• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯದಲ್ಲಿ ರಮ್ಯಾ ಗೆದ್ದೇ ಗೆಲ್ಲುತ್ತಾಳೆ: ಅಂಬರೀಷ್

By Mahesh
|

ಬೆಂಗಳೂರು, ಏ.11: ಮಂಡ್ಯದ ಗಂಡು ಅಂಬರೀಷ್ ಅವರು ಮಲೇಷಿಯಾದಿಂದ ಬೆಂಗಳೂರಿಗೆ ಬಂದ ಮೇಲೆ ಮಂಡ್ಯಕ್ಕೆ ಯಾವಾಗ ಹೋಗುತ್ತಾರೆ? ರಮ್ಯಾ ಪರ ಪ್ರಚಾರ ಮಾಡುತ್ತಾರಾ? ಮಂಡ್ಯ ಕಾಂಗ್ರೆಸ್ ಬಿಕ್ಕಟ್ಟಿಗೆ ಅಂಬರೀಷ್ ಏನು ಪರಿಹಾರ ಸೂಚಿಸುತ್ತಾರೆ? ಎಂಬೆಲ್ಲಾ ಪ್ರಶ್ನೆಗಳಿಗೆ ವಸತಿ ಸಚಿವ ಅಂಬರೀಷ್ ಅವರು ಸಮಾಧಾನಚಿತ್ತರಾಗಿ ಉತ್ತರಿಸಿದರು.

ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಲಲಿತ್ ಅಶೋಕ್ ಹೋಟೆಲ್ ನಲ್ಲಿ ಪ್ರೆಸ್ ಕ್ಲಬ್ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂಬರೀಷ್ ಅವರು ಮೊದಲಿಗೆ ದೇಹಾರೋಗ್ಯದ ಪರಿಸ್ಥಿತಿ, ಅಭಿಮಾನಿಗಳ ಒಲವಿನ ಬಗ್ಗೆ ಮಾತನಾಡಿದರು[ಈ ವಿವರ ಇಲ್ಲಿ ಓದಿ]. ನಂತರ ರಿಯಲ್ ರಾಜಕೀಯದ ಬಗ್ಗೆ ಮೇಲ್ಕಂಡ ಪ್ರಶ್ನೆಗಳ ಬಗ್ಗೆ ವಿಸ್ತಾರವಾಗಿ ಮಾತನಾಡಿದರು.

ರಿಯಲ್ ರಾಜಕಾರಣ ಬಗ್ಗೆ ಅಂಬರೀಷ್ ಮಾತುಗಳು: [ಬೆಂಗಳೂರಿನಲ್ಲಿ ಮನಬಿಚ್ಚಿ ಮಾತನಾಡಿದ ಅಂಬರೀಷ್]

* ನಾನು ಮಂಡ್ಯಕ್ಕೆ ಹೋಗಲೇಬೇಕು... ಹೋಗುತ್ತೇನೆ. ನಾವು ಮಂಡ್ಯದಲ್ಲಿ ಗೆಲ್ಲುತ್ತೇವೆ. ರಮ್ಯಾ ಪ್ರಚಾರಕ್ಕೆ ಬರುವಂತೆ ಕರೆದಿದ್ದಾರೆ. ರಮ್ಯಾ ಈ ಬಾರಿಯೂ ಗೆದ್ದೇ ಗೆಲ್ಲುತ್ತಾಳೆ.
* ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಲವು ಉತ್ತಮ ಯೋಜನೆಗಳನ್ನು ಜನರಿಗೆ ನೀಡಿದ್ದಾರೆ. ಈ ಯೋಜನೆಗಳು ಕಾರ್ಯಕ್ರಗಳೆ ಕಾಂಗ್ರೆಸ್ ಪಕ್ಷಕ್ಕೆ ಶ್ರೀರಕ್ಷೆ ಇದರಿಂದ ರಾಜ್ಯದಲ್ಲಿ ಪಕ್ಷ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ.
* ಕರ್ನಾಟಕ ಅಭಿವೃದ್ಧಿ ಪಥದಲ್ಲಿ ಗುಜರಾತಿಗಿಂತ ಮುಂದಿದೆ.
* ನಾನು ಕಾಮನ್ ಮ್ಯಾನ್ ಆಗಿ ಕೇಳುತ್ತಿದ್ದೇನೆ. ಹೆಂಗೇ ಮೋದಿ ಅವರು ಪ್ರಧಾನಿಯಾಗುತ್ತಾರೆ? ಎಂದು ಪ್ರಶ್ನೆ ಎಸೆದರು.
* ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗುವುದು ಸುಲಭದ ಮಾತಲ್ಲ ಎಂದರು.
* ನಾನು ಮೋದಿ ಪ್ರಧಾನಿಯಾಗುವುದಿಲ್ಲ ಎಂದಿಲ್ಲ, ಹೇಗೆ ಆಗುತ್ತಾರೆ ಎಂದು ಕೇಳುತ್ತಿದ್ದೇನೆ.


