ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾವ ಖಾತೆ ಕೊಟ್ಟರೂ ಅತೃಪ್ತ ಎಂಟಿಬಿಗೆ ಸಿಎಂ ಬೊಮ್ಮಾಯಿ ಫುಲ್ ಕ್ಲಾಸ್?

|
Google Oneindia Kannada News

ಮೊದಲು ಸಚಿವ ಸ್ಥಾನ ಸಿಗುವುದೇ ಡೌಟ್ ಎಂದಾದಾಗ, ಯಾವ ಖಾತೆ ಕೊಟ್ಟರೂ ನಿಭಾಯಿಸುವೆ ಎಂದು ಹೇಳುವ ಶಾಸಕರು, ಸಚಿವ ಸ್ಥಾನ ಹಂಚಿಕೆಯಾದಾಗ, ಅದಕ್ಕೆ ತಗಾದೆಯನ್ನು ತೆಗೆಯುತ್ತಾರೆ. ಈ ಆಸೆ ಅನ್ನೋದು ಯಾರನ್ನೂ ಬಿಟ್ಟಿಲ್ಲ.

ಸಂಪುಟ ವಿಸ್ತರಣೆಯಾದಾಗ ಅಸಮಾಧಾನಗಳು ಸಹಜ, ಯಾಕೆಂದರೆ ಸಿಎಂ ಬಸವರಾಜ ಬೊಮ್ಮಾಯಿಯವರು ಹೇಳುವಂತೆ, ಎಲ್ಲರನ್ನೂ ಸಮಾಧಾನ ಪಡಿಸಲು ಸಾಧ್ಯವಿಲ್ಲ. ಅದೇ ರೀತಿ, ಅಳೆದು ತೂಗಿ, ಹೈಕಮಾಂಡ್ ನಿಂದ ಪ್ರಯಾಸದಿಂದ ಅನುಮೋದನೆ ಪಡೆದ ಖಾತೆ ಹಂಚಿಕೆಯ ಬಗ್ಗೆ ಕೆಲವರಿಗೆ ಅಸಮಾಧಾನವಿದೆ.

Recommended Video

ಸಚಿವರಿಗೆ ಖಾತೆ ಹಂಚಿಕೆ-ಅಧಿಕೃತ ಪಟ್ಟಿ ಬಿಡುಗಡೆ ಮಾಡಿದ ಸಿಎಂ

ಖಾತೆ ಹಂಚಿಕೆ ಕುರಿತು ಕ್ಯಾತೆ; ಬೊಮ್ಮಾಯಿ ಭೇಟಿಯಾದ ಸಚಿವರುಖಾತೆ ಹಂಚಿಕೆ ಕುರಿತು ಕ್ಯಾತೆ; ಬೊಮ್ಮಾಯಿ ಭೇಟಿಯಾದ ಸಚಿವರು

ಕೆಲವರಿಗೆ ನಿರೀಕ್ಷೆಗೂ ಮೀರಿದ ಖಾತೆ ಲಭಿಸಿದರೆ, ಕಲವರಿಗಂತೂ ಡಬಲ್ ಖಾತೆ ದಕ್ಕಿದೆ. ಕೆಲವರು ಬಹಿರಂಗವಾಗಿಯೇ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಇದು ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಸಂಘ ಪರಿವಾರದ ಮುಖಂಡರನ್ನು ಕೆರಳಿಸಿದೆ.

 ಬಸವರಾಜ ಬೊಮ್ಮಾಯಿ ಸಂಪುಟ: ಯಾವ ಸಚಿವರಿಗೆ ಯಾವ ಖಾತೆ? ಬಸವರಾಜ ಬೊಮ್ಮಾಯಿ ಸಂಪುಟ: ಯಾವ ಸಚಿವರಿಗೆ ಯಾವ ಖಾತೆ?

