• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೈಫೈ ಎಂಜಿ, ಬ್ರಿಗೇಡ್ ರಸ್ತೆಯಲ್ಲಿ ಉಚಿತ ವೈಫೈ!

|

ಬೆಂಗಳೂರು, ಜ.23 : ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಸಂಚರಿಸುವ ಜನರಿಗೆ ಸಿಹಿ ಸುದ್ದಿ ಕಾದಿದೆ, ಜ.24ರಿಂದ ಎರಡು ರಸ್ತೆಗಳಲ್ಲಿ ಉಚಿತ ವೈಫೈ ಸೇವೆ ಆರಂಭವಾಗಲಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಬಜೆಟ್ ಘೋಷಿಸಿದ್ದ ಈ ಯೋಜನೆ ಸದ್ಯ ಕಾರ್ಯರೂಪಕ್ಕೆ ಬರುತ್ತಿದೆ. ನಮ್ಮ ವೈಫೈ ಹೆಸರಿನಲ್ಲಿ ಈ ಸೇವೆ ಆರಂಭವಾಲಿದೆ.

ಈ ಮಹತ್ವದ ಯೋಜನೆಗಾಗಿ ಸರ್ಕಾರ ಡಿ-ವಿಯೋಸ್ ಎಂಬ ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಹಂತದಲ್ಲಿ ಶಾಂತಿನಗರ, ಯಶವಂತಪುರ, ಕೋರಮಂಗಲ ಮುಂತಾದ ಬಿಎಂಟಿಸಿಯ ಟಿಟಿಎಂಸಿಯಲ್ಲಿಯೂ ವೈಫೈ ಯೋಜನೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಆದರೆ, ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಶುಕ್ರವಾರದಿಂದ ವೈಫೈ ಸೇವೆ ಲಭ್ಯವಿರುತ್ತದೆ. [ಸಿದ್ದರಾಮಯ್ಯ ಬಜೆಟ್ ಹೈಲೈಟ್ಸ್]

ನೀವು ವೈಫೈ ಸೇವೆ ಪಡೆಯಲು ಬ್ರೌಸರ್ ಓಪನ್ ಮಾಡಿ ನಮ್ಮ ವೈಫೈಸೇವೆಗೆ ಹೋಗಬೇಕು. ನಂತರ ನಿಮ್ಮ ಮೊಬೈನ್ ನಂ ಅನ್ನು ನಮೂದಿಸಿದ ನಂತರ ನಿಮಗೆ ಪಾಸ್ ವರ್ಡ್ ಸಂದೇಶ ರೂಪದಲ್ಲಿ ಬರುತ್ತದೆ. ನಂತರ 24 ಗಂಟೆಯಲ್ಲಿ ನೀವು 30 ನಿಮಿಷ ಉಚಿತವಾಗಿ ಬ್ರೌಸ್ ಮಾಡಬಹುದಾಗಿದೆ. ಮೂಲಗಳ ಪ್ರಕಾರ ವೈಫೈವೇಗ 512ಕೆಬಿಪಿಎಸ್ ಇರಲಿದೆ.

ಸರ್ಕಾರ ಮುಂದಿನ ದಿನಗಳಲ್ಲಿ ಇಂತಹ ಉಚಿತ ವೈಫೈಸೇವೆಯನ್ನು ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಇತರ ಪ್ರಮುಖ ನಗರಗಳಿಗೆ ವಿಸ್ತರಿಸಲು ಚಿಂತನೆ ನಡೆಸುತ್ತಿದೆ. ಅಂದಹಾಗೆ ಈ ಉಚಿತ ವೈಫೈ ಸೇವೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಸಮಿತಿ ಅಧ್ಯಕ್ಷ ಮೋಹನ್‌ದಾಸ್‌ ಪೈ ಅವರ ಕನಸು. ಐಸಿಟಿ ಸಮಿತಿ ಎರಡೂ ರಸ್ತೆಗಳಲ್ಲಿ ವೈಫೈ ಸೇವೆ ಆರಂಭಿಸುವ ಕುರಿತು ಸರ್ಕಾರಕ್ಕೆ ವರದಿ ನೀಡಿತ್ತು.

ಮೋಹನ್ ದಾಸ್ ಪೈ ಕನಸು

ಮೋಹನ್ ದಾಸ್ ಪೈ ಕನಸು

ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಬೆಂಗಳೂರಿನ ಎಂಜಿ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಈ ಉಚಿತ ವೈ-ಫೈ ಸೇವೆ ಆರಂಭಿಸಬೇಕೆಂದು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಸಮಿತಿ ಅಧ್ಯಕ್ಷ ಮೋಹನ್‌ದಾಸ್‌ ಪೈ 2012ರ ಜನವರಿಯಲ್ಲಿ ಸರ್ಕಾರಕ್ಕೆ ವರದಿ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಸರ್ಕಾರ ಬಜೆಟ್ ನಲ್ಲಿ ಈ ಯೋಜನೆಗೆ ಅನುದಾನ ಘೋಷಿಸಿದ್ದರು.

