ಮೆಟ್ರೋ ನಿಲ್ದಾಣದಲ್ಲಿ ಶೀಘ್ರ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ ಆರಂಭ
Recommended Video

ಬೆಂಗಳೂರು, ಜೂನ್ 26: ಮೆಟ್ರೋ ನಿಲ್ದಾಣಗಳ ಬಳಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರವನ್ನು ತೆರೆಯಲು ಸಿದ್ಧತೆ ನಡೆಸುತ್ತಿದೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮಹಾತ್ಮಾ ಗಾಂಧಿ ರಸ್ತೆ, ಬೈಯಪ್ಪನಹಳ್ಳಿ ಇತರೆ ಪ್ರಮುಖ ನಿಲ್ದಾಣಗಳಲ್ಲಿ ಚಾರ್ಜಿಂಗ್ ಕೇಂದ್ರ ತೆರೆಯಲು ಮುಂದಾಗಿದೆ. ಬಿಎಂಆರ್‌ಸಿಎಲ್ ಎಂಡಿ ಮಹೇಂದ್ರ ಜೈನ್ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಹೆಚ್ಚು ಪ್ರಯಾಣಿಕರ ಜನದಟ್ಟಣೆ ಉಳ್ಳ ನಿಲ್ದಾಣಕ್ಕೆ ಮೊದಲು ಪ್ರಾತಿನಿಧ್ಯ ನೀಡಲಾಗುತ್ತದೆ.
ಇದೀಗ ಮೊದಲ ಹಂತದಲ್ಲಿ 40 ನಿಲ್ದಾಣಗಳಿವೆ ಇವುಗಳಲ್ಲಿ 7 ಸುರಂಗ ಮಾರ್ಗಗಳಿವೆ, ಅವುಗಳನ್ನು ಹೊರತುಪಡಿಸಿ ಉಳಿದೆಡೆ ಎಲೆಕ್ಟ್ರಿಕ್ ಚಾರ್ಜ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.ಈ ಕುರಿತು ಬೆಸ್ಕಾಂ ಅಧಿಕಾರಿಗಳ ಜತೆಗೆ ಒಂದು ಹಂತದ ಸಭೆ ನಡೆದಿದೆ.ಬೆಸ್ಕಾಂ ಗೃಹ ಹಾಗೂ ಗೃಹೇತರ ಬಳಕೆಗೆ ವಿದ್ಯುತ್ ದರ ನಿಗದಿ ಮಾಡಿದೆ. ಚಾರ್ಜಿಂಗ್ ಘಟಕಗಳಿಗೆ ಪ್ರತ್ಯೇಕ ದರ ನಿಗದಿ ಆಗಬೇಕಾಗಿರುವ ಕಾರಣ ಕೆಇಆರ್‌ಸಿಗೆ ಬಿಎಂಆರ್‌ಸಿಎಲ್ ಪ್ರಸ್ತಾವನೆ ಸಲ್ಲಿಸಿದೆ.

ಬೆಸ್ಕಾಂ ತನ್ನ ವ್ಯಾಪ್ತಿಯ ಕೆಲ ಉಪಕೇಂದ್ರಗಳಲ್ಲಿ ಚಾರ್ಜಿಂಗ್ ಘಟಕಗಳ ಸ್ಥಾಪನೆಗೆ ಮುಂದಾಗಿದೆ. ಸದ್ಯ ಕೇಂದ್ರ ಕಚೇರಿಯಲ್ಲಿ ಚಾರ್ಜಿಂಗ್ ಕೇಂದ್ರವಿದೆ, ಅದನ್ನು ಇನ್ನೂ 10 ಕಡೆ ವಿಸ್ತರಿಸಲು ಬೆಸ್ಕಾಂ ನಿರ್ಧರಿಸಿದೆ. ನಗರದಲ್ಲಿ ಒಟ್ಟು 86 ಕಡೆ ವಿಸ್ತರಿಸುವ ಗುರಿಯನ್ನು ಬೆಸ್ಕಾಂ ಹೊಂದಿದೆ.











Click it and Unblock the Notifications