• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಚಿವ ಆರ್‌.ವಿ.ದೇಶಪಾಂಡೆ ಪುತ್ರನ ಮನೆಗೆ ಕನ್ನ ಹಾಕಿದ ಖದೀಮರು

By Nayana
|

ಬೆಂಗಳೂರು, ಜುಲೈ 31: ಕಂದಾಯ ಸಚಿವ ದೇಶಪಾಂಡೆ ಪುತ್ರನ ಮನೆ ದರೋಡೆ ಮಾಡಿ ಕಳ್ಳರು ಲ್ಯಾಪ್‌ಟಾಪ್‌ ಸೇರಿದಂತೆ ವಿವಿಧ ವಸ್ತುಗಳನ್ನು ಕದ್ದೊಯ್ದಿದ್ದಾರೆ.

ಆರ್‌ವಿ ದೇಶಪಾಂಡೆ ಪುತ್ರ ಪ್ರಶಾಂತ್‌ ದೇಶಪಾಂಡೆ ಸದಾಶಿವನಗರದಲ್ಲಿ ವಾಸವಿದ್ದರು, ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ. ಮನೆಯ ಓದುವ ಕೊಠಡಿಯಲ್ಲಿಟ್ಟಿದ್ದ ಲ್ಯಾಪ್‌ಟಾಪ್‌, ಸುಮಾರು ಅರ್ಧ ಕೆಜಿ ತೂಕದ ದೇವರ ಬೆಳ್ಳಿಯ ವಿಗ್ರಹ, ಎರಡು ಮೊಬೈಲ್‌ ಫೋನ್‌ಗಳನ್ನು ಕಳ್ಳತನ ಮಾಡಿದ್ದಾರೆ.

ಎರಡು ಲಕ್ಷ ರೂ.ಮೌಲ್ಯದ ದೇವಿಯ ಬೆಳ್ಳಿಯ ಮುಖವಾಡ ಕದ್ದ ಖದೀಮರು

ಈ ಕುರಿತು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಪ್ರಶಾಂತ್‌ ದೂರು ದಾಖಲಿಸಿದ್ದಾರೆ. ಮನೆಯ ಹಿಂಭಾಗ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ, ಅಲ್ಲಿಂದ ಮನೆಯ ಕಾಂಪೌಂಡ್‌ ಒಳಗೆ ಬಂದರೆ ಕೇವಲ ಎರಡು ಅಡಿ ದೂರಕ್ಕೆ ಅಡುಗೆಮನೆಗೆ ಪ್ರವೇಶಿಸಬಹುದು, ಬಹುಶಃ ರಾತ್ರಿ ಹಿಂಬಾಗಿಲು ಲಾಕ್‌ ಮಾಡದೆ ಇರುವ ಕಾರಣ ಕಳ್ಳರಿಗೆ ಮೆಯೊಳಗೆ ಪ್ರವೇಶಿಸಲು ಸಾಧ್ಯವಾಗಿರಬಹುದು ಎಂದು ಪ್ರಶಾಂತ್‌ ತಿಳಿಸಿದ್ದಾರೆ.

ಮನೆಯಲ್ಲಿ ಎಲ್ಲರೂ ಇರುವಾಗಲೇ ಕಳ್ಳತನವಾಗಿದೆ, ಮೂರು ನಾಯಿಗಳನ್ನು ಸಾಕಲಾಗಿದೆ, ಭದ್ರತೆಗಾಗಿ ಓರ್ವ ಸೆಕ್ಯುರಿಟಿ ಗಾರ್ಡ್‌ ಕೂಡ ಇದ್ದಾರೆ, ಆದರೆ ಹಿಂಭಾಗದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಕಿರಿದಾದ ಜಾಗವಿದ್ದ ಕಾರಣ ಕಳ್ಳರ ಪ್ರವೇಶದ ಸುಳಿವು ಗೊತ್ತಾಗಿಲ್ಲ ಎಂದು ತಿಳಿಸಿದ್ದಾರೆ.

English summary
A house belonged to Minister R.V.Despande's son Prashant Deshpande was burgled in Sadashiva Nagar on Saturday late night. Police have visited the house and registered the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X