• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಚ್‌1ಎನ್1 ಕುರಿತು ಜಾಗೃತಿಗೆ ಮುಂದಾದ ನಮ್ಮ ಮೆಟ್ರೋ

|

ಬೆಂಗಳೂರು, ನವೆಂಬರ್ 7: ಬೆಂಗಳೂರು ಸೇರಿದಂತೆ ಇಡೀ ರಾಜ್ಯಾದ್ಯಂತ ಎಚ್‌1ಎನ್1 ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಕುರಿತು ಎಚ್ಚರಿಕೆ ನೀಡಲು ನಮ್ಮ ಮೆಟ್ರೋ ಮುಂದಾಗಿದೆ.

ದೀಪಾವಳಿ ವಿಶೇಷ ಪುರವಣಿ

ಇತ್ತೀಚಿಗಷ್ಟೆ ಕನ್ನಡದಲ್ಲಿ ಕನ್ನಡ ಹನಿಗವನ, ಚುಟುಕುಗಳನ್ನು ಪ್ರಸಾರ ಮಾಡುತ್ತಿದ್ದಾರೆ, ಕನ್ನಡ ರಾಜ್ಯೋತ್ಸವದ ತಿಂಗಳು ಪೂರ್ತಿಯಾಗಿ ಕನ್ನಡ ಘೋಷಣೆಗಳನ್ನು ಹಾಕಲಾಗುತ್ತಿದೆ. ಇದೀಗ ಎಚ್‌1ಎನ್1 ರೋಗದ ಕುರಿತು ಮಾಹಿತಿ ಹಾಗೂ ಎಚ್ಚರಿಕೆಯನ್ನು ಪ್ರಸಾರ ಮಾಡುತ್ತಿದೆ.

ಕರ್ನಾಟಕದಲ್ಲಿ ಈ ಬಾರಿ ಡೆಂಗ್ಯೂ ಹಾವಳಿ ನಿಯಂತ್ರಣದಲ್ಲಿ!

ಎಚ್‌1ಎನ್1 ರೋಗ ಮೊದಲೇ ಪತ್ತೆಯಾದಲ್ಲಿ ಅದನ್ನು ಸುಲಭವಾಗಿ ಕಡಿಮೆ ಮಾಡಬಹುದಾಗಿದೆ, ಈ ರೋಗದ ಬಗ್ಗೆ ಹೆದರುವ ಅಗತ್ಯವಿಲ್ಲ ಎಂದು ಪ್ಲಾಟ್‌ಫಾರ್ಮ್ ಮಾತ್ರವಲ್ಲದೆ ಮೆಟ್ರೋ ನಿಲ್ದಾಣದಾದ್ಯಂತ ಪ್ರಸಾರ ಮಾಡಲಾಗುತ್ತಿದೆ. ಹೆಚ್ಚು ಜನಸಂದಣಿ ಇರುವ ಪ್ರದೇಶದಲ್ಲಿ ಈ ರೋಗದ ಬಗ್ಗೆ ಜಾಗೃತಿ ನೀಡುವ ಅಗತ್ಯವಿದೆ ಎನ್ನುವುದು ವೈದ್ಯರ ಮಾತು.

ಬೆಂಗಳೂರಲ್ಲಿ 10 ದಿನಗಳಲ್ಲಿ 23 ಎಚ್‌1ಎನ್‌1 ಪ್ರಕರಣ ಪತ್ತೆ

ಇದೀಗ ನಮ್ಮ ಮೆಟ್ರೋದಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ, ಶೀಘ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾಲ್ ಗಳು, ಮಲ್ಟಿ ಪ್ಲೆಕ್ಸ್‌ಗಳನ್ನೂ ಈ ರೀತಿಯ ಜಾಗೃತಿ ಘೋಷಣೆಗಳನ್ನು ಪ್ರಸಾರ ಮಾಡ ಮಾಡಬೇಕಾಗುತ್ತದೆ.

ಬೆಂಗಳೂರಲ್ಲಿ ಎಚ್‌1ಎನ್‌1 46 ಪ್ರಕರಣ ಪತ್ತೆ: ರಾಜ್ಯಾದ್ಯಂತ ಹೈ ಅಲರ್ಟ್

ಮಾಸ್ಕ್‌ಗಳನ್ನು ಧರಿಸುವುದು, ಕರವಸ್ತ್ರವನ್ನು ಬಳಕೆ ಮಾಡುವುದು ಕಡ್ಡಾಯವಾಗಿದೆ. ನವೆಂಬರ್ 3ರವರೆಗೆ ರಾಜ್ಯದಲ್ಲಿ 17 ಹಂದಿ ಜ್ವರದಿಂದ ಮೃತಪಟ್ಟಿದ್ದಾರೆ. 2017ರಲ್ಲಿ ಒಟ್ಟು 15 ಮಂದಿ ಮೃತಪಟ್ಟಿದ್ದರು.

English summary
With the H1N1 scare gripping the city, the BMRCL is using its public address systems to make commuters aware about the disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X