ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವನಹಳ್ಳಿಯಲ್ಲಿ ಹೆಣ್ಣು ಮಕ್ಕಳ ಅತ್ಯಾಧುನಿಕ ಸರ್ಕಾರಿ ಶಾಲೆ ಉದ್ಘಾಟನೆ

By ದೇವನಹಳ್ಳಿ ಪ್ರತಿನಿಧಿ
|
Google Oneindia Kannada News

ದೇವನಹಳ್ಳಿ, ಜುಲೈ.03: ಪಟ್ಟಣದ ಕೋಟೆ ಬೀದಿಯಲ್ಲಿ ಎಂಬೆಸಿ ಸಮೂಹ ಮತ್ತು ಸ್ವಿಸ್ ರೇ ಫೌಂಡೇಶನ್ ಜತೆ ಸಹಭಾಗಿತ್ವದಲ್ಲಿ ಸುಮಾರು ೧.೫ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ
ಅತ್ಯಾಧುನಿಕ ಹೆಣ್ಣು ಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಎಂಬೆಸಿ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧ್ಯಕ್ಷ ಚಿತು ವಿರ್ವಾನಿ ಉದ್ಘಾಟಿಸಿದರು.

ನೂತನ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಮಕ್ಕಳಿಗೆ ಒಂದು ಗುಣಮಟ್ಟದ ಶಿಕ್ಷಣ ನೀಡುವ ಅಗತ್ಯವಿದೆ. ಏಕೆಂದರೆ ಭವಿಷ್ಯದ ಭಾರತ ಇದನ್ನೇ ಅವಲಂಬಿಸಿ ಬೆಳೆಯಲಿದೆ ಎನ್ನುವುದು ನಮ್ಮ ನಂಬಿಕೆ. ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಇದು ಅತ್ಯವಶ್ಯ ಎನ್ನುವುದು ನಮ್ಮ ಭಾವನೆ.

18 ಇಂದಿರಾ ಮೊಬೈಲ್ ಕ್ಯಾಂಟೀನ್ ಗಳು ಮಾತ್ರ ಲೋಕಾರ್ಪಣೆ 18 ಇಂದಿರಾ ಮೊಬೈಲ್ ಕ್ಯಾಂಟೀನ್ ಗಳು ಮಾತ್ರ ಲೋಕಾರ್ಪಣೆ

ಈ ನಿಟ್ಟಿನಲ್ಲಿ ನಾವು ಸ್ವೀಸ್ ರೇ ಫೌಂಡೇಶನ್ ಹಾಗೂ ಬೆಂಗಳೂರು ಉತ್ತರ ರೌಂಡ್ ಟೇಬಲ್ ಸಹಯೋಗ ಹೊಂದುತ್ತಿರುವುದಕ್ಕೆ ಹೆಮ್ಮೆ ಪಡುತ್ತೇವೆ. ಒಂದು ಒಳ್ಳೆಯದರೆಡೆಗೆ ನಾವು ಅವರೊಂದಿಗೆ ಹೆಜ್ಜೆ ಹಾಕುತ್ತಿರುವ ಸಂತಸ ಇದೆ. ಸಮಾಜದ ಉನ್ನತಿ ಹಾಗೂ ಮುಂದುವರಿಕೆಗೆ ನಮ್ಮ ಎಲ್ಲಾ ವಿವಿಧ ಸಹಕಾರ ಈಗ ಹಾಗೂ ಮುಂದೆ ಇರುತ್ತದೆ ಎಂದು ತಿಳಿಸಿದರು.

Most advanced Girls Government School inaugurated in Devanahalli.

ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿ ದೇವಿ ಮಾತನಾಡಿ, ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಸಹ ಹೆಚ್ಚಿದೆ. ಕಾರ್ಪೋರೇಟ್ ಕಂಪನಿಗಳು ಈ ರೀತಿ ಪ್ರಾಯೋಜಕತ್ವ ನೀಡುವುದರಿಂದ ಮಕ್ಕಳಲ್ಲಿ ಕಲಿಕ ಸಾಮರ್ಥ್ಯ ಹೆಚ್ಚುತ್ತದೆ. ಆತ್ಯಾಧುನಿಕ ಶಾಲೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.

ಇನ್ನೂ ದೇವನಹಳ್ಳಿ ತಾಲೂಕಿನಲ್ಲಿ ಹಳೆ ಸರ್ಕಾರಿ ಶಾಲೆಯ ಕಟ್ಟಡಗಳು ಕಾರ್ಯನಿರ್ವಹಿಸುತ್ತಿವೆ. ಅಂತಹ ಕಟ್ಟಡಗಳನ್ನು ಗುರುತಿಸಿ ಖಾಸಗಿ ಕಂಪನಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.

ಎಂಬೆಸಿ ಆಫೀಸ್ ಪಾರ್ಕ್‌ನ ಸಿಇಒ ಮೈಕ್ ಹೋಲೆಂಡ್ ಮಾತನಾಡಿ, ಕಾರ್ಪೋರೇಟ್ ಕಂಪನಿಗಳು ಸರ್ಕಾರದ ಅಧೀನದಲ್ಲಿರುವ ಶಾಲೆಗಳ ಹಾಗೂ ಶಾಲಾ ಮಕ್ಕಳ ಅನುಕೂಲಕ್ಕೆ ಕೈ ಜೋಡಿಸಲು ಸಿದ್ದವಿರುತ್ತದೆ ಎಂದು ಹೇಳಿದರು.

ನೂತನವಾಗಿ ನಿರ್ಮಿಸಿರುವ ಶಾಲೆಯಲ್ಲಿ ಸುಸಜ್ಜಿತವಾದ ಕೊಠಡಿಗಳು, ಸಿಬ್ಬಂದಿ ಕೊಠಡಿ, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಬಹುಪಯೋಗಿ ಸಭಾಂಗಣ, ಅಡುಗೆಮನೆ ಹಾಗೂ ಶೌಚಾಲಯವಿದೆ.

English summary
Today the most advanced Girls Government School inaugurated in Devanahalli. The school was built at a cost of Rs 1.5 crore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X