ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 3 ಲಕ್ಷ ಬಾಂಗ್ಲಾದೇಶದ ಅಕ್ರಮ ವಲಸಿಗರು: ಭಾಸ್ಕರ್ ರಾವ್‌

|
Google Oneindia Kannada News

ಬೆಂಗಳೂರು, ಜನವರಿ 30: ನಗರದಲ್ಲಿ ಸುಮಾರು ಮೂರು ಲಕ್ಷ ಜನ ಬಾಂಗ್ಲಾದೇಶದ ಅಕ್ರಮ ವಲಸಿಗರು ನೆಲೆಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ಬಹುತೇಕ ಬಾಂಗ್ಲಾದೇಶಿ ಅಕ್ರಮ ವಲಸಿಗರು ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಅವರ ಸಂಖ್ಯೆ ದಿನೇ-ದಿನೇ ಹೆಚ್ಚಾಗುತ್ತಿದೆ' ಎಂದಿದ್ದಾರೆ.

ಅಮೆರಿಕದೊಳಗೆ ಭಾರತೀಯ ವಲಸಿಗರು ಅಕ್ರಮವಾಗಿ ಪ್ರವೇಶಿಸುವುದು ಹೇಗೆ ಗೊತ್ತೇ?ಅಮೆರಿಕದೊಳಗೆ ಭಾರತೀಯ ವಲಸಿಗರು ಅಕ್ರಮವಾಗಿ ಪ್ರವೇಶಿಸುವುದು ಹೇಗೆ ಗೊತ್ತೇ?

'ಬಾಂಗ್ಲಾದೇಶ ಅಕ್ರಮ ವಲಸಿಗರು ದಿನಕ್ಕೆ ಕೇವಲ 150-200 ರೂಪಾಯಿ ಕೂಲಿಗೆ ಕೆಲಸ ಮಾಡಲು ಸಿದ್ಧರಿದ್ದಾರೆ. ಸ್ಥಳೀಯ ಕೂಲಿ ಕಾರ್ಮಿಕರು 500-600 ಕೂಲಿ ಕೇಳುತ್ತಾರೆ. ಹಾಗಾಗಿ ಬಿಲ್ಡರ್‌ಗಳು ಸಹ ಬಾಂಗ್ಲಾ ಅಕ್ರಮ ವಲಸಿಗರನ್ನೇ ನೆಚ್ಚಿಕೊಂಡಿದ್ದಾರೆ' ಎಂದು ಅವರು ಹೇಳಿದರು.

More Than 3 Lakh Bangladeshi Illegal Immigrants In Bengaluru: Bhaskar Rao

'ನಗರದಲ್ಲಿ ಕಟ್ಟಡ ನಿರ್ಮಾಣ ವೇಳೆ ಅವಘಡಕ್ಕೆ ತುತ್ತಾಗಿ 365 ಮಂದಿ ಅಸುನೀಗಿದ್ದಾರೆ. ಈ ಪ್ರಕರಣಗಳಲ್ಲಿ ಗುತ್ತಿಗೆದಾರರು, ಮನೆ ಮಾಲೀಕರ ಮೇಲೆ ಪ್ರಕರಣ ದಾಖಲಾಗಿವೆ. ಕಾರ್ಮಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕಿದೆ' ಎಂದರು.

ಬಾಂಗ್ಲಾ ಗುಮ್ಮ ತೋರಿಸಿ, ಬಡಪಾಯಿಗಳನ್ನು ಬೀದಿಗೆ ತಂದ ಬಿಬಿಎಂಪಿ!ಬಾಂಗ್ಲಾ ಗುಮ್ಮ ತೋರಿಸಿ, ಬಡಪಾಯಿಗಳನ್ನು ಬೀದಿಗೆ ತಂದ ಬಿಬಿಎಂಪಿ!

ಕಾರ್ಮಿಕರು ನೆಲೆಸಿರುವ ಸ್ಥಳಗಳಲ್ಲಿ ಕಳ್ಳತನ-ಕೊಲೆ-ಸುಲಿಗೆಗಳ ಪ್ರಕರಣಗಳು ಹೆಚ್ಚಾಗುತ್ತಿವೆ. ಜಗಳಗಳು ಕೊಲೆಯಲ್ಲಿ ಅಂತ್ಯವಾಗುತ್ತಿವೆ ಅವರಿಗೆ ಸೂಕ್ತ ರಕ್ಷಣೆಯ ಜೊತೆಗೆ ಸಾಕ್ಷರರನ್ನಾಗಿ ಮಾಡಬೇಕಿದೆ' ಎಂದು ಅವರು ಹೇಳಿದರು.

ಸಿಎಎ ಬಳಿಕ ವಲಸಿಗರಲ್ಲಿ ಭಯ: ಬಾಂಗ್ಲಾಕ್ಕೆ ದೌಡುಸಿಎಎ ಬಳಿಕ ವಲಸಿಗರಲ್ಲಿ ಭಯ: ಬಾಂಗ್ಲಾಕ್ಕೆ ದೌಡು

ಇದೇ ಕಾರ್ಯಕ್ರಮದಲ್ಲಿದ್ದ ಕಾರ್ಮಿಕ ಸಚಿವರೂ ಆಗಿರುವ ಸುರೇಶ್ ಕುಮಾರ್ ಮಾತನಾಡಿ, 'ಅಪಘಾತ, ಅವಘಡಗಳು ಆದಾಗ ಕಾರ್ಮಿಕರಿಗೆ ಸೂಕ್ತ ನ್ಯಾಯ ಒದಗಿಸುವ ಕಾರ್ಯ ಮಾಡಲಾಗುವುದು. ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲಾಗುವುದು' ಎಂದರು.

English summary
Bengaluru police commissioner Bhaskar Rao said there are more than 3 lakh Bangladeshi illegal immigrants in Bengaluru and their numbers are rising.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X