Metro Pink line: ಬೆಂಗಳೂರು ನಮ್ಮ ಮೆಟ್ರೋದಿಂದ ಗುಡ್‌ನ್ಯೂಸ್: ಪಿಂಕ್ ಲೈನ್ ಮಾರ್ಗ ಅಕ್ಟೋಬರ್‌ನಲ್ಲೇ ಪ್ರಾರಂಭ, ಹೊಸ ಅಪ್ಡೇಟ್ಸ್‌

Metro Pink line: ಬೆಂಗಳೂರಿನ ನಮ್ಮ ಮೆಟ್ರೋದ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL)ವು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಎತ್ತರಿಸಿದ ಪಿಂಕ್ ಲೈನ್ ಪ್ರಾರಂಭಿಸಲು ಎದುರಾಗಿದ್ದ ಪ್ರಮುಖ ಮತ್ತೊಂದು ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ. ಹೀಗಾಗಿ ಬನ್ನೇರುಘಟ್ಟ ರಸ್ತೆಗೆ ಅಕ್ಟೋಬರ್ ಎರಡನೇ ವಾರದ ವೇಳೆಗೆ ಮೆಟ್ರೋ ಸಂಪರ್ಕ ಪ್ರಾರಂಭವಾಗುವ ಸಾಧ್ಯತೆ ಇದೆ.

ಬೆಂಗಳೂರು ನಮ್ಮ ಮೆಟ್ರೋದ ಪಿಂಕ್ ಲೈನ್ ಪ್ರಾರಂಭಕ್ಕೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್‌ ಬಂದಿದೆ. ಈ ಮಾರ್ಗ ಪ್ರಾರಂಭಕ್ಕಾಗಿ ಬೆಂಗಳೂರಿನ ಜನ ಕಾತುರದಿಂದ ಕಾಯುತ್ತಿದ್ದಾರೆ. ಬೆಂಗಳೂರು ನಮ್ಮ ಮೆಟ್ರೋದ ಪಿಂಕ್ ಲೈನ್ ಮಾರ್ಗದ 7.5 ಕಿ.ಮೀ. ಮಾರ್ಗದಲ್ಲಿ ಆರು ರೈಲುಗಳನ್ನು ಓಡಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಗರಿಷ್ಠ ಸಮಯದಲ್ಲಿ ಆರು ನಿಮಿಷಗಳ ಪುನರಾವರ್ತನೆ ಮತ್ತು ಗರಿಷ್ಠ ಸಮಯದಲ್ಲಿ 10 ನಿಮಿಷಗಳ ಪುನರಾವರ್ತನೆಯೊಂದಿಗೆ ( (ಆವರ್ತನ - Frequency) ಈ ಸಂಚಾರ ಇರಲಿದೆ ಎಂದು ಬಿಎಂಆರ್‌ಸಿಎಲ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Metro Pink Line Good News for Bengaluru Metro Commuters Pink Line Set to Start in October

Metro Pink line: ಪಿಂಕ್ ಲೈನ್‌ಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ

ಇನ್ನು ಬಿಎಂಆರ್‌ಸಿಎಲ್ ಕೆಲವು ದಿನಗಳ ಹಿಂದೆ ಪಿಂಕ್ ಮೆಟ್ರೋ ಲೈನ್‌ಗೆ ಸಂಬಂಧಿಸಿದಂತೆ ಸಿಗ್ನಲಿಂಗ್ ವ್ಯವಸ್ಥೆಗೆ ಸ್ವತಂತ್ರ ಸುರಕ್ಷತಾ ಮೌಲ್ಯಮಾಪಕ (ಐಎಸ್‌ಎ) ಪ್ರಮಾಣಪತ್ರವನ್ನು ಪಡೆದಿದೆ. ಹೀಗಾಗಿ, ಇದರ ಮುಂದುವರಿದ ಭಾಗವಾಗಿ ಕಾರ್ಯಾಚರಣೆಯ ಯೋಜನೆಗಳು ಕೊನೆಗೂ ರೂಪುಗೊಳ್ಳುತ್ತಿವೆ. ರೋಲಿಂಗ್ ಸ್ಟಾಕ್‌ಗೆ ಬಹುನಿರೀಕ್ಷಿತ ರೈಲ್ವೆ ಮಂಡಳಿಯ ಅನುಮೋದನೆಯನ್ನು ಈ ವಾರದ ಅಂತ್ಯದ ವೇಳೆಗೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಈ ಕಡತವನ್ನು ಮೇಲಧಿಕಾರಿಗಳು ಪರಿಶೀಲಿಸಿ ಅನುಮೋದಿಸಿದ್ದಾರೆ ಎಂದು ಹೇಳಲಾಗಿದೆ.

