ಕುಮಾರಸ್ವಾಮಿ ಕಚೇರಿಯಲ್ಲಿ ಗುತ್ತಿಗೆ ನೌಕರರ ದರ್ಬಾರ್

ಬೆಂಗಳೂರು, ಅಕ್ಟೋಬರ್ 13: ರಾಜ್ಯದ ರೈತರ ಸಾಲ ಮನ್ನಾ ಯೋಜನೆ ಮುಂದಿಟ್ಟುಕೊಂಡು ಪ್ರತಿಯೊಂದರಲ್ಲೂ ಆರ್ಥಿಕ ಮುಗ್ಗಟ್ಟಿನ ನೆಪ ಹೇಳುತ್ತಿರುವ ಕುಮಾರಸ್ವಾಮಿ ತಮ್ಮ ಕಚೇರಿಯಲ್ಲಿ ಸರ್ಕಾರದ ಐಎಎಸ್ ಅಧಿಕಾರಿ ಯಿಂದ ಹಿಡಿದು ಗುಮಾಸ್ತರ ವರೆಗೆ ಅಧಿಕಾರಿ ಸಿಬ್ಬಂದಿಗಳನ್ನು ಹೊಂದಿದ್ದರೂ ಹೆಚ್ಚುವರಿಯಾಗಿ 100ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಮೂಲಗಳ ಪ್ರಕಾರ ನೇಮಕಗೊಂಡಿರುವ ನೂರಕ್ಕೂ ಹೆಚ್ಚು ಗುತ್ತಿಗೆ ನೌಕರರಲ್ಲಿ ಹಾಸನ, ಮಂಡ್ಯ ಹಾಗೂ ರಾಮನಗರ ಜಿಲ್ಲೆಯ ಜನರೇ ತುಂಬಿಕೊಂಡಿದ್ದಾರೆ ಎಂಬ ಆಕ್ಷೇಪವೂ ಕೇಳಿಬಂದಿದೆ.

ರಾಜ್ಯದಲ್ಲಿ ಪ್ರಕೃತಿ ವಿಕೋಪ ಹಾಗೂ ರೈತರ ಸಾಲಮನ್ನಾದಿಂದ ಹೆಚ್ಚು ಆರ್ಥಿಕ ಸಮಸ್ಯೆ ಉಂಟಾಗಿದೆ. ಹಾಗಾಗಿ ಸಚಿವರ ಕಾರು, ಬಂಗಲೆ ಸೇರಿದಂತೆ ಅನೇಕ ವಿಚಾರಗಳೊಗೆ ಕಡಿವಾಣ ಹಾಕಲು ಮುಂದಾಗಿದ್ದ ಕುಮಾರಸ್ವಾಮಿಯವರು ನೂರಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ನೇಮಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಮೈಸೂರು ದಸರಾ - ವಿಶೇಷ ಪುರವಣಿ

More than 100 contract employees in CM office

ಮುಖ್ಯಮಂತ್ರಿ ಕಚೇರಿಯಲ್ಲಿ 500ಕ್ಕೂ ಹೆಚ್ಚು ನೌಕರರಿದ್ದಾರೆ, ಇತಿಹಾಸದಲ್ಲೇ ಯಾವ ಉಖ್ಯಮಂತ್ರಿಯೂ ಹೊಂದಿರದ ನೌಕರರನ್ನು ಕುಮಾರಸ್ವಾಮಿ ಹೊಂದಿದ್ದಾರೆ, ಅಪರ ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲಿ 6 ಜನ ಗುತ್ತಿಗೆ ಸಿಬ್ಬಂದಿ, ಜಂಟಿ ಕಾರ್ಯದರ್ಶಿ ಕಚೇರಿಯಲ್ಲಿ 22 ಮಂದಿ ಸಿಬ್ಬಂದಿ, ಆಡಳಿತ ಶಾಖೆಯಲ್ಲಿ 14 ಜನ ಗುತ್ತಿಗೆ ಸಿಬ್ಬಂದಿ, ರವಾನೆ ಶಾಖೆಯಲ್ಲಿ 13 ಗುತ್ತಿಗೆ ನೌಕರರು, ಮಾಧ್ಯಮ ಕಾರ್ಯದಾಇF ಕಚೇರಿಯಲ್ಲಿ 11 ಜನ ಗುತ್ತಿಗೆ ನೌಕರರಿದ್ದಾರೆ. ವಿಶೇಷ ಕರ್ತವ್ಯ ಅಧಿಕಾರಿ ಕಚೇರಿಯಲ್ಲಿ 10 ಜನ , ಸಹಾಕಯರಾಗಿ 90ಕ್ಕೂ ಹೆಚ್ಚು ಜನ ಗುತ್ತಿಗೆ ಕೆಲಸಗಾರರು ನೇಮಿಸಿಕೊಳ್ಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+