ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Bengaluru Rains : ಬೆಂಗಳೂರಿಗೆ ಡಿ. 8ರಿಂದ ಧಾರಾಕಾರ ಮಳೆ: ಹವಾಮಾನ ವರದಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 05: ಹವಾಮಾನದಲ್ಲಿ ಪದೇ ಪದೆ ಉಂಟಾಗುತ್ತಿರುವ ವೈಪರಿತ್ಯಗಳಿಂದಾಗಿ ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆ, ಚಳಿಯ ಏರಿಳಿತ ಕಂಡು ಬರುತ್ತಿದೆ. ಬೆಂಗಳೂರಲ್ಲಿ ಮುಂದಿನ ಮೂರು ದಿನ ಚಳಿ ಕಂಡು ಬಂದರೆ, ನಂತರ ಮತ್ತೆ ಧಾರಾಕಾರ ಮಳೆ ಆರ್ಭಟಿಸಲಿದೆ.

ಕರ್ನಾಟಕ ಹವಾಮಾನ ಕೇಂದ್ರ ನೀಡಿದ ಮುನ್ಸೂಚನೆ ವರದಿ ಪ್ರಕಾರ, ಬೆಂಗಳೂರಲ್ಲಿ ಕೆಲವು ದಿನಗಳಿಂದ ವಾತಾವರಣ ಸಹಜ ಸ್ಥಿತಿಯಲ್ಲಿದ್ದು, ಆಗಾಗ ಮೋಡ ಕವಿದ ವಾತಾವರಣ ಕಂಡು ಬಂದಿದೆ. ಮುಂದಿನ ಡಿಸೆಂಬರ್ 7ವರೆಗೆ ಇದೇ ರೀತಿ ಚಳಿ ಮುಂದುವರಿಯಲಿದೆ. ಬೆಳಗ್ಗೆ ದಟ್ಟ ಮಂಜು ಕವಿಯುವ ಸಾಧ್ಯತೆ ಇದೆ.

Karnataka Rains : ಹವಾಮಾನ ವೈಪರೀತ್ಯ: ಕರ್ನಾಟಕದಾದ್ಯಂತ 3 ದಿನ ಮಳೆ ಸಾಧ್ಯತೆKarnataka Rains : ಹವಾಮಾನ ವೈಪರೀತ್ಯ: ಕರ್ನಾಟಕದಾದ್ಯಂತ 3 ದಿನ ಮಳೆ ಸಾಧ್ಯತೆ

ಡಿಸೆಂಬರ್ 7ರಿಂದ 10ರವರೆಗೆ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಮಿಂಚು ಸಹಿತ ಹಗುರ ಮಳೆ ಬೀಳಲಿದೆ. ಉಳಿದಂತೆ ಒಂದೆರಡು ಕಡೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ. ಸದ್ಯ ನಗರದಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 17-19ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಈ ಗರಿಷ್ಠ ಉಷ್ಣಾಂಶ ಪ್ರಮಾಣವು ಡಿಸೆಂಬರ್ 7ರಿಂದ ಇಳಿಕೆ ಆಗಲಿದೆ. ಗರಿಷ್ಠ 24-27ಡಿಗ್ರಿ ಸೆಲ್ಸಿಯಸ್ ವರೆಗೆ ಕಂಡು ಬರಲಿದೆ.

Moderate To Heavy Alert For Bengaluru City From December 8th

ದಕ್ಷಿಣ ಅಂಡಮಾನ್ ಸಮುದ್ರ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದೆ. ಸೋಮವಾರ ಬಂಗಾಳಕೊಲ್ಲಿ ಸಮುದ್ರದಲ್ಲಿ ವಾಯುಭಾರ ಕುಸಿತ ನಿರ್ಮಾಣವಾಗಿದ್ದು, ಇದು ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿ ಮಾರ್ಗವಾಗಿ ಬರಲಿದೆ.

ಇದರ ಪರಿಣಾಮವಾಗಿ ಬೆಂಗಳೂರು ನಗರ ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಡಿ. 8ರಿಂದ ಭಾರಿ ಮಳೆ ಆಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

English summary
Moderate to Heavy alert for Bengaluru city from December 8th says Karnataka weather forecast report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X