ಬಸ್ ಟಿಕೆಟ್ ದರ ಏರಿಕೆಗೆ ಕಾರಣ ತಿಳಿಸಿದ ಸಚಿವ ಲಕ್ಷ್ಮಣ್ ಸವದಿ
ಬೆಂಗಳೂರು, ಫೆಬ್ರವರಿ 27: ಬಸ್ ಪ್ರಯಾಣ ದರ ಏರಿಕೆ ಮಾಡಲು ಇದ್ದ ಕಾರಣವನ್ನು ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
Recommended Video
2014ರಿಂದಲೂ ಬಸ್ ದರ ಏರಿಕೆ ಮಾಡಿರಲಿಲ್ಲ. ಹೀಗಾಗಿ ಏರಿಕೆ ಮಾಡಲಾಗಿದೆ. ಬಡವರಿಗೆ ಹೊರೆಯಾಗದ ರೀತಿ ಬಸ್ ಪ್ರಯಾಣ ದರ ಏರಿಕೆ ಮಾಡಿದ್ದೇವೆ. ಮೊದಲು ಕುಮಾರಸ್ವಾಮಿ ಬಸ್ ದರ ಕುರಿತಾದ ಆದೇಶ ನೋಡಲಿ, ಬಳಿಕ ಮಾತನಾಡಲಿ ಎಂದು ಗುಡುಗಿದ್ದಾರೆ.
ಮೂರೂವರೆ ವರ್ಷಗಳ ಕಾಲ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುತ್ತಾರೆ. ಇದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಸಿಎಂ ಪರ, ವಿರುದ್ಧ ಹೈಕಮಾಂಡ್ಗೆ ಪತ್ರ ಸುಳ್ಳು ಎಂದು ಹೇಳಿದರು. ಬಸ್ ಟಿಕೆಟ್ ದರವನ್ನು ಶೇ.12ರಷ್ಟು ಹೆಚ್ಚಿಸಲಾಗಿದೆ.

ಎಚ್ಡಿಕೆ ಟೀಕೆ ಮಾಡುವ ಮುನ್ನ ಬಸ್ ದರ ಕುರಿತು ಆದೇಶ ನೋಡಲಿ. 2014ರಿಂದ ಈವರೆಗೂ ಬಸ್ ಪ್ರಯಾಣ ದರ ಏರಿಸಿರಲಿಲ್ಲ. ಈಗ ನಿಗಮಗಳ ನಷ್ಟ ಸರಿದೂಗಿಸಲು ದರ ಏರಿಕೆ ಮಾಡಿದ್ದೇವೆ. ಸಾರಿಗೆ ನಿಗಮಗಳು ತುಂಬಾ ಸಂಕಷ್ಟದಲ್ಲಿವೆ. ಈ ನಷ್ಟ ಸರಿದೂಗಿಸಲು ಬಸ್ ದರ ಏರಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಮುಂದುವರೆದ ಅವರು, ನಿಗಮಗಳಲ್ಲಿ ಸೋರಿಕೆ ತಡೆಗಟ್ಟಲು ಅಧಿಕಾರಿಗಳಿಗೆ ಖಡಕ್ ಆಗಿ ಸೂಚನೆ ನೀಡಿದ್ದೇನೆ ಎಂದರು. ನಿಗಮಗಳು ಸಂಕಷ್ಟದಲ್ಲಿದ್ದವು ಅದನ್ನು ಸರಿಪಡಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.












Click it and Unblock the Notifications