ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಸೆ.17ರಂದು ಮಾಂಸ ಮಾರಾಟ ನಿಷೇಧ

By Vanitha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 15 : ಗಣೇಶ ಚತುರ್ಥಿಯ ದಿನದಂದು ನಗರದಲ್ಲಿ ಮಾಂಸ ಮಾರಾಟ ನಿಷೇಧಿಸಲು ಪಶುಪಾಲನಾ ವಿಭಾಗದ ಜಂಟಿ ಕಾರ್ಯದರ್ಶಿಗಳು ನಿರ್ಧಾರ ತೆಗೆದುಕೊಂಡಿದ್ದು, ಈ ನಿಯಮ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಪ್ರದೇಶಗಳಿಗೂ ಅನ್ವಯವಾಗಲಿದೆ.

ನಗರದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಭಾರೀ ತಯಾರಿ ನಡೆಯುತ್ತಿದ್ದು, ಸೆಪ್ಟಂಬರ್ 17ರ ಗುರುವಾರ ಗಣೇಶ ಚತುರ್ಥಿಯಂದು ಮಾತ್ರ ಮಾಂಸ ಮಾರಾಟ ನಿಷೇಧಿಸಲು ಆಜ್ಞೆ ಹೊರಡಿಸಲಾಗಿದೆ. ಇದರಂತೆ ನಗರಾದ್ಯಂತ ಮಾಂಸ ಮಾರಾಟ ಸ್ಥಗಿತಗೊಳ್ಳಲಿದೆ.[ಮಾಂಸ ಮಾರಾಟ ನಿಷೇಧ: ಮುಂಬೈ ಈಗ 'ಬ್ಯಾನ್- ಇಸ್ತಾನ್']

Meat ban in bengaluru on Ganesh Chaturthi, September 17

ಪಶುಪಾಲನಾ ವಿಭಾಗದಿಂದ ಹೊರಡಿಸಿದ ಈ ಆದೇಶವು ಒತ್ತಾಯಪೂರ್ವಕವಾದುದಲ್ಲ. ಆದರೂ ಮಾಂಸ ಮಾರಾಟಗಾರರು ಗಣೇಶ ಹಬ್ಬದ ಪ್ರಯುಕ್ತ ಈ ನಿಯಮವನ್ನು ಪಾಲಿಸುವಂತೆ ಆದೇಶ ಹೊರಡಿಸಿದ್ದಾರೆ.

ರಾಷ್ಟ್ರದಾದ್ಯಂತ ಜೈನರ ಪರ್ಯೂಷಣದ ಪ್ರಯುಕ್ತ ಜಮ್ಮು ಕಾಶ್ಮೀರ, ಹರ್ಯಾಣ, ಮುಂಬೈ, ರಾಜ್ಯದಲ್ಲಿ ಮಾಂಸ ಮಾರಾಟ ನಿಷೇಧದ ಕುರಿತಾಗಿ ಪ್ರತಿರೋಧಗಳು ತಲೆದೋರಿದ್ದವು. ಇದರ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಮಾಂಸ ಮಾರಾಟ ನಿಷೇಧದ ತೀರ್ಪನ್ನು ಮುಂಬೈ ಹೈಕೋರ್ಟ್ ತಡೆಹಿಡಿದಿದೆ.

English summary
Meat ban in Bengaluru, on Ganesh Chaturthi, Thursday, September 17th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X