ಬೆಂಗಳೂರು ಪ್ರಗತಿಗಾಗಿ ಅಣಕು ಮತದಾನ
ಬೆಂಗಳೂರು, ಮೇ.5: ಬೆಂಗಳೂರು ಅಭಿವೃದ್ಧಿ ಗಾಗಿ ಶ್ರಮಿಸುತ್ತಿರುವ ಸಿವಿಕ್, ಸಿಟಿಜನ್ ಫಾರ್ ಬೆಂಗಳೂರು, ಬೆಂಗಳೂರು ಅಪಾರ್ಟ್ ಮೆಂಟ್ ಫೆಡರೇಶನ್ ಮತ್ತಿತರ ಸಂಘಟನೆಗಳು ಮತದಾನ ಜಾಗೃತಿಗಾಗಿ ಶನಿವಾರ ಬೆಳಗ್ಗೆ 'ನಮ್ಮಮತ ನಮ್ಮ ಹಿತ' ಅಣಕು ಮತದಾನ ಬೆಂಗಳೂರಿನ ಟೌನ್ ಹಾಲ್ ಎದುರು ನಡೆಯಿತು.
ಸಿಟಿಜನ್ಸ್ ಅಫ್ ಬೆಂಗಳೂರು ಗ್ರೂಪ್ ವತಿಯಿಂದ ನಗರದ ಟೌನ್ ಹಾಲ್ ಮುಂಭಾಗದಲ್ಲಿ ಮಾದರಿ ಚುನಾವಣೆ. ವಿವಿಧ ಸಂಸ್ಥೆಯ ನೂರಾರು ಜನರು ಮತ ಹಾಕಿದರು. ಬೆಂಗಳೂರಿನಲ್ಲಿ ಮುಖ್ಯವಾಗಿ ಕಸ ವಿಲೇವಾರಿ ಅವ್ಯವಸ್ಥೆ. ಗಾರ್ಬೆಜ್ ಮಾಫಿಯ. ರಸ್ತೆ. ನೀರು. ಚರಂಡಿ. ಮಹಿಳಾ ಸುರಕ್ಷತೆ ಸೇರಿ ನಾನಾ ಸಮಸ್ಯೆ ಗಳನ್ನು ಬಗೆಹರಿಸುವ ನಾಯಕರಿಗೆ ಚುನಾವಣೆಯಲ್ಲಿ ಮತದಾನ ಮಾಡುವ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸದಸ್ಯ ವಿನೋದ್ ತಿಳಿಸಿದರು.

ಬೆಂಗಳೂರಿನಲ್ಲಿ ಮತದಾನ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮತದಾರರನ್ನು ಮತಗಟ್ಟೆಯೆಡೆಗೆ ಸೆಳೆಯಲು ಮತದಾನ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದೆ. ಬೆಂಗಳೂರಿನ ಸಾವಿರಾರು ನಾಗರಿಕರು ಈ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಗರಿಕರ ಬಳಿ ಇರುವ ಬೇಡಿಕೆಗಳ ಕುರಿತು ಚರ್ಚಿಸಲಾಗುತ್ತದೆ.












Click it and Unblock the Notifications