ಕಾಂಗ್ರೆಸ್ ನ 20 ಶಾಸಕರು ರಾಜೀನಾಮೆ ನೀಡುತ್ತಾರೆ: ಬಿಎಸ್ ವೈ

Recommended Video

      ಕಾಂಗ್ರೆಸ್ ಬಗ್ಗೆ ಆಘಾತಕಾರಿ ವಿಷಯವನ್ನ ಬಾಯ್ಬಿಟ್ಟ ಬಿ ಎಸ್ ಯಡಿಯೂರಪ್ಪ | Oneindia Kannada

      ಬೆಂಗಳೂರು, ಮೇ 10: "ಕಾಂಗ್ರೆಸ್ ನ 20 ಶಾಸಕರು ಯಾವಾಗ ಬೇಕಾದರೂ ರಾಜೀನಾಮೆ ನೀಡಬಹುದು. ಕಾದು ನೋಡಿ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

      ಲೋಕಸಭೆ ಚುನಾವಣೆ ನಂತರ ಕರ್ನಾಟಕದ ರಾಜಕೀಯದಲ್ಲೂ ಭಾರೀ ಬದಲಾವಣೆಯಾಗಲಿದ್ದು, ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಅವರು ಹೇಳಿದ್ದಾರೆ.

      ಕಾಂಗ್ರೆಸ್ ನ 20 ಕ್ಕೂ ಹೆಚ್ಚು ಶಾಸಕರಿಗೆ ಸರ್ಕಾರದ ಬಗ್ಗೆ ಉತ್ತಮ ಅಭಿಪ್ರಾಯವಿಲ್ಲ. ಅವರೆಲ್ಲ ಯಾವುದೇ ಕ್ಷಣದಲ್ಲಿ, ಏನು ನಿರ್ಧಾರವನ್ನು ಬೇಕಾದರೂ ತೆಗೆದುಕೊಳ್ಳಬಹುದು. ಕಾದು ನೋಡಿ ಎಂದು ಅವರು ಹೇಳಿದರು.

      More than 20 MLAS might take any decision at any time: BS Yeddyurappa

      ಲೋಕಸಭೆ ಚುನಾವಣೆಯ ನಂತರ ಕರ್ನಾಟಕದಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗೆಲ್ಲಲಿದ್ದು, ನಂತರ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಈಗಾಗಲೇ ಯಡಿಯೂರಪ್ಪ ಹಲವು ಬಾರಿ ಹೇಳುತ್ತ ಬಂದಿದ್ದಾರೆ.

      ಅದೂ ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬ ಬೇಡಿಕೆ ಎದ್ದಿದ್ದು, ಬಿಜೆಪಿ ಈ ಸನ್ನಿವೇಶವನ್ನೂ ತನ್ನ ಲಾಭಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+