ಶಾಸಕ ಗಣೇಶ್ ಜಾಮೀನು ವಿಚಾರಣೆ ಏಪ್ರಿಲ್ 8ಕ್ಕೆ ಮುಂದೂಡಿಕೆ

ಬೆಂಗಳೂರು, ಏಪ್ರಿಲ್ 01: ಹಲ್ಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಂಪ್ಲಿ ಶಾಸಕ ಜೆ.ಎಚ್.ಗಣೇಶ್ ಅವರ ಜಾಮೀನು ಅರ್ಜಿ ಮನವಿಯ ವಿಚಾರಣೆಯನ್ನೂ ಏಪ್ರಿಲ್ 8 ಮುಂದೂಡಲಾಯಿತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಗಣೇಶ್ ಅವರ ಜಾಮೀನು ಮನವಿಯನ್ನು ಜಿಲ್ಲಾ ನ್ಯಾಯಾಲಯವು ಈಗಾಗಲೇ ತಿರಸ್ಕಾರ ಮಾಡಿತ್ತು, ಹಾಗಾಗಿ ಗಣೇಶ್ ಪರ ವಕೀಲರು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.

ಗಣೇಶ್ ಪರ ವಾದ ಮಂಡಿಸಿದ ವಕೀಲರು, ಒಂದೂವರೆ ತಿಂಗಳಿನಿಂದಲೂ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾರೆ, ಅವರು ಕ್ಷೇತ್ರದ ಶಾಸಕರಾಗಿದ್ದು, ಅವರ ಜನರಿಗೆ ಅವರ ಅವಶ್ಯಕತೆ ಇದೆ, ಚುನಾವಣೆಗಳು ಬೇರೆ ಇರುವ ಕಾರಣ ಗಣೇಶ್ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ವಾದಿಸಿದರು.

MLA Ganeshs bail application inquery postponed

ಸರ್ಕಾರದ ಪರ ವಕೀಲರು, ಪ್ರತಿವಾದ ಮಂಡಿಸಲು ಸಮಯಾವಕಾಶ ಕೇಳಿದ ಕಾರಣ ಜಾಮೀನು ಅರ್ಜಿ ವಿಚಾರಣೆಯನ್ನು ಏಪ್ರಿಲ್ 8 ಕ್ಕೆ ಮುಂದೂಡಲಾಗಿದೆ.

ಗಣೇಶ್ ಅವರು ಈಗಲ್‌ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಮೇಲೆ ಜನವರಿ 19 ರಂದು ರಾತ್ರಿ ಹಲ್ಲೆ ಮಾಡಿದ್ದರು, ಆ ನಂತರ ಅವರು ಪರಾರಿಯಾಗಿದ್ದರು, ರಾಮನಗರ ಪೊಲೀಸರು ಗಣೇಶ್ ಅವರನ್ನು ಫೇಬ್ರವರಿ 20 ರಂದು ಬಂಧಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+