ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಮೆಟ್ರೋ ಸಂಪರ್ಕ: ಸಿದ್ದರಾಮಯ್ಯ

ಬೆಂಗಳೂರು, ಜೂನ್ 17: ಆರ್ಥಿಕ ಅನುಕೂಲ ಮಾಡಿಕೊಟ್ಟ ಜಪಾನ್ ಹಾಗೂ ಜರ್ಮನಿಗೆ ಧನ್ಯವಾದ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿದರು. ಲಂಡನ್ ನಲ್ಲಿ ನೂರೈವತ್ತು ವರ್ಷಗಳ ಹಿಂದೆಯೇ ಮೆಟ್ರೋ ಯೋಜನೆ ಆರಂಭವಾಯಿತು. ಆದರೆ ನಾವು ಬಹಳ ಹಿಂದೆ ಉಳಿದಿದ್ದೇವೆ ಎಂದರು.

ವಿಧಾನಸೌಧದಲ್ಲಿ ಶನಿವಾರ ಬೆಂಗಳೂರು ಮೆಟ್ರೋದ ಹಸಿರು ಲೈನ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೋಲ್ಕತ್ತದಲ್ಲಿ ಮೂವತ್ಮೂರು ವರ್ಷದ ಹಿಂದೆ ಮೆಟ್ರೋ ಯೋಜನೆ ಜಾರಿಯಾಯಿತು. ಆ ನಂತರ ದೆಹಲಿಯಲ್ಲಿ ತುಂಬ ಯಶಸ್ವಿಯಾಗಿ ಜಾರಿಯಾಯಿತು. ಮುಂದಿನ ಹದಿನೈದು ವರ್ಷದಲ್ಲಿ ಕನಿಷ್ಠ ಹನ್ನೆರಡು ನಗರದಲ್ಲಿ ಮೆಟ್ರೋ ಜಾರಿಗೆ ಬರಲಿದೆ ಎಂದು ಹೇಳಿದರು.

Metro rail to Bengaluru International airport: Siddaramaiah

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಹೊರವರ್ತುಲ ರಸ್ತೆಗೆ ಮೆಟ್ರೋ ಸಂಪರ್ಕ ಕಲ್ಪಿಸಲಾಗುವುದು. ದೆಹಲಿ ನಂತರ ಸಂಪೂರ್ಣ ಮೆಟ್ರೋ ವ್ಯವಸ್ಥೆ ಹೊಂದಿರುವ ನಗರ ಬೆಂಗಳೂರು. ಈ ಯಶಸ್ಸಿಗೆ ಕಾರಣರಾದ ಕರ್ನಾಟಕದ ಜನರಿಗೆ ಧನ್ಯವಾದ ಎಂದು ಹೇಳಿದರು.

ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮಾತನಾಡಿ, ಮೆಟ್ರೋ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅನಂತಕುಮಾರ್ ಗೆ ಅಭಿನಂದನೆಗಳು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+