ಅಪ್ಪಾಜಿ ಕ್ಯಾಂಟೀನ್‌ನಲ್ಲಿ ಆಗಸ್ಟ್ 6ರಂದು 1 ರೂ.ಗೆ ಊಟ
ಬೆಂಗಳೂರು, ಆಗಸ್ಟ್ 04 : ಬೆಂಗಳೂರು ನಗರದಲ್ಲಿ ಅಪ್ಪಾಜಿ ಕ್ಯಾಂಟೀನ್ ಆರಂಭವಾಗಿ ಮೂರು ವರ್ಷಗಳು ಕಳೆಯುತ್ತಿವೆ. ಆದ್ದರಿಂದ, ಆಗಸ್ಟ್ 6 ರಂದು 1 ರೂ.ಗೆ ಮಧ್ಯಾಹ್ನದ ಊಟ ನೀಡಲಾಗುತ್ತದೆ.
ಜೆಡಿಎಸ್ ನಾಯಕ, 'ನಮ್ಮ ದೇವೇಗೌಡ ಅಪ್ಪಾಜಿ ಕ್ಯಾಂಟೀನ್' ರೂವಾರಿ ಟಿ. ಎ. ಶರವಣ ಈ ಕುರಿತು ಘೋಷಣೆ ಮಾಡಿದ್ದಾರೆ. ಕ್ಯಾಂಟೀನ್‌ನಲ್ಲಿ ಇನ್ನು ಮುಂದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರ ಸಿಗಲಿದೆ ಎಂದು ಹೇಳಿದ್ದಾರೆ.
ಕೋವಿಡ್ ಸೋಂಕಿನ ಹಿನ್ನಲೆಯಲ್ಲಿ ಅಪ್ಪಾಜಿ ಕ್ಯಾಂಟೀನ್‌ನಲ್ಲಿ ಸ್ಯಾನಿಟೈಸರ್, ಸ್ವಚ್ಛತೆ ಹಾಗೂ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತೇವೆ. ಕ್ಯಾಂಟೀನ್ ಎಂದಿನಂತೆ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಅಪ್ಪಾಜಿ ಕ್ಯಾಂಟೀನ್ ಆರಂಭವಾಗಿ 3 ಮೂರು ವರ್ಷಗಳು ಕಳೆದಿವೆ. ಈ ಹಿನ್ನಲೆಯಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಆಗಸ್ಟ್ 6 ರಂದು 12ಗಂಟೆಯಿಂದ ಮಧ್ಯಾಹ್ನದ ಊಟವನ್ನು 1 ರೂ.ಗೆ ವಿತರಣೆ ಮಾಡಲಾಗುತ್ತಿದೆ.
ಬೆಂಗಳೂರಿನ ಹನುಮಂತನಗರದ 50 ಅಡಿ ರಸ್ತೆಯಲ್ಲಿ ಅಪ್ಪಾಜಿ ಕ್ಯಾಂಟೀನ್ ಇದೆ. ಇಲ್ಲಿಯೇ 1 ರೂ.ಗೆ ಊಟ ನೀಡಲಾಗುತ್ತದೆ ಎಂದು ಟಿ. ಎ. ಶರವಣ ಹೇಳಿದ್ದಾರೆ.












Click it and Unblock the Notifications