ಅಕ್ಷಯ ತೃತೀಯಕ್ಕೆ ಚಿತ್ರರಂಗದ ಕಾರ್ಮಿಕರಿಗೆ ದಿನಸಿ ವಿತರಿಸಿದ ಎಂಎಲ್ಸಿ ಶರವಣ
ಬೆಂಗಳೂರು, ಏಪ್ರಿಲ್ 26: ಅಕ್ಷಯ ತೃತೀಯದ ಪ್ರಯುಕ್ತ ಭಾನುವಾರದಂದು ವಿಧಾನ ಪರಿಷತ್ ಸದಸ್ಯರು ಹಾಗೂ ಜೆಡಿಎಸ್ ಮುಖಂಡರಾದ ಟಿ.ಎ. ಶರವಣ ಅವರು ಕನ್ನಡ ಚಿತ್ರರಂಗದ ಸಹ ನಿರ್ದೇಶಕರು ಹಾಗೂ ಸಹಾಯ ನಿರ್ದೇಶಕರಿಗೆ ದಿನಸಿ ವಿತರಣೆ ಮಾಡಿದರು. ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಕನ್ನಡ ಚಿತ್ರರಂಗದ ಕೆಲಸಗಳು ಸಹ ನಿಂತುಹೋಗಿದ್ದು, ಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ದೈನಂದಿನ ದುಡಿಮೆಯಿಂದ ಬದುಕುವ ಈ ವರ್ಗಕ್ಕೆ ಸಹಾಯ ಮಾಡುವ ಉದ್ದೇಶದಿಂದ ನೋಂದಣಿ ಆಗಿರುವ ಚಿತ್ರರಂಗದ ಕಾರ್ಮಿಕರಿಗೆ ಸಾಮಗ್ರಿಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಟಿ.ಎ. ಶರವಣ ಅವರು ಮಾತನಾಡಿ, ಅಕ್ಷಯ ತೃತೀಯ ಅಂದರೆ ಚಿನ್ನ ಖರೀದಿ ಮಾಡುವುದು ಎಂದಷ್ಟೇ ಅರ್ಥವಲ್ಲ ಎಂದರು.

ಸೋನಾ ಅಂದರೆ ಚಿನ್ನ. ಆದರೆ ಸೋನಾ ಮಸೂರಿ ಅಕ್ಕಿ ಹಾಗೂ ಇತರ ದಿನಸಿ ಪದಾರ್ಥಗಳನ್ನು ಹಂಚುವ ಮೂಲಕ ಚಿತ್ರರಂಗಕ್ಕಾಗಿ, ಕಲೆಗಾಗಿ ಶ್ರಮಿಸುವ ಈ ಕಾರ್ಮಿಕರ ಮನೆಗಳಲ್ಲಿ ವರ್ಷಪೂರ್ತಿ ದಿನಸಿ ಸಾಮಗ್ರಿಗಳು ಇರುವಂತಾಗಲಿ. ಆ ಸಾಮಗ್ರಿಗಳು ಅಕ್ಷಯವಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವುದಾಗಿ ಅವರು ಹೇಳಿದರು.












Click it and Unblock the Notifications