ಅನುದಾನ ನೀಡಿದ ಸಿಎಂ ಸಿದ್ದರಾಮಯ್ಯ

ಅನುದಾನ ನೀಡಿದ ಸಿಎಂ ಸಿದ್ದರಾಮಯ್ಯ

ಐಸಿಟಿ ಸಮಿತಿಯ ವರದಿ ಆಧರಿಸಿ ಸಿಎಂ ಸಿದ್ದರಾಮಯ್ಯ ತಮ್ಮ ಚೊಚ್ಚಲ ಬಜೆಟ್ ನಲ್ಲಿ ಉಚಿತ ವೈ-ಫೈ ಸೇವೆ ಒದಗಿಸುವುದಾಗಿ ಘೋಷಿಸಿದ್ದರು. ಬಜೆಟ್‌ ಅನುಷ್ಠಾನದ ಹಿನ್ನೆಲೆಯಲ್ಲಿ ಐಟಿ-ಬಿಟಿ ಇಲಾಖೆ ಡಿ-ವಿಯೋಸ್ ಬ್ರಾಡ್‌ಬ್ಯಾಂಡ್‌ ಕಂಪನಿಗೆ ವೈ-ಫೈ ಸೇವೆ ಒದಗಿಸುವ ಯೋಜನೆಯ ಜವಾಬ್ದಾರಿ ವಹಿಸಿತ್ತು. ಸದ್ಯ ಅದರ ಸಿದ್ಧತೆ ಪೂರ್ಣಗೊಂಡಿದ್ದು, ಸೇವೆ ಆರಂಭವಾಗಲಿದೆ.

ವೈಫೈ ವೇಗವೆಷ್ಟು

ವೈಫೈ ವೇಗವೆಷ್ಟು

ಸುಮಾರು 2.5ಕಿ.ಮೀ ವ್ಯಾಪ್ತಿಯಲ್ಲಿ ವೈ-ಫೈಸೇವೆ ಲಭ್ಯವಾಗಲಿವೆ. ಇದಕ್ಕಾಗಿ ಎಂ.ಜಿ. ರಸ್ತೆಯಲ್ಲಿ 20 ಹಾಗೂ ಬ್ರಿಗೇಡ್‌ ರಸ್ತೆಯಲ್ಲಿ 4 ಆಕ್ಸೆಸ್ (ಹಾಟ್ ಸ್ಪಾಟ್ ) ಪಾಯಿಂಟ್ ಗಳನ್ನು ಆಳವಡಿಸಲಾಗಿದೆ. ಪ್ರಾರಂಭದಲ್ಲಿ 500 ಕೆಬಿಪಿಎಸ್‌ ವೇಗದಲ್ಲಿ ಸೇವೆ ಲಭ್ಯವಿರುತ್ತದೆ.

ಮೆಟ್ರೋದಲ್ಲಿ ಸೇವೆ ಲಭ್ಯವಿದೆ

ಮೆಟ್ರೋದಲ್ಲಿ ಸೇವೆ ಲಭ್ಯವಿದೆ

ಈಗಾಗಲೇ ಎಂಜಿರಸ್ತೆಯಲ್ಲಿ ನಮ್ಮ ಮೆಟ್ರೋ ಸಂಚರಿಸುವ ಪ್ರಯಾಣಿಕರಿಗಾಗಿ ರೈಲಿನಲ್ಲಿ ಉಚಿತ ವೈಫೈ ಸೇವೆ ಒದಗಿಸಲಾಗಿದೆ. ಪ್ರಾಯೋಗಿಕವಾಗಿ ಒಂದು ರೈಲಿನಲ್ಲಿ ಇದನ್ನು ಅಳವಡಿಸಲಾಗಿದ್ದು, ಎಲ್ಲಾ ರೈಲಿಗಳಿಗೂ ವಿಸ್ತರಿಸಲು ಬಿಎಂಆರ್ ಸಿಎಲ್ ಯೋಜನೆ ರೂಪಿಸಿದೆ. ಎಂಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ಸಂಚರಿಸುವ ಟ್ರೇನ್ ನಂ 9 ಸದ್ಯ ಸೇವೆ ಲಭ್ಯವಿದೆ.

ಇತರ ಸ್ಥಳಗಳಿಗೆ ವಿಸ್ತರಣೆ

ಇತರ ಸ್ಥಳಗಳಿಗೆ ವಿಸ್ತರಣೆ

ಮುಂದಿನ ಹಂತದಲ್ಲಿ ಬೆಂಗಳೂರಿನ ಶಾಂತಿನಗರ, ಯಶವಂತಪುರ, ಕೋರಮಂಗಲ ಮುಂತಾದ ಬಿಎಂಟಿಸಿಯ ಟಿಟಿಎಂಸಿಯಲ್ಲಿಯೂ ವೈಫೈ ಯೋಜನೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಆದರೆ, ಈ ಕುರಿತು ಅಂತಿಮ ಆದೇಶ ಹೊರಬಿದ್ದಿಲ್ಲ.

ರಾಜ್ಯದ ಇತರ ನಗರಗಳಿಗೂ ವೈಫೈ

ರಾಜ್ಯದ ಇತರ ನಗರಗಳಿಗೂ ವೈಫೈ

ಸರ್ಕಾರ ಮುಂದಿನ ದಿನಗಳಲ್ಲಿ ಉಚಿತ ವೈಪೈ ಸೇವೆಯನ್ನು ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಇತರ ಪ್ರಮುಖ ನಗರಗಳಿಗೆ ವಿಸ್ತರಿಸಲು ಚಿಂತನೆ ನಡೆಸುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Visitors to Bangalore’s commercial hubs MG Road and Brigade Road can enjoy free wireless Internet connectivity starting from January 24. Called ‘Namma Wifi’, it will be first of its kind service in the country. It will be formally launched near Metro station on M.G.Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more