ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೇವಣ್ಣ ಬೆಂಗಾವಲು ವಾಹನದಲ್ಲಿ ಹಣ ಪತ್ತೆ ಪ್ರಕರಣಕ್ಕೆ ಭರ್ಜರಿ ತಿರುವು

|
Google Oneindia Kannada News

Recommended Video

ಚುನಾವಣಾ ಆಯೋಗಕ್ಕೆ ಪತ್ರ ಬರೆದ ಚುನಾವಣಾ ವಿಶೇಷಾಧಿಕಾರಿ

ಬೆಂಗಳೂರು, ಏಪ್ರಿಲ್ 22: ಸಚಿವ ಎಚ್‌.ಡಿ.ರೇವಣ್ಣ ಅವರ ಬೆಂಗಾವಲು ವಾಹನದಲ್ಲಿ 1.2 ಲಕ್ಷ ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಈ ಪ್ರಕರಣ ಸರಳದ್ದಲ್ಲ ಮತ್ತು ಪ್ರಕರಣದಲ್ಲಿ ರಾಜಕಾರಣಿಗಳು ಅಕ್ರಮಕ್ಕೆ ಹೇಗೆ ಇಲಾಖೆಗಳನ್ನು ಬಳಸಿಕೊಳ್ಳುತ್ತವೆ ಎಂಬುದು ಜಾಹೀರಾಗುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರಕರಣ ಕುರಿತು ಪ್ರಾಥಮಿಕ ತನಿಖೆ ನಡೆಸಿರುವ ಚುನಾವಣಾ ವಿಶೇಷಾಧಿಕಾರಿ ಮನೀಶ್ ಮೌದ್ಗಿಲ್ ಅವರು ಚುನಾವಣಾ ಆಯೋಗಕ್ಕೆ ಪ್ರಕರಣ ಕುರಿತು ಪತ್ರ ಬರೆದಿದ್ದು, ರೇವಣ್ಣ ಅವರ ಬೆಂಗಾವಲು ವಾಹನದಲ್ಲಿ ಹಣ ಸಿಕ್ಕಿದ್ದು ಪೊಲೀಸ್ ವಾಹನದಲ್ಲಿ ಎಂದು ಹೇಳಿದ್ದಾರೆ.

ಬೆಂಗಾವಲು ವಾಹನದಲ್ಲಿ ಹಣ, ಬಿಜೆಪಿಯ ಕುತಂತ್ರ ಎಂದ ರೇವಣ್ಣಬೆಂಗಾವಲು ವಾಹನದಲ್ಲಿ ಹಣ, ಬಿಜೆಪಿಯ ಕುತಂತ್ರ ಎಂದ ರೇವಣ್ಣ

ರೇವಣ್ಣ ಅವರ ಬೆಂಗಾವಲು ವಾಹನಗಳಲ್ಲಿ ಇನ್ನೋವಾ ಕಾರೊಂದರಲ್ಲಿ 1.2 ಲಕ್ಷ ಹಣ ಸಿಕ್ಕಿತ್ತು, ಇದರ ಸಂಬಂಧ ಹೊಳೆನರಸೀಪುರ ಠಾಣೆಯಲ್ಲಿ ಐಟಿ ಇಲಾಖೆಯು ದೂರು ನೀಡಿತ್ತು ಮತ್ತು ಎಫ್‌ಐಆರ್ ಸಹ ದಾಖಲಿಸಲಾಗಿತ್ತು.

Money seized in HD Revanna convoy car case gets big twist

ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಮನೀಶ್ ಮೌದ್ಗಿಲ್, ದಾಖಲೆ ರಹಿತ ಹಣ ಪತ್ತೆ ಆದ ವಾಹನವು ಪೊಲೀಸ್ ಇಲಾಖೆಗೆ ಸೇರಿದ್ದು, ಅದು ಬೆಂಗಳೂರು ಪೊಲೀಸರ ವಾಹನವಾಗಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ರೇವಣ್ಣ, ಪುಟ್ಟರಾಜುಗೆ ಐಟಿ ಶಾಕ್: ಆಪ್ತರ ಮನೆ ಮೇಲೆ ದಾಳಿರೇವಣ್ಣ, ಪುಟ್ಟರಾಜುಗೆ ಐಟಿ ಶಾಕ್: ಆಪ್ತರ ಮನೆ ಮೇಲೆ ದಾಳಿ

ಪ್ರಕರಣವು ಅತ್ಯಂತ ಗಂಭೀರವಾಗಿದ್ದು, ಸೂಕ್ತ ತನಿಖೆ ಅಗತ್ಯವಾಗಿದೆ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಮನೀಶ್ ಮೌದ್ಗಿಲ್ ಅವರು ಪತ್ರದಲ್ಲಿ ಹೇಳಿದ್ದಾರೆ.

English summary
Money seized in HD Revanna convoy car, special officer Manish Moudgil writes election commissioner and said money seized car owned by Bengaluru police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X