• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ಬುಲೆಟಿನ್: 174 ವಾರ್ಡ್‌ಗಳಲ್ಲಿ ಹೆಚ್ಚು ಕೊರೊನಾ ಕೇಸ್

|

ಬೆಂಗಳೂರು, ಆಗಸ್ಟ್ 7: ಬೆಂಗಳೂರಿನಲ್ಲಿ ಗುರುವಾರ ಕಂಟೈನ್‌ಮೆಂಟ್ ಜೋನ್‌ಗಳ ಸಂಖ್ಯೆ 267 ರಷ್ಟು ಇಳಿಕೆಯಾಗಿದ್ದು, ಸದ್ಯ ಸಿಲಿಕಾನ್ ಸಿಟಿಯಲ್ಲಿ ಸಕ್ರಿಯ ಧಾರಕ ವಲಯದ ಸಂಖ್ಯೆ 13,635ಕ್ಕೆ ಇಳಿಕೆಯಾಗಿದೆ.

   ಗಾಣಗಪುರದ ದತ್ತನ ದರ್ಶನವೇ ಡಿಕೆ ಶಿವಕುಮಾರ್ ಗೆ ಮುಳುವಾಯ್ತಾ? | Oneindia Kannada

   ಇದುವರೆಗೂ ಬೆಂಗಳೂರಿನಲ್ಲಿ ಒಟ್ಟು ಕಂಟೈನ್‌ಮೆಂಟ್ ಜೋನ್‌ಗಳ ಸಂಖ್ಯೆ 26,339 ರಷ್ಟಿದೆ ಎಂದು ಬೆಂಗಳೂರು ಮಹಾನಗರ ಪಾಲಿಕೆ ಗುರುವಾರ ಬಿಡುಗಡೆ ಮಾಡಿದ ಬುಲೆಟಿನ್‌ನಲ್ಲಿ ತಿಳಿಸಿದೆ. ಬೆಂಗಳೂರು ದಕ್ಷಿಣದಲ್ಲಿ (2,796) ಅತಿ ಹೆಚ್ಚು ಸಕ್ರಿಯ ಧಾರಕ ವಲಯಗಳಿವೆ. ಬೆಂಗಳೂರು ಪೂರ್ವ 2,656, ಬೆಂಗಳೂರು ಪಶ್ಚಿಮ 2,349 ಕಂಟೈನ್‌ಮೆಂಟ್ ಜೋನ್ ಇದೆ.

   ಕರ್ನಾಟಕದಲ್ಲಿ ದಾಖಲೆ ಬರೆದ ಕೊರೊನಾವೈರಸ್: ಅದು ಹೇಗೆ ಅಂತೀರಾ?

   ರಾಜ್ಯ ರಾಜಧಾನಿಯಲ್ಲಿ ಗುರುವಾರ 2,544 ಹೊಸ ಪ್ರಕರಣಗಳನ್ನು ವರದಿಯಾಗಿದ್ದು, ಬೆಂಗಳೂರು ಪಶ್ಚಿಮದಲ್ಲಿ 27%, ಬೆಂಗಳೂರು ಪೂರ್ವ 17%, ಬೊಮ್ಮನಹಳ್ಳಿ 17% ಮತ್ತು ಬೆಂಗಳೂರು ದಕ್ಷಿಣ 14%, ಆರ್.ಆರ್.ನಗರದಲ್ಲಿ 8%, ಮಹಾದೇವಪುರ ಹಾಗೂ ದಾಸರಹಳ್ಳಿ ತಲಾ 6% ಮತ್ತು ಯಲಹಂಕದಲ್ಲಿ 5% ಪ್ರಕರಣಗಳು ವರದಿಯಾಗಿದೆ.

   ಬೆಂಗಳೂರು ದಕ್ಷಿಣದಲ್ಲಿ ಹೆಚ್ಚು ಜನರು ಕೊರೊನಾದಿಂದ ಚೇತರಿಕೆ ಕಂಡಿದ್ದಾರೆ. ಬೆಂಗಳೂರಿನ 198 ವಾರ್ಡ್‌ಗಳ ಪೈಕಿ 174 ವಾರ್ಡ್‌ಗಳಲ್ಲಿ 140 ಕ್ಕೂ ಹೆಚ್ಚು ಪ್ರಕರಣಗಳಿವೆ.

   ಆಗಸ್ಟ್ 6ರಂದು, 54 ವಾರ್ಡ್‌ಗಳಲ್ಲಿ 11-30 ಪ್ರಕರಣಗಳು, 27 ವಾರ್ಡ್‌ಗಳಲ್ಲಿ 9-10 ಪ್ರಕರಣಗಳು, 29 ವಾರ್ಡ್‌ಗಳಲ್ಲಿ 7-8 ಪ್ರಕರಣಗಳು, 31 ವಾರ್ಡ್‌ಗಳಲ್ಲಿ 5-6 ಪ್ರಕರಣಗಳು, 33 ವಾರ್ಡ್‌ಗಳಲ್ಲಿ 3-4 ಪ್ರಕರಣಗಳು, 20 ವಾರ್ಡ್‌ಗಳಲ್ಲಿ 1-2 ಪ್ರಕರಣಗಳನ್ನು ವರದಿಯಾಗಿದೆ ಎಂದು ಬಿಬಿಎಂಪಿ ವಿವರ ನೀಡಿದೆ. ಕೇವಲ ನಾಲ್ಕು ವಾರ್ಡ್‌ಗಳಲ್ಲಿ ಗುರುವಾರ ಯಾವುದೇ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ.

   ಗುರುವಾರ ಕರ್ನಾಟಕದಲ್ಲಿ 6805 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 158254ಕ್ಕೆ ಏರಿಕೆಯಾಗಿದೆ.

   English summary
   More Than 140 COVID-19 Patients in 174 Wards of Bengaluru, More Recoveries in South Zone.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X