ಚುನಾವಣಾ ಅಕ್ರಮ ಪ್ರಕರಣದಲ್ಲಿ ಶಾಸಕ ಮುನಿರತ್ನ ಖುಲಾಸೆ

ಬೆಂಗಳೂರು, ಜನವರಿ 29: ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಅಕ್ರಮವೆಸಿಗಿದ್ದ ಪ್ರಕರಣದಿಂದ ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಖುಲಾಸೆಗೊಂಡಿದ್ದಾರೆ. ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಚುನಾವಣಾ ಪ್ರಕರಣದಿಂದ ಮುನಿರತ್ನ ಖುಲಾಸೆಯಾಗಿದ್ದಾರೆ.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೇಸ್ ಖುಲಾಸೆಗೊಳಿಸಿ ಆದೇಶ ಪ್ರಕಟಿಸಿದೆ. 2013ರಲ್ಲಿ ಚುನಾವಣಾ ಅಕ್ರಮ ಎಸಗಿ ಅಧಿಕಾರಿ ರವಿಕುಮಾರ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಮುನಿರತ್ನ ಅವರ ಮೇಲೆ ಕೇಳಿ ಬಂದಿತ್ತು. ಆರೋಪ ಸಾಬೀತು ಪಡಿಸಲು ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆಯಲ್ಲಿ ಪ್ರಕರಣದಿಂದ ಮುನಿರತ್ನ ಅವರು ಖುಲಾಸೆಗೊಂಡಿದ್ದಾರೆ. ರಾಜರಾಜೇಶ್ವರಿನಗರದ ಮನೆಯೊಂದರಲ್ಲಿ ಸಾವಿರಾರು ಮತದಾರರ ಚೀಟಿ ಲಭ್ಯವಾಗಿತ್ತು.

MLA muniratna got clean chit in election mall pratice case

ಮೇ 8ರಂದು ಜಾಲಹಳ್ಳಿ ಅಪಾರ್ಟ್‌ವೆುಂಟ್‌‌‌ನಲ್ಲಿ ಅಕ್ರಮ ಪತ್ತೆಹಚ್ಚಲು ಹೋಗಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿತ್ತು. ಈ ಸಂಬಂಧ ಬಿಜೆಪಿ ಮುಖಂಡ ರಾಕೇಶ್, ಕೊಟ್ಟ ದೂರಿನ ಮೇರೆಗೆ ಜಾಲಹಳ್ಳಿ ಪೊಲೀಸರು, ಯಶವಂತಪುರ ಪಾಲಿಕೆ ಕಾಂಗ್ರೆಸ್ ಸದಸ್ಯ ವೆಂಕಟೇಶ್ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಿ, ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+