* ನಂದನ್ ನಿಲೇಕಣಿ ಅವರು ನಾಗರೀಕರಿಗೆ ಆಧಾರ್ ಯೋಜನೆಯನ್ನು ಜಾರಿಗೆ ತಂದರು. ಆ ಮೂಲಕ ಬೆಂಗಳೂರನ್ನು ವಿಶ್ವಮಟ್ಟದಲ್ಲಿ ಗುರುತಿಸಲು ಕಾರಣವಾದರು. ಬಳಿಕ ನಿಲೇಕಣಿ ಅವರ ಸ್ಪರ್ಧೆಯಿಂದ ರಾಜಕಾರಣಿಗಳ ಕಣ್ಣುತೆರೆಸಿದೆ ಎಂದರು.
* 'ಹೋಗಿ ಎಲ್ಲಾ ಕಡೆ ಸಮಸ್ಯೆ ಬಗ್ಗೆ ತಿಳಿದುಕೊಳ್ಳುವಂತೆ ರಮ್ಯಾಗೆ ಹೇಳಿದ್ದೆ. ಅವಳಿಗೆ ಇನ್ನೂ ಚಿಕ್ಕ ವಯಸ್ಸು, ಎಂಪಿಯಾಗಿ ಆರು ತಿಂಗಳಲ್ಲಿ ಎಷ್ಟು ಕೆಲಸ ಮಾಡಬೇಕು ಅಷ್ಟು ಮಾಡಿದ್ದಾಳೆ.
* ನಾನು ದೇವರಾಜ್ ಅರಸ್ ಕಾಲದಿಂದ ಇದ್ದವನು ಅವಳು ಹೇಳಿದ್ದಕ್ಕೆ(w.r.t. ನನ್ನ ಅಪ್ಪನೇ ರಾಜಕೀಯಕ್ಕೆ ಕರೆತಂದಿದ್ದು) 'ಹೂಂ..' ಎಂದು ಹೇಳಿದರೆ ತಪ್ಪೇನಿದೆ. ಕೆಲವೊಮ್ಮೆ ಆತುರ ಪಡುತ್ತಾಳೆ ನಿಜ.
* ಮಂಡ್ಯದಲ್ಲಿ ಇರುವುದು ಒಂದೇ ಕಾಂಗ್ರೆಸ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
* ಮಂಡ್ಯ ಫೇಸ್ ಬುಕ್, ಟ್ವಿಟ್ಟರ್, ವ್ಯಾಟ್ಸ್ ಆಪ್ ನಲ್ಲಿರುತ್ತಾರೆ. ಮಂಡ್ಯದಲ್ಲಿ ಟ್ವಿಟ್ಟರ್ ನಡೆಯುವುದಿಲ್ಲ.
* ನಾನು ಫೇಸ್ ಬುಕ್, ಟ್ವಿಟ್ಟರ್ ಗೆ ಹೋದರೆ ಕೆಲಸ ಸಮಯ ಹಾಳು
* ನನ್ನ ಪತ್ನಿ ಹಾಗೂ ಮಗ ರಾಜಕೀಯಕ್ಕೆ ಬರಬೇಕಾಗಿಲ್ಲ.
* ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರವಾಗಲು ಸಾಧ್ಯವಿಲ್ಲ. ವ್ಯಕ್ತಿಗಳು ಭ್ರಷ್ಟವಾಗಿರುತ್ತಾರೆ.

* ಏ.12 ರಂದು ನಂದನ್ ನಿಲೇಕಣಿ ಪರ ಪ್ರಚಾರ ಮಾಡುತ್ತೇನೆ.
* ಏ.14ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಂಡ್ಯದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
* ಮಂಡ್ಯದ ಈ ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಮಾಜಿ ಸಿಎಂ ಎಸ್ ಎಂ ಕೃಷ್ಣ ಕೂಡಾ ಆಗಮಿಸಲಿದ್ದಾರೆ ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Housing Minister MH Ambareesh said he will join Ramya's election campaign in Mandya soon. There is no rift in Mandya congress and she will secure huge victory in the election. Ambareesh will address a mammoth rally in Mandya district on April 14

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more