ಈ ರೀತಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದವರಲ್ಲಿ ಸಣ್ಣ ಕೈಗಾರಿಕೆ, ಪೌರಾಡಳಿತ ಇಲಾಖೆಯ ಸಚಿವ ಎಂ.ಟಿ.ನಾಗರಾಜ್. ಆಗರ್ಭ ಶ್ರೀಮಂತ ಎಂಟಿಬಿಗೆ ಯಡಿಯೂರಪ್ಪನವರ ಸರಕಾರದಲ್ಲಿ ಕೊಟ್ಟಿದ್ದ ಖಾತೆಯ ಬಗ್ಗೆಯೂ ಸಮಾಧಾನವಿರಲಿಲ್ಲ. ಎಂಟಿಬಿಯವರು, ಸಿಎಂ ಅವರನ್ನು ಭೇಟಿಯಾಗಿದ್ದರು.

ಬುಧವಾರ (ಆ 11) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಎಂ.ಟಿ.ಬಿ ನಾಗರಾಜ್, ಆತ್ಮತೃಪ್ತಿಯಿಂದಲೇ ಸಣ್ಣ ಕೈಗಾರಿಕೆ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಕೈಗಾರಿಕೆಗಳ‌ ಸ್ಥಿತಿಗತಿ ಕುರಿತು‌ ಚರ್ಚಿಸಿದ್ದೇವೆ,
ಮುಖ್ಯಮಂತ್ರಿಗಳ ಬಳಿ ‌ನನ್ನ ಅಭಿಪ್ರಾಯ ಹೇಳಿದ್ದೇನೆ. ಅವರು ಕೆಲಸ ಮಾಡುತ್ತಿರಿ ಎಂದಿದ್ದಾರೆ, ಸಿಎಂ ಭರವಸೆ ಕೊಟ್ಟಿದ್ದಾರೆ. ಮುಂದಿನ ದಿನದಲ್ಲಿ ಮಾಡೋಣ ಎಂದಿದ್ದಾರೆ" ಎಂದು ಹೇಳಿದ್ದಾರೆ.

 ಬೊಮ್ಮಾಯಿಯವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ, ನನ್ನ ನಿರ್ಧಾರ ಪ್ರಕಟಿಸುವೆ

ಬೊಮ್ಮಾಯಿಯವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ, ನನ್ನ ನಿರ್ಧಾರ ಪ್ರಕಟಿಸುವೆ

"ಹಿಂದೆ ಕೂಡಾ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಹೀಗೇ ಆಯಿತು. ವಸತಿ ಖಾತೆಯನ್ನು ನೀಡಲಾಗಿತ್ತು, ಆದರೆ ನಿರೀಕ್ಷಿತ ಅನುದಾನ ಸಿಕ್ಕಿರಲಿಲ್ಲ. ಜನಸೇವೆ ಮಾಡಲು ಅವಕಾಶವಿರಲಿಲ್ಲ ಎಂದು ಬಿಜೆಪಿಗೆ ಸೇರಿದೆ. ಯಡಿಯೂರಪ್ಪನವರಾಗಲಿ ಅಥವಾ ಸಿಎಂ ಬೊಮ್ಮಾಯಿಯವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಕೆಲವು ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸುವೆ"ಎಂದು ಎಂ.ಟಿ.ಬಿ ನಾಗರಾಜ ಹೇಳಿದ್ದರು.

 ಎಂಟಿಬಿಯವರು ತಗಾದೆ ತೆಗೆದಾಗ, ಸಿಎಂ ಸಿಟ್ಟಿನಿಂದ ಕ್ಲಾಸ್ ತೆಗೆದುಕೊಂಡಿದ್ದಾರೆ

ಎಂಟಿಬಿಯವರು ತಗಾದೆ ತೆಗೆದಾಗ, ಸಿಎಂ ಸಿಟ್ಟಿನಿಂದ ಕ್ಲಾಸ್ ತೆಗೆದುಕೊಂಡಿದ್ದಾರೆ

ಖಾತೆಯ ವಿಚಾರದಲ್ಲಿ ಸಚಿವ ಎಂಟಿಬಿಯವರು ಮುಖ್ಯಮಂತ್ರಿಯವರನ್ನು ಭೇಟಿಯಾಗಿದ್ದರೆ. ಭೇಟಿಯ ಸಂದರ್ಭದಲ್ಲಿ ಹಿಂದೆ ಯಡಿಯೂರಪ್ಪನವರು ಕೊಟ್ಟ ಭರವಸೆಯ ಬಗ್ಗೆ ಮಾತನಾಡಿದ್ದಾರೆ. ಎಲ್ಲೂ, ಬಹಿರಂಗ ಹೇಳಿಕೆಯನ್ನು ನೀಡದಂತೆ ಸೂಚಿಸಿದ್ದಾರೆ. ಆ ವೇಳೆ, ಮತ್ತೆ ಎಂಟಿಬಿಯವರು ತಗಾದೆ ತೆಗೆದಾಗ, ಸಿಎಂ ಸಿಟ್ಟಿನಿಂದ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