ಬುಧವಾರ, ಬಿಎಂಆರ್ ಸಿಎಲ್‌ ಅಧಿಕಾರಿಗಳು ಮೆಟ್ರೋ ರೈಲ್ವೆ ಸುರಕ್ಷತೆ (ದಕ್ಷಿಣ ವೃತ್ತ) ಆಯುಕ್ತ ವಿ ವೆಂಕಟಸುಬ್ರಮಣಿಯನ್ ಅವರನ್ನು ಭೇಟಿ ಮಾಡಿ ಸುರಕ್ಷತಾ ಪರಿಶೀಲನೆಗಾಗಿ ದಾಖಲೆಗಳನ್ನು ಸಲ್ಲಿಸಲಿದ್ದಾರೆ. ಅಲ್ಲದೆ ಪರಿಶೀಲನೆಗೂ ಮೊದಲು CMRS ಸಮಗ್ರ ದಾಖಲೆಗಳನ್ನು ಸಲ್ಲಿಸುವಂತೆ ಕೇಳಿದೆ ಎಂದು ಹೇಳಲಾಗಿದೆ. ಹೀಗಾಗಿ, ಅಕ್ಟೋಬರ್ ಮೊದಲ ವಾರದೊಳಗೆ CMRS ತಪಾಸಣೆ ಮಾಡುವ ಸಾಧ್ಯತೆ ಇದೆ ಎಂದು DH ವರದಿ ಮಾಡಿದೆ.

ಎರಡು ದಿನಗಳ ತಪಾಸಣೆಯು ಕೊತ್ತನೂರು ಡಿಪೋ, ಬನ್ನೇರುಘಟ್ಟ ರಸ್ತೆಯಲ್ಲಿರುವ ಎಲ್ಲಾ ಆರು ನಿಲ್ದಾಣಗಳು, ಎತ್ತರದ ಹಳಿಗಳು ಮತ್ತು ಇತರ ವ್ಯವಸ್ಥೆಗಳ ಮೋಟಾರ್ ಟ್ರಾಲಿ ಪರಿಶೀಲನೆಯನ್ನು ಒಳಗೊಂಡಿರಲಿದೆ. CMRS ಅಧಿಕಾರ ಬಂದ ನಂತರ, ನಾವು ಯಾವುದೇ ದಿನ ಪ್ರಯಾಣಿಕರ ಸೇವೆಗಳನ್ನು ಪ್ರಾರಂಭಿಸಲು ಸಿದ್ಧರಾಗುತ್ತೇವೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳಿದ್ದಾರೆ. ಸರ್ಕಾರದ ಅನುಮೋದನೆಗಳಿಗೆ ಒಳಪಟ್ಟು ಅಕ್ಟೋಬರ್ ಎರಡನೇ ವಾರದೊಳಗೆ ಪಿಂಕ್ ಲೈನ್ ಮಾರ್ಗವು ಪ್ರಾರಂಭವಾಗುವ ಸಾಧ್ಯತೆ ಇದೆ.

Metro Pink line: ಬೆಂಗಳೂರು ಪಿಂಕ್ ಮೆಟ್ರೋ ಲೈನ್ ಮಾರ್ಗ ವಿವರ

ಇನ್ನು ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್ ಕಾಳೇನ ಅಗ್ರಹಾರದಿಂದ ನಾಗಾವರದವರೆಗೆ ಒಟ್ಟು 21.25 ಕಿ.ಮೀ ಉದ್ದದ ಮೆಟ್ರೋ ಮಾರ್ಗವಾಗಿದೆ. ಈ ಮಾರ್ಗದ ಉದ್ದವು ಒಟ್ಟು 21.25 ಕಿ.ಮೀ (7.5 ಕಿ.ಮೀ ಎಲಿವೇಟೆಡ್ ಅಥವಾ ಉನ್ನತ ಮಟ್ಟದ ಮಾರ್ಗ ಮತ್ತು 13.76 ಕಿ.ಮೀ ಸುರಂಗ ಮಾರ್ಗ) ಇದೆ. ಇನ್ನು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ ಎಲಿವೇಟೆಡ್ ಮಾರ್ಗವು ಉದ್ಘಾಟನೆಗೆ ಸಿದ್ಧವಿದೆಯಾದರೂ, ಸುರಕ್ಷತಾ ಪ್ರಮಾಣಪತ್ರಗಳು (RDSO ಮತ್ತು CMRS ಅನುಮೋದನೆ) ಬಾಕಿ ಇದೆ. ಹೀಗಾಗಿ, ಸೆಪ್ಟೆಂಬರ್ 2026 ರ ಹೊತ್ತಿಗೆ ಆರಂಭವಾಗುವುದು ವಿಳಂಬವಾಗಬಹುದು ಎಂದು ಅಂದಾಜಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+