• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Assembly Election 2023: ಕಾರ್ಯಕರ್ತರಿಗೆ 3ಲಕ್ಷ ರೂ.ಆರೋಗ್ಯ ವಿಮೆ ಮಾಡಿಸಿದ ಕೆಜೆ ಜಾರ್ಜ್

|
Google Oneindia Kannada News

ಮತದಾರರ ಓಲೈಕೆಗಾಗಿ ಹಣ, ಬಟ್ಟೆ, ಗೃಹೋಪಯೋಗಿ ಉಪಕರಣ ನೀಡುವುದು ಸರ್ವೇ ಸಾಮಾನ್ಯ. ಆದರೆ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಬೆಂಗಳೂರು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜೆ.ಜಾರ್ಜ್ ಅವರು ಮತದಾರರನ್ನು ಸೆಳೆಯುವ ಸಲುವಾಗಿ ಪಕ್ಷದ ಕಾರ್ಯಕರ್ತರಿಗೆ 3 ಲಕ್ಷ ರೂ.ನ ಆರೋಗ್ಯ ವಿಮೆ ಮಾಡಿಸಿದ್ದು ವಿಶೇಷವಾಗಿದೆ.

ಕಾಂಗ್ರೆಸ್‌ ನಾಯಕರು ಸೇರಿದಂತೆ ಇನ್ನಿತರ ಪಕ್ಷದ ನಾರಯಕರು ಚುಣಾವಣೆಯ ಐದಾರು ತಿಂಗಳು ಮೊದಲೇ ತೆರೆಮರೆ ಕಸರತ್ತು ನಡೆಸಿದ್ದಾರೆ. ಈ ಮೂಲಕ ಟಿಕೆಟ್ ಆಕಾಂಕ್ಷಿಗಳು, ಕಾರ್ಯಕರ್ತರು, ನಾಯಕರು ಸಕ್ರಿಯರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಾಸಕ ಕೆ.ಜೆ. ಜಾರ್ಜ್ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ 3ಲಕ್ಷ ರೂ.ನ ಆರೋಗ್ಯ ವಿಮೆಯ ಕಾರ್ಡ್‌ಗಳನ್ನು ಮಾಡಿದ್ದಾರೆ.

ಸದ್ಯ 300ಕ್ಕೂ ಅಧಿಕ ಬೂತ್ ಅಧ್ಯಕ್ಷರು, ಪಕ್ಷದ ಮುಂಚೂಣಿ ಘಟಕ ಸದಸ್ಯರು, ಬೂತ್ ಮಟ್ಟದ ಏಜೆಂಟರ್ 600 ಮಂದಿ ಹಾಗೂ ಇತರ ಸಮಿತಿಗಳ 350 ಕ್ಕೂ ಅಧಿಕ ಜನರು ಸೇರಿದಂತೆ ಒಟ್ಟು 1060 ಕಾರ್ಡ್‌ಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಅದರಲ್ಲಿ 400 ಕಾರ್ಯಕರ್ತರಿಗೆ ಈಗಾಗಲೇ ಆರೋಗ್ಯ ವಿಮೆ ಕಾರ್ಡ್ ಹಂಚಿಕೆಯಾಗಿದೆ ಎಂದು ಶಾಸಕರ ಆಪ್ತ ವಲಯಗಳು ತಿಳಿಸಿವೆ.

ಶಾಸಕರು ರಿಲಯನ್ಸ ಇನ್ಶುರೆನ್ಸ ಕಂಪನಿಯ ಗ್ರೂಪ್ ಹೆಲ್ತ್ ಇನ್ಶುರೆನ್ಸ ಯೋಜನೆಯಡಿ ಆರೋಗ್ಯ ವಿಮೆ ಪ್ರೀಮಿಯಂ ಹಣ ಸ್ವತಃ ಅವರೇ ಭರಿಸಲಿದ್ದಾರೆ. ಹೆಸರು, ಜನ್ಮದಿನಾಂಕ, ಮೊಬೈಲ್‌ ಸಂಖ್ಯೆ ಇನ್ನಿತರ ಅಗತ್ಯ ದಾಖಲೆ ಪಡೆದು ಕಂಪನಿಯು ಕಾಂಗ್ರೆಸ್ ಕಾರ್ಯಕರ್ತರಿಗೆ ಆರೋಗ್ಯ ವಿಮೆ ಮಾಡುತ್ತಿದೆ. ಕೆ.ಜೆ.ಜಾರ್ಜ್ ಅವರು 2008ರಲ್ಲಿ ಅಸ್ತಿತ್ವಕ್ಕೆ ಬಂದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಿಂದ ಇದುವರೆಗೆ ಮೂರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮುಂಬರಲಿರುವ 2023ರ ಚುನಾವಣೆಯಲ್ಲಿ ಸ್ವಕ್ಷೇತ್ರದಿಂದಲೇ ಪುನಃ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

English summary
Assembly Election 2023. MLA KJ George provides Health insurance for Congress workers in Sarvagna Nagar Constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X