ದೀಪಾವಳಿ ನೆಪದಲ್ಲಿ ಬೆಂಗಳೂರಲ್ಲೊಂದು ಅತಿ ಅಮಾನವೀಯ ಘಟನೆ
ಬೆಂಗಳೂರು, ನವೆಂಬರ್ 08: ಹಬ್ಬ ನಂಟು ಬೆಸೆಯಬೇಕು, ಸಂತಸ ತರಬೇಕು, ಮಾನವೀಯತೆ ಹುಟ್ಟಿಸಬೇಕು, ಆದರೆ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವುದೇ ಬೇರೆ. ದೀಪಾವಳಿ ಹಬ್ಬದ ನೆಪದಲ್ಲಿ ನಗರದ ಆರ್‌ಟಿ ನಗರದಲ್ಲಿ ಬಹು ಅಮಾನವೀಯ ಘಟನೆಯೊಂದು ನಡೆದಿದೆ.
ಆರ್‌ಟಿ ನಗರ ಬಳಿಯ ಮನೋರಾಯನ ಪಾಳ್ಯದಲ್ಲಿ ಗಂಡ-ಹೆಂಡತಿ ಇಬ್ಬರು ದೀಪಾವಳಿ ಹಬ್ಬ ಆರಂಭಕ್ಕೂ ಕೆಲ ದಿನಗಳ ಮುಂಚೆಯಿಂದಲೂ ಹಬ್ಬಕ್ಕೆ ದೊಡ್ಡ ಶಬ್ದ ಬರುವ ಪಟಾಕಿ ಹೊಡೆಯಬೇಡಿ ಎಂದು ಮನೆ-ಮನೆಗೆ ತೆರಳಿ ಕರಪತ್ರ ಹಂಚುತಿದ್ದರು. ಫ್ಲೆಕ್ಸ್‌ಗಳನ್ನು ಹಾಕಿದ್ದರು.
ಪ್ರಮೋದ್ ಜೋವರ್ಜನ್ ಹಾಗೂ ಸಿಮಿ ದಂಪತಿ ಹೀಗೆ ಕರಪತ್ರ ಹಂಚಲು ಯಾವುದೇ ಪ್ರಕೃತಿ ಉಳಿಸುವ ಉದ್ದೇಶವಿರಲಿಲ್ಲ ಆದರೆ ಅವರಿಗೆ ಅವರ ಎರಡು ವರ್ಷದ ಪುಟಾಣಿ ಮಗುವನ್ನು ಉಳಿಸಿಕೊಳ್ಳಬೇಕಿತಷ್ಟೆ. ಆದರೆ ಇದಕ್ಕೂ ಕೆಲ ನಿಷ್ಕರುಣ ಜನ ಒಪ್ಪಲಿಲ್ಲ. ಮಾನವೀಯತೆ ಸತ್ತೇ ಹೋಯಿತೆ ಎಂದು ಆ ದಂಪತಿಗೆ ಅನಿಸರಲಿಕ್ಕೂ ಸಾಕು.

ಜೋರು ಶಬ್ದ ಕೇಳದಂತೆ ತಡೆಯಬೇಕಿತ್ತು
ಪ್ರಮೋದ್ ಜೋವರ್ಜನ್-ಸಿಮಿ ಅವರ ಎರಡು ವರ್ಷದ ಮಗಳಿಗೆ ಕೆಲವು ತಿಂಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು, ಅದು ಮೆದುಳಿಗೆ ಸಂಬಂಧಿಸಿದ ಖಾಯಿಲೆಯೆಂದು ವೈದ್ಯರು ಹೇಳಿದರು. ದಂಪತಿ ಹಾಗೂ ವೈದ್ಯರ ಆರೈಕೆಯಿಂದ ಹೇಗೋ ಮಗು ಅಲ್ಪ-ಸ್ವಲ್ಪ ಚೇತರಿಸಿಕೊಂಡಿತ್ತು. ಮಗುವಿಗೆ ಶಾಕ್ ಆಗುವ ಘಟನೆಗಳು, ಶಬ್ದಗಳು ಕೇಳಿಸದಂತೆ ಮೆದುಳಿನ ಮೇಲೆ ಒತ್ತಡ ಬೀಳದಂತೆ ಕಾಪಾಡಿಕೊಳ್ಳಿ ಎಂಬುದೊಂದೆ ವೈದ್ಯರ ಸಲಹೆಯಾಗಿತ್ತು.