 ನೀವು ಸೋತರೂ, ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡಿದ್ದೇವೆ ಎನ್ನುವುದನ್ನು ಅರಿಯಿರಿ

ನೀವು ಸೋತರೂ, ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡಿದ್ದೇವೆ ಎನ್ನುವುದನ್ನು ಅರಿಯಿರಿ

ಖಾತೆಯ ಬಗ್ಗೆ ತಗಾದೆ ತೆಗೆಯಬೇಡಿ, ಕೊಟ್ಟ ಖಾತೆಯನ್ನು ಸದ್ಯಕ್ಕೆ ನಿಭಾಯಿಸಿ. ನಿಮಗೆ ಮಾತು ಕೊಟ್ಟ ಕಾರಣಕ್ಕಾಗಿಯೇ, ನೀವು ಸೋತರೂ, ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡಿದ್ದೇವೆ ಎನ್ನುವುದನ್ನು ನೀವು ಅರಿತುಕೊಳ್ಳಬೇಕು. ನೀವು ಬಯಸಿದ ಜಿಲ್ಲೆಯನ್ನೇ ನಿಮಗೆ ಉಸ್ತುವಾರಿ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರು ಎಂಟಿಬಿ ನಾಗರಾಜ ಅವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

 ಶರತ್ ಬಚ್ಚೇಗೌಡ ದಿನದಿಂದ ದಿನಕ್ಕೆ ಪ್ರಭಾವೀ ಆಗುತ್ತಿದ್ದಾರೆ

ಶರತ್ ಬಚ್ಚೇಗೌಡ ದಿನದಿಂದ ದಿನಕ್ಕೆ ಪ್ರಭಾವೀ ಆಗುತ್ತಿದ್ದಾರೆ

ಕ್ಷೇತ್ರದಲ್ಲಿ ಬೇರೆ ಹಿಡಿತ ಕಳೆದುಕೊಳ್ಳುತ್ತಿದ್ದೀರಿ, ಶರತ್ ಬಚ್ಚೇಗೌಡ ದಿನದಿಂದ ದಿನಕ್ಕೆ ಪ್ರಭಾವೀ ಆಗುತ್ತಿದ್ದಾರೆ. ನಿಮ್ಮ ಮೇಲೆ ಬಹಳ ದೂರುಗಳು ಬರುತ್ತಿವೆ. ಇಷ್ಟು ದಿನ ನಿಮ್ಮಿಂದ ಪಕ್ಷಕ್ಕೆ ಯಾವುದೇ ರೀತಿಯ ಲಾಭವಾಗಿಲ್ಲ. ಖಾತೆ ಬದಲಾವಣೆ ಮುಂದೆ ನೋಡೋಣ ಎಂದು ಸಿಎಂ ಬೊಮ್ಮಾಯಿಯವರು ಎಂಟಿಬಿಗೆ ಹೇಳಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ವಲಸೆ ನಾಯಕರ ಪೈಕಿ ಆನಂದ್ ಸಿಂಗ್ ಕೂಡಾ ಖಾತೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದರು. ಎಲ್ಲರನ್ನೂ ಕರೆದು ಮಾತಾಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಹೇಳಿದ್ದಾರೆ. ಕೋವಿಡ್ ಪ್ರಕರಣ ಹೆಚ್ಚಿರುವ ಜಿಲ್ಲೆಗಳಿಗೆ ಮೊದಲು ಭೇಟಿ ನೀಡುವುದು ನನ್ನ ಆದ್ಯತೆ ಎಂದು ಸಿಎಂ ಹೇಳಿದ್ದಾರೆ.

English summary
Minister MTB Nagaraj Not Happy With Portfolio Met CM Bommai, Not Given Any Assurance. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X