ಮಿನರ್ವ ವೃತ್ತದಲ್ಲಿ ಶೀಘ್ರದಲ್ಲಿ ಉಕ್ಕಿನಸೇತುವೆ ಕಾಮಗಾರಿ ಆರಂಭ
ಬೆಂಗಳೂರು, ಜನವರಿ 19 : ನಗರದ ಮಿನರ್ವ ವೃತ್ತದಿಂದ ಹಡ್ಸನ್ ವೃತ್ತದವರೆಗೆ ನಿರ್ಮಾಣಗೊಳ್ಳಲಿರುವ ಉಕ್ಕಿನ ಸೇತುವೆ ಕಾಮಗಾರಿ ಇನ್ನು ಒಂದು ತಿಂಗಳಿನಲ್ಲಿ ಆರಂಭವಾಗಲಿದೆ.
ಜೆಸಿ ರಸ್ತೆಯ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಿಸಲಾಗುತ್ತಿರುವ ಉಕ್ಕಿನ ಸೇತುವೆಯನ್ನು ಬಿಬಿಎಂಪಿಯು ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿಯಲ್ಲಿ138.80 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದೆ. 18 ತಿಂಗಳ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
ಸೇತುವೆ ನಿರ್ಮಾಣದಿಂದ ವಿನರ್ವ ವೃತ್ತ, ಊರ್ವಶಿ ಟಾಕೀಸ್, ಪುರಭವನ, ಎಲ್ ಐಸಿ ಕೇಂದ್ರ ಕಚೇರಿ, ಹಲಸೂರು ಗೇಟ್ ಪೊಲೀಸ್ ಠಾಣೆ ಹಾಗೂ ಹಡ್ಸನ್ ವೃತ್ತದಲ್ಲಿ ವಾಹನ ದಟ್ಟಣಡಯನ್ನು ತಪ್ಪಿಸಬಹುದಾಗಿದೆ. ಸೇತುವೆಯಲ್ಲಿ ದ್ವಿಮುಖ ಸಂಚಾರ ವ್ಯವಸ್ಥೆಯನ್ನು ಹೊಂದಿರುವ 4 ಪಥಗಳ ನಿರ್ಮಾಣವಾಗಲಿದೆ. ವಿವಿಪುರ ರಸ್ತೆ ಹಾಗೂ ಆರ್ಮಿ ಸರ್ತೆ ಕಡೆಯಿಂದ ಬರುವ ವಾಹನಗಳು ಮಿನರ್ವ ವೃತ್ತದ ಬಳಿ ಮೇಲ್ಸೇತುವೆಗೆ ಹತ್ತಿದರೆ ಕೆ.ಜಿ. ರಸ್ತೆ ಹಾಗೂ ಕಸ್ತೂರ ಬಾ ರಸ್ತೆಯಲ್ಲಿ ಇಳಿಬಹುದು.

ನಗರೋತ್ಥಾನ ಯೋಜನೆಯಡಿ 135 ಕೋಟಿ ವೆಚ್ಚದ ಕ್ರಿಯಾಯೋಜನೆಗೆ 2016 ರ ಜನವರಿ 8 ರಂದು ಅನುಮೋದನೆ ನೀಡಲಾಗಿತ್ತು. ಈ ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ನಾಗೇಶ್ ಕನ್ಸ ಲ್ಟೆಂಟ್ ಸಂಸ್ಥೆಗೆ ವಹಿಸಲಾಗಿತ್ತು. ಆ ಸಂಸ್ಥೆಯು138.80 ಕೋಟಿ ಮೊತ್ತದ ಡಿಪಿಆರ್ ಸಲ್ಲಿಸಿತ್ತು.
ಈ ಮೇಲ್ಸೇತುವೆಗೆ 2009ರಲ್ಲಿಯೇ ಡಿಪಿಆರ್ ಸಿದ್ಧಪಿಡಿಸಲಾಗಿತ್ತು. ಬಿಬಿಎಂಪಿ ತಾಂತ್ರಿಕ ಸಲಹಾ ಸಮಿತಿ ಅದೇ ವರ್ಷ ಡಿಪಿಆರ್ ಗೆ ಅನುಮೋದನೆ ನೀಡಿತ್ತು. ಸೇತುವೆ ವಿನ್ಯಾಸದಿಂದ ಪಾರಂಪರಿಕ ಕಟ್ಟಡಗಳ ಅಂದಕ್ಕೆ ಧಕ್ಕೆ ಉಂಟಾಗಲಿದೆ ಎಂದು ಕೆಲವು ಸಂಘಟನೆಗಳು ದೂರಿದದವು ಈಗ ವಿರೋಧದ ನೆಉವೆಯೂ ಈ ಕಾಮಗಾರಿ ಆರಂಭಿಸಲು ಸಿದ್ಧತೆ ನಡೆದಿದೆ.











Click it and Unblock the Notifications