ಕರಪತ್ರಗಳನ್ನು ಮುದ್ರಿಸಿ ಹಂಚಿದ್ದ ದಂಪತಿ
ವೈದ್ಯರ ಸಲಹೆಯಂತೆ ಪೋಷಕರು ಆರೈಕೆ ಮಾಡುತ್ತಿದ್ದರು. ಆದರೆ ದೀಪಾವಳಿ ಅವರಿಗೆ ಆತಂಕ ತಂದಿತ್ತು ಹಾಗಾಗಿ ದೊಡ್ಡ ಶಬ್ದ ಬರುವ ಪಟಾಕಿಯನ್ನು ಹೊಡೆಯಬೇಡಿರೆಂದು, ತಮ್ಮ ಮಗುವಿಗಿರುವ ಸಮಸ್ಯೆಯನ್ನು ತಮ್ಮ ಮಗುವಿನ ಚಿತ್ರದೊಂದಿಗೆ ಮುದ್ರಿಸಿ ಕರಪತ್ರಗಳನ್ನು ಹಂಚಿದರು, ಫ್ಲೆಕ್ಸ್‌ಗಳನ್ನು ಕಟ್ಟಿದರು ಆದರೆ ಜನಕ್ಕೆ ಮಗುವಿನ ಜೀವಕ್ಕಿಂತ ಪಟಾಕಿಯೇ ಮುಖ್ಯವಾಗಿತ್ತು.

ಮನವಿ ಬಳಿಕವೂ ಪಟಾಕಿ ಹೊಡೆದರು
ಆ ನೊಂದ ದಂಪತಿಗಳ ಮನವಿಯ ಬಳಿಕವೂ ನಿನ್ನೆ (ನವೆಂಬರ್ 07) ರಾತ್ರಿ ಮನೋರಮಾ ಪಾಳ್ಯದಲ್ಲಿ ದಂಪತಿ ವಾಸಿಸುವ ಮನೆಯ ಬಳಿ ಪಟಾಕಿ ಹೊಡೆದಿದ್ದಾರೆ. ಶಬ್ದಕ್ಕೆ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಅದರ ಅಂಗಾಗ ಚಲನೆಯಲ್ಲಿ ವ್ಯತ್ಯಾಸವಾಗಿದೆ. ಕೂಡಲೆ ಅಸಹಾಯಕ ಅಪ್ಪ-ಅಮ್ಮ ಹೊರ ಬಂದು ಪಟಾಕಿ ಹಚ್ಚುವರ ಬಳಿ ಜಗಳ ಮಾಡಿದ್ದಾರೆ. ಆದರೆ ಇವರಿಗೆ ಬೆದರಿಸಿ ಕಳುಹಿಸಿದ್ದಾರೆ ಪುಂಡರು.

ಪೊಲೀಸರ ಮಾತಿಗೂ ಗೌರವ ಕೊಡಲಿಲ್ಲ
ಆ ನಂತರ ಪ್ರಮೋದ್ ಜೋವರ್ಜನ್ ಹೆಬ್ಬಾಳ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಬಂದು ಪಟಾಕಿ ಹಚ್ಚುತ್ತಿರುವವರಿಗೆ ಬುದ್ಧಿವಾದ ಹೇಳಿದ್ದಾರೆ. ಪೊಲೀಸರು ಹೋಗುವವರೆಗೆ ಸುಮ್ಮನಿದ್ದವರು ನಂತರ ಮತ್ತೆ ಪಟಾಕಿ ಹಚ್ಚಲು ಪ್ರಾರಂಭಿಸಿದ್ದಾರೆ. ಬೇಕೆಂದೆ ಭಾರಿ ಶಬ್ದ ಮಾಡುವ ಪಟಾಕಿಗಳನ್ನೇ ಹೊಡೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ
ಪಟಾಕಿ ಶಬ್ದಕ್ಕೆ ಮಗು ಅಳುತ್ತಿರುವ, ಅಂಗಾಂಗಳನ್ನು ವಿಚಿತ್ರವಾಗಿ ತಿರುಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಗುವಿನ ಪ್ರಾಣಕ್ಕೆ ಅಪಾಯವೇನೂ ಆಗಿಲ್ಲ ಎಂಬುದು ಸದ್ಯದ ನೆಮ್ಮದಿ ಆದರೆ ಮಗು ಆಸ್ಪತ್ರೆಯಲ್ಲಿ ವೈದ್ಯರ ನಿಗಾದಲ್ಲಿದೆ. ಮಗುವಿನ ಜೀವಕ್ಕೆ ಮರುಗದ ಜನರು ಕೋಟಿ ಹಬ್ಬ ಆಚರಿಸದರೆ ಏನು?, ಕೋಟಿ ದೇವರ ಪೂಜಿಸಿದರೆ ಏನು?, ಕೋಟಿ ದೇವಾಲಯಗಳನ್ನು ಕಟ್ಟಿದರೆ ಏನು? ಇದು ಆ ನೊಂದ ದಂಪತಿ ಕೇಳುತ್ತಿರುವ ಪ್ರಶ್ನೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು










Click it and Unblock the Notifications