ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹವಾಮಾನ ಬದಲಾವಣೆ: ಹೆಚ್ಚುತ್ತಿದೆ ಸೊಳ್ಳೆಗಳ ಸಂತತಿ,ಆತಂಕ

By Nayana
|
Google Oneindia Kannada News

ಬೆಂಗಳೂರು, ಮೇ1: ಪ್ರತಿ ನಿತ್ಯವೂ ಹವಾಮಾನ ಬದಲಾಗುತ್ತಲೇ ಇದೆ ಆದರೆ ಇದು ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂದು ಯಾರಾದರೂ ಯೋಚಿಸಿದ್ದೀರಾ? ಇದರಿಂದ ಸೊಳ್ಳೆಯ ಸಂತತಿಯೂ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ವೈಟ್‌ಫೀಲ್ಡ್‌ನ ಸಿಟಿಜನ್ ಗ್ರೂಪ್ ಈ ಕುರಿತು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಇದಕ್ಕೆ ನಗರದ ವಿವಿಧ ವಿಭಾಗದಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲ ಭಾಗದಲ್ಲೂ ಸೊಳ್ಳೆಯ ಸಂತತಿಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಕೆಂಗೇರಿ, ವೈಟ್‌ಫೀಲ್ಡ್, ಎಚ್‌ಎಸ್‌ಆರ್ ಲೇಔಟ್‌, ಯಲಚೇನಹಳ್ಳಿ ಸೇರಿದಂತೆ ಅನೇಕ ಭಾಗಗಳಲ್ಲಿ ಒಳಚರಂಡಿ ಮುಚ್ಚಿಗೆ ತೆಗೆದಿರುವ ಕಾರಣದಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ.

ವಿಮಾನದಲ್ಲಿ ಸೊಳ್ಳೆ ಎಂದು ದೂರು ನೀಡಿದ ಡಾಕ್ಟರ್‌, ಮುಂದೇನಾಯ್ತು?ವಿಮಾನದಲ್ಲಿ ಸೊಳ್ಳೆ ಎಂದು ದೂರು ನೀಡಿದ ಡಾಕ್ಟರ್‌, ಮುಂದೇನಾಯ್ತು?

ಉತ್ತರ ಹಳ್ಳಿ ಕೆಂಗೇರಿ ಮುಖ್ಯರಸ್ತೆಯಲ್ಲಿ ನೂತನ ರಸ್ತೆ ನಿರ್ಮಿಸಿ ರಸ್ತೆಯನ್ನು ಅಗಲವಾಗಿಸಿದ್ದಾರೆ. ರಸ್ತೆ ನಿರ್ಮಾಣಗೊಂಡು ಕಾರ್ಯ ಸಂಪೂರ್ಣವಾಗಿ ಪೂರ್ಣಗೊಂಡ ನಂತರ ಒಂದು ಕಿ.ಮೀ ಅಂತರದಲ್ಲಿ ಸುಮಾರು 8ರಿಂದ 10 ಹತ್ತು ಕಡೆಗಳಲ್ಲಿ ಚರಂಡಿಯನ್ನು ಅಗೆಯಲಾಗಿದೆ. ನರಕ ಸದೃಶ್ಯ ಗುಂಡಿಗಳನ್ನು ತೆಗೆದು ಹಾಗೆಯೇ ಬಿಟ್ಟಿದ್ದಾರೆ.

Mosquito menace returns to haunt Bengalureans

ಇದರಿಂದಾಗಿ ಮಳೆಯ ನೀರು ಕೂಡ ಅಲ್ಲಲ್ಲಿ ನಿಲ್ಲುತ್ತಿದೆ. ಈ ಒಳಚರಂಡಿ ಸೊಳ್ಳೆ ಉತ್ಪತ್ತಿ ಕೇಂದ್ರಗಳಾಗಿವೆ. ಇದಲ್ಲದೆ ಕಳೆದ ಕೆಲವು ದಿನ ಸುರಿದ ಮಳೆಯಿಂದ ತ್ಯಾಜ್ಯಗಳಲ್ಲಿ ನೀರು ಶೇಖರಣೆಯಾಗಿರುವುದು ಸೊಳ್ಳೆ ಸಂತತಿ ಹೆಚ್ಚಲು ಕಾರಣವಾಗುತ್ತಿದೆ ಎಂದು ದೂರಿದ್ದಾರೆ.

ನಗರದಲ್ಲಿ ಈವರೆಗೆ ಸಾಂಕ್ರಾಮಿಕ ರೋಗಗಳು ಪತ್ತೆಯಾಗಿಲ್ಲ, ಹೀಗಾಗಿಯೂ ಪಾಲಿಕೆ ಆರೋಗ್ಯ ವಿಭಾಗ ಸೊಳ್ಳೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಪ್ರಕರಣಗಳು ದಾಖಲಾದಲ್ಲಿ ಮಾತ್ರ ಸೊಳ್ಳೆ ನಿಯಂತ್ರಣಕ್ಕೆ ಹೊಗೆ ಹಾಕಲು ಸೂಚಿಸಲಾಗುತ್ತದೆ ಎಂದು ಪಾಲಿಕೆ ಮುಖ್ಯ ಆರೋಗ್ಯ ಅಧಿಕಾರಿ ಡಾ. ಎಂ.ಎನ್‌. ಲೋಕೇಶ್ ತಿಳಿಸಿದ್ದಾರೆ.

ಹವಾಮಾನ ಬದಲಾವಣೆಯಿಂದ ಅನೇಕ ಆರೋಗ್ಯಕರ ತೊಂದರೆ ಸಾಮಾನ್ಯವಾಗಿ ಕಾಣಿಸಿಕೊಂಡರೆ ಇನ್ನು ಕೆಲವೊಂದು ನಮ್ಮ ಕೈಯಿಂದ ನಾವೇ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಎಲ್ಲೂ ನೀರು ನಿಲ್ಲದಂತೆ ಗಮನ ಹರಿಸುವ ಅಗತ್ಯವಿದೆ. ಇನ್ನು ಜಲಮಂಡಳಿಯು ಈ ಒಳಚರಂಡಿ ಪೈಪ್ ಗಳನ್ನು ಆದಷ್ಟು ಬೇಗ ಮುಚ್ಚುವ ಪ್ರಯತ್ನ ಮಾಡಬೇಕಿದೆ.

English summary
Apart from the rising temperature, Bengalureans are now dealing with another menace: surge in mosquito population. Citizen group Whitefield Rising took to Twitter on Sunday, claiming, “We have been straight up just killing mosquitoes tonight. What is with this infestation across Whitefield.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X