ಸಿಬಿಐ ತನಿಖೆಯಲ್ಲಿ ನಂಬಿಕೆಯಿಲ್ಲ: ಸಿಎಂ ಬಳಿ ಗೌರಿ ತಾಯಿ ಇಂಗಿತ
Recommended Video

ಬೆಂಗಳೂರು, ಸೆಪ್ಟೆಂಬರ್ 9: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸುವುದಕ್ಕಿಂತಲೂ ರಾಜ್ಯದ ಎಸ್ಐಟಿಯೇ ತನಿಖೆ ನಡೆಸಲಿ ಎಂದು ಗೌರಿ ಲಂಕೇಶ್ ತಾಯಿ ಇಂದಿರಾ ಲಂಕೇಶ್ ಆಗ್ರಹಿಸಿದ್ದಾರೆ.
ಶನಿವಾರ ಮಧ್ಯಾಹ್ನ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅವರು ಮಾತುಕತೆ ನಡೆಸಿದರು.

ಭೇಟಿಯ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ''ಈಗಾಗಲೇ ಅನೇಕ ಮಂದಿ ಗೌರಿ ಲಂಕೇಶ್ ಹತ್ಯೆಯ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ. ಆದರೆ, ಗೌರಿ ಅವರ ತಾಯಿಯವರೇ ತಮಗೆ ಸಿಬಿಐ ತನಿಖೆಯಲ್ಲಿ ನಂಬಿಕೆಯಿಲ್ಲ. ಈ ಪ್ರಕರಣವನ್ನು ತಮ್ಮ ರಾಜ್ಯದ ಪೊಲೀಸ್ ಇಲಾಖೆಯ ಎಸ್ಐಟಿಯೇ ತನಿಖೆ ನಡೆಸಲಿ ಎಂದು ಆಶಿಸಿದರು'' ಎಂದರು.
ಸೆಪ್ಟೆಂಬರ್ 5ರಂದು ರಾತ್ರಿ ಸುಮಾರು 8 ಗಂಟೆಗೆ, ನಗರದ ರಾಜರಾಜೇಶ್ವರಿ ನಗರದಲ್ಲಿರುವ ಗೌರಿ ಲಂಕೇಶ್ ಅವರ ನಿವಾಸದ ಮುಂದೆಯೇ ಅವರ ಹತ್ಯೆಯಾಗಿತ್ತು.
ಅಪರಿಚಿತರ ಗುಂಡಿನ ದಾಳಿಗೆ ಅವರು ಬಲಿಯಾಗಿದ್ದರು. ಅವರ ಸಾವಿಗೆ ಇಡೀ ವಿಶ್ವದೆಲ್ಲೆಡೆಯಿಂದ ಅನುಕಂಪ ವ್ಯಕ್ತವಾಗಿದ್ದು, ಅವರ ಸಾವಿನ ಸೂಕ್ತ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂಬ ಆಗ್ರಹಗಳು ಕೇಳಿಬಂದಿವೆ.












Click it and Unblock the Notifications