ನಮ್ಮ ಮತ ನಮ್ಮ ಹಿತ ಜಾಗೃತಿಗಾಗಿ ಅಣಕು ಮತದಾನ
ಬೆಂಗಳೂರು, ಮೇ 4: ಬೆಂಗಳೂರು ಅಭಿವೃದ್ಧಿ ಗಾಗಿ ಶ್ರಮಿಸುತ್ತಿರುವ ಸಿವಿಕ್, ಸಿಟಿಜನ್ ಫಾರ್ ಬೆಂಗಳೂರು, ಬೆಂಗಳೂರು ಅಪಾರ್ಟ್ ಮೆಂಟ್ ಫೆಡರೇಶನ್ ಮತ್ತಿತರ ಸಂಘಟನೆಗಳು ಮತದಾನ ಜಾಗೃತಿಗಾಗಿ ಮೇ 5 ರಂದು ಬೆಳಗ್ಗೆ 9.30ರಿಂದ 11 ಗಂಟೆವರೆಗೆ 'ನಮ್ಮಮತ ನಮ್ಮ ಹಿತ' ಅಣಕು ಮತದಾನ ಏರ್ಪಡಿಸಿದೆ.
ಬೆಂಗಳೂರಿನಲ್ಲಿ ಮತದಾನ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮತದಾರರನ್ನು ಮತಗಟ್ಟೆಯೆಡೆಗೆ ಸೆಳೆಯಲು ಮತದಾನ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದೆ. ಬೆಂಗಳೂರಿನ ಸಾವಿರಾರು ನಾಗರಿಕರು ಈ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಗರಿಕರ ಬಳಿ ಇರುವ ಬೇಡಿಕೆಗಳ ಕುರಿತು ಚರ್ಚಿಸಲಾಗುತ್ತದೆ.

ಈ ಅಣಕು ಮತದಾನಕ್ಕೆ ಬರುವವರಿಗೆ ಯಾವುದೇ ವೋಟರ್ ಐಡಿ, ಆಧಾರ್ ಕಾರ್ಡ್ ಅಗತ್ಯವಿರುವುದಿಲ್ಲ, ನಿಜವಾದ ಸಮಸ್ಯೆ ಕುರಿತು ಅವಲೋಕನ ಮಾಡಲಾಗುತ್ತದೆ. 18 ವರ್ಷ ಮೇಲ್ಪಟ್ಟವರೆಲ್ಲರೂ ಬಂದು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ನಾಗರಿಕರಿಗೆ ಮತದಾನ ಮಾಡುವ ಪ್ರಕ್ರಿಯೆಯನ್ನು ತಿಳಿಸಿಕೊಡಲಾಗುತ್ತದೆ.












Click it and Unblock the Notifications