರೆ. ಕಳೆದ 10 ವರ್ಷ 8 ತಿಂಗಳ ಕೆಲಸವು, ಜನರ ಮುಂದೆ ಇದೆ. ಇದೇ ಕಾರಣಕ್ಕೆ ನನಗೆ ನನ್ನ ಕೆಲಸಕ್ಕೆ ಕೂಲಿ ನೀಡಬೇಕು ಎಂದು ಜನರಲ್ಲಿ ಮನವಿ ಮಾಡುತ್ತಿದ್ದೇನೆ ಅಂತಾ ಡಿ.ಕೆ. ಸುರೇಶ್ ತಿಳಿಸಿದರು. ಇದೇ ವೇಳೆ ಮೇಕೆದಾಟು ಯೋಜನೆ ಬಗ್ಗೆ ಕೂಡ ಮಾತನಾಡಿದ್ದಾರೆ. ಹಾಗಾದ್ರೆ ಹಾಲಿ ಸಂಸದ ಡಿ.ಕೆ. ಸುರೇಶ್ ಅವರು ಮೇಕೆದಾಟು ಬಗ್ಗೆ ಹೇಳಿದ್ದೇನು? ಮುಂದೆ ಓದಿ.

ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ

ಕೇಂದ್ರದ ಧೋರಣೆ & ತೆರಿಗೆ ಮಲತಾಯಿ ಧೋರಣೆ, ನಮ್ಮ ತೆರಿಗೆ ಉತ್ತರ ಭಾರತಕ್ಕೆ ನೀಡುತ್ತಿರುವ ಬಗ್ಗೆ ನಾನು ಎತ್ತಿದ್ದ ಧ್ವನಿಯನ್ನು ಜನ ಮುನ್ನಡೆಸಲಿದ್ದಾರೆ ಅಂತಾ ಇದೇ ವೇಳೆ ತಿಳಿಸಿದ ಸಂಸದ ಡಿ.ಕೆ. ಸುರೇಶ್ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಭಾರತೀಯ, ಕನ್ನಡಿಗ. ಹೀಗಾಗಿ ಕನ್ನಡದ ಪರ ಕನ್ನಡಿಗರ ಸಮಸ್ಯೆಗೆ ಧ್ವನಿಯಾಗಿದ್ದೆ ಎಲ್ಲ ಧರ್ಮ, ಜಾತಿಗಳನ್ನು ಒಳಗೊಂಡ ಭಾರತೀಯ ಎಂದರು. ಅಲ್ಲದೆ ಇದೆ ವೇಳೆ ವಿರೋಧಿಗಳು ನನ್ನ ವಿರುದ್ಧ ಅಪಪ್ರಚಾರ, ಹೇಳಿಕೆ ತಿರಿಚಿದರೂ, ಜನ ನನ್ನೊಂದಿಗೆ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸೇಡಿನ ರಾಜಕಾರಣ?

1985 ರಿಂದ ಜಿಲ್ಲೆಯಲ್ಲಿ ಸೇಡಿನ ರಾಜಕೀಯ ನಡೆಯುತ್ತಿದೆ. ಒಂದೇ ಕುಟುಂಬ, ಏನೆಲ್ಲ ಮಾಡಿದೆ? ಏನೆಲ್ಲ ಹೇಳಿಕೆ ನೀಡಿದೆ? ಯಾರಿಗೆ ಕರ್ಮಭೂಮಿ ಆಗಲಿದೆ? ಎಂದು ಪರೋಕ್ಷವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೂಡ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ಆಯೋಗಕ್ಕೆ ಪತ್ರ ಬರೆಯುವ ಮೂಲಕ ಇನ್ನು ಇಡಿ, ಐಟಿ ಕಾಟ ನಿಂತಿಲ್ಲ ಎಂದು ಜೆಡಿಎಸ್ ಹೇಳುತ್ತಿದೆ . ಇದನ್ನೆಲ್ಲ ಜನ ನೋಡುತ್ತಿದ್ದಾರೆ‌. ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಕೇಂದ್ರದ ಮುಂದೆ ಇನ್ನುಳಿದ ಪಕ್ಷಗಳು ಕೇಳಬೇಕು ನಮ್ಮ ಸರ್ಕಾರ ಮೇಕೆದಾಟು ಯೋಜನೆ ಪೂರ್ತಿ ಮಾಡಲು ಸಿದ್ಧ. ನಮಗೆ ಕೇಂದ್ರ ಸರ್ಕಾರ ಅವಕಾಶ ನೀಡಿದರೆ ಸಾಕು ಎಂದಿದ್ದಾರೆ ಸಂಸದ ಡಿ.ಕೆ. ಸುರೇಶ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+