ಬೆಂಗಳೂರಿನ ಎಚ್‌ಎಎಲ್ ಬಳಿ ಮಿರಾಜ್ ಯುದ್ಧ ವಿಮಾನ ಪತನ, ಪೈಲಟ್ ಸಾವು
ಬೆಂಗಳೂರು, ಫೆಬ್ರವರಿ 1: ಮಿರಾಜ್ ಯುದ್ಧ ವಿಮಾನವೊಂದು ಪತನಗೊಂಡಿರುವ ಘಟನೆ ಬೆಂಗಳೂರಿನ ಎಚ್‌ಎಎಲ್ ಏರ್‌ಪೋರ್ಟ್ ಬಳಿ ಶುಕ್ರವಾರ ನಡೆದಿದೆ.
ಇಬ್ಬರು ಪೈಲಟ್‌ಗಳು ವಿಮಾನದಿಂದ ಜಿಗಿದಿದ್ದರೂ ಕೂಡ ಕೆಳಗೆ ಹೊತ್ತಿಕೊಂಡಿದ್ದ ಬೆಂಕಿಗೆ ಬಿದ್ದು ಮೃತಪಟ್ಟಿರುವ ಧಾರುಣ ಘಟನೆ ಇದಾಗಿದೆ.
ವಿಮಾನವು ಪತನಗೊಂಡ ಬಳಿಕ ಜೋರಾದ ಶಬ್ದ ಬಂದಿದ್ದು, ದಟ್ಟ ಹೊಗೆ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದೆ. ಮೊದಲು ಭೂಕಂಪದ ಅನುಭವವಾಯಿತಾದರೂ ಬಳಿ ದಟ್ಟ ಹೊಗೆಯನ್ನು ನೋಡಿ ವಿಮಾನ ಪತನವಾಗಿರುವುದು ತಿಳಿದುಬಂದಿದೆ. ಈ ಘಟನೆಯಲ್ಲಿ ಪೈಲಟ್ ಮೃತಪಟ್ಟಿರುವುದು ವರದಿಯಾಗಿದೆ.













Click it and Unblock the Notifications