ಬೆಂಗಳೂರು: ಬಡ ಮಕ್ಕಳಿಗಾಗಿ 300 ಕೋಟಿ ಮೌಲ್ಯದ ಆಸ್ತಿ ದಾನ ಮಾಡಿದ ಮಹಿಳೆ
ಬೆಂಗಳೂರು, ಜನವರಿ 02: ನಗರದ ವಾಣಿಜ್ಯ ಪ್ರದೇಶದಲ್ಲಿ ಸ್ಥಿತವಾಗಿರುವ, ಒಂದು ಕಾಲದಲ್ಲಿ ಚಿತ್ರರಂಗದವರ ಮೆಚ್ಚಿನ ಹೊಟೆಲ್ ಆಗಿದ್ದ ಲಕ್ಷ್ಮಿ ಹೋಟೆಲ್ ಇನ್ನು ಮುಂದೆ 'ಲಕ್ಷ್ಮಿ ಮಕ್ಕಳ ಆರೋಗ್ಯ ಕೇಂದ್ರ'ವಾಗಿ ಬದಲಾಗಲಿದೆ.
ಹೌದು, ಡಾ.ರಾಜ್‌ಕುಮಾರ್, ವಿಷ್ಣುವರ್ಧನ್ ಸೇರಿ ಹಲವು ನಟರಿಗೆ ಅಚ್ಚು-ಮೆಚ್ಚಿನ ಹೊಟೆಲ್ ಆಗಿದ್ದ ಲಕ್ಷ್ಮಿ ಹೊಟೆಲ್ ಅನ್ನು ಅದರ ಮಾಲಕಿ ಮೀರಾ ನಾಯ್ಡು ಅವರು ಬಡ ಮಕ್ಕಳಿಗಾಗಿ ದಾನ ಮಾಡಿದ್ದಾರೆ.
ನಗರದ ಪ್ರಮುಖ ವಾಣಿಜ್ಯ ಪ್ರದೇಶವಾಗಿರುವ ಗಾಂಧಿ ನಗರದಲ್ಲಿರುವ ಈ ಹೋಟೆಲ್ 300 ಕೋಟಿಗೂ ಹೆಚ್ಚಿನ ಬೆಲೆ ಬಾಳುತ್ತದೆ. ಈಗಾಗಲೇ ಹಲವರು 300 ಕೋಟಿ ಕೊಟ್ಟು ಹೋಟೆಲ್ ಖರೀದಿಸುವುದಾಗಿ ಹೇಳಿದ್ದರಂತೆ ಆದರೆ ಮೀರಾ ನಾಯ್ಡು ಅವರು ಈ ಹೋಟೆಲ್ ಅನ್ನು ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗಾಗಿ ದಾನ ಮಾಡಿದ್ದಾರೆ.

ಕ್ಯಾನ್ಸರ್ ಚಿಕಿತ್ಸೆಗಾಗಿ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರುವವರು ತಿಂಗಳಾನುಗಟ್ಟಲೆ ನಗರದಲ್ಲಿಯೇ ಉಳಿದುಕೊಳ್ಳಬೇಕಾಗುತ್ತದೆ. ಅದು ಅವರಿಗೆ ತ್ರಾಸದಾಯಕ, ಹಾಗಾಗಿ ಅಂತಹಾ ಬಡ ಮಕ್ಕಳಿಗೆ ಅವರ ಪೋಷಕರಿಗೆ ಉಚಿತವಾಗಿ ಉಳಿದುಕೊಳ್ಳುವ ವ್ಯವಸ್ಥೆ 'ಲಕ್ಷ್ಮಿ ಮಕ್ಕಳ ಆರೋಗ್ಯ ಕೇಂದ್ರ'ದಲ್ಲಿ ಇದೆ. ಇಲ್ಲಿಯೇ ಚಿಕಿತ್ಸಾ ಕೇಂದ್ರವೂ ಇದೆ.
ಬಡವರಿಗೆ ಉಚಿತವಾಗಿ ಕ್ಯಾನ್ಸರ್ ಚಿಕಿತ್ಸೆ ನೀಡುತ್ತಿರುವ ಶಂಕರ್ ಆಸ್ಪತ್ರೆಗೆ ಈ ಹೋಟೆಲ್ ಅನ್ನು ದಾನವಾಗಿ ಕೊಟ್ಟಿರುವ ಮೀರಾ ನಾಯ್ಡು, 'ಈ ಹೋಟೆಲ್ ನಿರ್ಮಿಸಿದ ಪತಿ ಆರ್.ಶ್ರೀನಿವಾಸ ನಾಯ್ಡು ಅವರಿಗೆ ನಿಜವಾದ ಗೌರವ' ಎಂದಿದ್ದಾರೆ.
ಪತಿ ಶ್ರೀನಿವಾಸ್ ನಾಯ್ಡು ಅವರು ಬಹಳ ಕಷ್ಟಪಟ್ಟು ಈ ಹೋಟೆಲ್ ಕಟ್ಟಿಸಿದ್ದರು. ಆದರೆ ಅವರ ಕಾಲಾನಂತರ ಹೋಟೆಲ್ ಬಗೆಗಿನ ಆದ್ಯತೆಗಳು ಬದಲಾದವು, ಹಾಗಾಗಿ ಅವರ ಗೌರವಾರ್ತ ಈ ಹೋಟೆಲ್ ಅನ್ನು ಬಡವರಿಗೆ ದಾನ ಮಾಡುತ್ತಿದ್ದೇನೆ' ಎಂದಿದ್ದಾರೆ.
ಮೂರು ಅಂತಸ್ತಿನ ಈ ಹೋಟೆಲ್ ನಲ್ಲಿ 32 ಕೊಠಡಿಗಳಿವೆ. ಪ್ರತಿ ಅಂತಸ್ತಿನಲ್ಲಿಯೂ ಅಡುಗೆ ಕೋಣೆ ನಿರ್ಮಿಸಲಾಗಿದೆ. ಚಿಕಿತ್ಸೆಗೆ ಬರುವ ಮಕ್ಕಳು ಮತ್ತು ಅವರ ಪೋಷಕರು ಉಚಿತವಾಗಿ ಈ ಹೋಟೆಲ್‌ನಲ್ಲಿ ಉಳಿದುಕೊಳ್ಳಬಹುದು ಮತ್ತು ಇಲ್ಲಿಯೇ ಇರುವ ಚಿಕಿತ್ಸಾ ಕೇಂದ್ರದಲ್ಲಿ ಉಚಿತ ಚಿಕಿತ್ಸೆಯನ್ನೂ ಪಡೆಯಬಹುದು.
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ











Click it and Unblock the Notifications