ಹದಗೆಟ್ಟ ಆರ್ಥಿಕ ಪರಿಸ್ಥಿತಿ, ಮಕ್ಕಳಿಬ್ಬರಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ
ಬೆಂಗಳೂರು, ಮಾರ್ಚ್ 16: ಬಡತನದಿಂದ ಬೇಸತ್ತು ಮಕ್ಕಳಿಬ್ಬರಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ದೊಡ್ಡ ತೋಗೂರಿನಲ್ಲಿ ನಡೆದ ಘಟನೆಯಲ್ಲಿ ರಾಧಮ್ಮ (55) ಸಂತೋಷ್(30) ಹಾಗೂ ಹರೀಶ್ (25) ಎನ್ನುವವರು ಮೃತಪಟ್ಟಿದ್ದಾರೆ. ರಾಧಮ್ಮನ ಇಬ್ಬರೂ ಮಕ್ಕಳು ವಿಶೇಷ ಚೇತನರಾಗಿದ್ದರು. ಅವರ ಹೊಟ್ಟೆ ತುಂಬಿಸಲು ಸಾಧ್ಯವಾಗುತ್ತಿರಲಿಲ್ಲ.

ಸುಮಾರು ವರ್ಷಗಳ ಹಿಂದೆಯೇ ಆಕೆಯ ಗಂಡ ಆಕೆಯನ್ನು ಬಿಟ್ಟು ಓಡಿ ಹೋಗಿದ್ದ, ಅಂದಿನಿಂದ ಇಬ್ಬರು ಮಕ್ಕಳನ್ನು ಆಕೆಯೇ ನೋಡಿಕೊಳ್ಳುತ್ತಿದ್ದಳು. ಕಡೆಗೊಮ್ಮೆ ಜೀವನದಲ್ಲೇ ಜಿಗುಪ್ಸೆಗೊಂಡಿರುವ ತಾಯಿ ತಮ್ಮಿಬ್ಬರು ಮಕ್ಕಳಿಗೂ ವಿಷ ಉಣ್ಣಿಸಿ ತಾನು ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.












Click it and Unblock the Notifications